ಐಪಿಎಲ್ 2023 (ಐಪಿಎಲ್ 2023) ಮತ್ತೊಮ್ಮೆ ಯುವ ಆಟಗಾರರಿಗೆ ದೊಡ್ಡ ಉತ್ತೇಜನ ನೀಡುತ್ತಿದೆ. ಹಲವು ಆಟಗಾರರು ಸಿಕ್ಕ ಅವಕಾಶವನ್ನು ತಮ್ಮ ಆಟದ ಶೈಲಿಯಿಂದ ಮಿಂಚುತ್ತಿದ್ದರೆ, ಇನ್ನು ಕೆಲವರು ಕೆಟ್ಟ ಪ್ರದರ್ಶನ ನೀಡಿ ಅಭಿಮಾನಿಗಳ ಬೇಸರಕ್ಕೆ ಕಾರಣರಾಗಿದ್ದಾರೆ. ಐಪಿಎಲ್ ಲೀಗ್ ಹಂತ ಇದೀಗ ಕ್ಲೈಮ್ಯಾಕ್ಸ್ ತಲುಪಿದೆ. ಇನ್ನು ಏಳು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. 2023ರ ಟಿ20 ಲೀಗ್‌ನ 16ನೇ ಸೀಸನ್ನಲ್ಲಿ ಕಡಿಮೆ ಸಂಭಾವನೆ ಪಡೆದಿರುವ ಯುವ ಆಟಗಾರರು ತಮ್ಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆದರೆ ಕೋಟ್ಯಂತರ ರೂಪಾಯಿ ತೆಗೆದುಕೊಂಡ ಆಟಗಾರರು ಫ್ಲಾಪ್ ಆಗುತ್ತಿದ್ದಾರೆ. ತೆಗೆದುಕೊಂಡ ಹಣಕ್ಕೆ ನ್ಯಾಯ ಕೊಡಿಸಲು ವಿಪಲರಾಗಿದ್ದಾರೆ.
ಆದರೆ ದೀಪಕ್ ಹೂಡಾ ಐಪಿಎಲ್-2023 ಸೀಸನ್‌ನಲ್ಲಿಯೂ ಕಳಪೆ ಫಾರ್ಮ್ನಲ್ಲಿದ್ದಾರೆ. ಲಕ್ನೋ ದೀಪಕ್ ಹೂಡಾ ಅವರನ್ನು ಹರಾಜಿನಲ್ಲಿ 5.75 ಕೋಟಿ ನೀಡಿ ಖರೀದಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ವಿಫಲರಾದ ನಂತರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹೂಡಾ ಆರಂಭಿಕರಾಗಿ ಕಣಕ್ಕೆ ಇಳಿದಿದ್ದರು. ಆದರೆ ಇಲ್ಲಿಯೂ ವಿಫಲರಾದರು. ಅವರು 7 ಎಸೆತಗಳಲ್ಲಿ 5 ರನ್ ಗಳಿಸಲಷ್ಟೇ ಶಕ್ತರಾದರು. ಆದರೆ ಬೌಲರ್‌ಗಳ ಸೂಪರ್ ಬೌಲಿಂಗ್‌ನಿಂದ ಲಕ್ನೋ ಗೆಲ್ಲುವಲ್ಲಿ ಸಫಲವಾಗಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತ್ತು.
T20 ಲೀಗ್‌ನ 16 ನೇ ಋತುವಿನಲ್ಲಿ, 28 ವರ್ಷದ ದೀಪಕ್ ಹೂಡಾ 11 ಇನ್ನಿಂಗ್ಸ್‌ಗಳಲ್ಲಿ ವರು 77 ಎಸೆತಗಳನ್ನು ಎದುರಿಸಿ 7 ಸರಾಸರಿಯಲ್ಲಿ 69 ರನ್ ಮಾತ್ರ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 90 ಮಾತ್ರ. ಲಕ್ನೋದ ನಾಯಕತ್ವ ಕೃನಾಲ್ ಪಾಂಡ್ಯ ಅವರ ಕೈಯಲ್ಲಿದೆ. ಒಂದಾನೊಂದು ಕಾಲದಲ್ಲಿ ಹೂಡಾ ಮತ್ತು ಪಾಂಡ್ಯರ ನಡುವೆ ವೈರತ್ವವಿತ್ತು. ಇದರಿಂದಾಗಿ ಹೂಡಾ ತಂಡವನ್ನು ತೊರೆಯಬೇಕಾಯಿತು.
