ವರದಿ ಪ್ರಕಾರ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಯಶ್ ಧುಲ್ ಮತ್ತು ಇತರ ಆಟಗಾರರು ದೆಹಲಿಯ ತಮ್ಮ ಹೋಟೆಲ್‌ಗೆ ತಲುಪಿದಾಗ, ಅವರು ತಮ್ಮ ಕಿಟ್ ಬ್ಯಾಗ್‌ಗಳನ್ನು ಪರಿಶೀಲಿಸಿದರು. ಈ ವೇಳೆ ಬ್ಯಾಟ್ಗಳು ಕಳ್ಳತನವಾಗಿರುವುದು ತಿಳಿದುಬಂದಿದೆ. ಆದರೆ ಆಟಗಾರರ ಬ್ಯಾಗ್‌ಗಳನ್ನು ರಕ್ಷಿಸಿಕೊಳ್ಳುವುದು ಫ್ರಾಂಚೈಸಿಯ ಜವಾಬ್ದಾರಿಯಾಗಿರುತ್ತದೆ. ಈ ಬೆಳವಣಿಗೆಯ ಬಗ್ಗೆ ಐಜಿಐ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.