ದೀಪಕ್ ಹೂಡಾ 2015 ರಿಂದ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ 2022 ಹೊರತುಪಡಿಸಿ ಬೇರೆ ಯಾವುದೇ ಋತುವಿನಲ್ಲಿ 200 ರನ್ ಗಡಿ ದಾಟಲು ಸಾಧ್ಯವಾಗಿಲ್ಲ. ಅಂದರೆ ಅವರ ಪ್ರದರ್ಶನ ಸಾಧಾರಣವಾಗಿದೆ. ಇಡೀ ಐಪಿಎಲ್ ನಲ್ಲಿ ಅವರು 106 ಪಂದ್ಯಗಳಲ್ಲಿ 18ರ ಸರಾಸರಿಯಲ್ಲಿ 1305 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 129. ಇಷ್ಟು ಪಂದ್ಯಗಳಲ್ಲಿ ಕೇವಲ 7 ಅರ್ಧಶತಕಗಳನ್ನು ಗಳಿಸಿದ್ದಾರೆ. 64 ರನ್ ಗಳಿಸಿರುವುದೇ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಟಿ20 ಅಂತರಾಷ್ಟ್ರೀಯ ದಾಖಲೆ ಕುರಿತು ಮಾತನಾಡುವುದಾದರೆ, ದೀಪಕ್ ಹೂಡಾ 21 ಪಂದ್ಯಗಳಲ್ಲಿ 31ರ ಸರಾಸರಿಯಲ್ಲಿ 368 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಸೇರಿದೆ. ಅವರ ಸ್ಟ್ರೈಕ್ ರೇಟ್ 147. ಅವರು ಜೂನ್ 2022 ರಲ್ಲಿ ಐರ್ಲೆಂಡ್ ವಿರುದ್ಧ ಟಿ20 ಶತಕ ಗಳಿಸಿದ್ದರು. ಭಾರತ ತಂಡದ ಪರ 10 ಏಕದಿನ ಪಂದ್ಯಗಳಲ್ಲಿ ಅವಕಾಶ ಪಡೆದಿರುವ ಅವರು ಇಲ್ಲಿಯೂ ವಿಫಲರಾಗಿದ್ದಾರೆ. ಹೂಡಾ ODIಗಳಲ್ಲಿ 26 ಸರಾಸರಿಯಲ್ಲಿ 153 ರನ್ ಗಳಿಸಿದ್ದಾರೆ. ಅವರ ಬೆಸ್ಟ್ ಸ್ಕೋರ್ 33 ರನ್.
ಲಕ್ನೋ ಸೂಪರ್‌ಜೈಂಟ್ಸ್ ದೀಪಕ್ ಹೂಡಾ ಅವರನ್ನು 5.75 ಕೋಟಿಗೆ ಖರೀದಿಸಿದೆ. ಆದರೆ, ಆ ಹಣಕ್ಕೆ ನ್ಯಾಯ ಒದಗಿಸಲು ಈ ಯುವ ಬ್ಯಾಟರ್‌ಗೆ ಸಾಧ್ಯವಾಗುತ್ತಿಲ್ಲ. ಇವರ ಕೆಟ್ಟ ಪ್ರದರ್ಶನದಿಂದ ಟೀಂ ಇಂಡಿಯಾದ ಬಾಗಿಲು ಕೂಡ ಮುಚ್ಚಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಅಲ್ಲದೆ ದೀಪಕ್ ಹೂಡಾ ಭಾರತ ತಂಡದಲ್ಲಿದ್ದರೆ ನಮ್ಮ ಟೀಂ ಇಂಡಿಯಾ ಮುಳುಗಿ ಹೋಗುತ್ತಿತ್ತು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.