Deepak Chahar: ಟೀಂ ಇಂಡಿಯಾ ಸ್ಟಾರ್​ ಆಟಗಾರನ ಪತ್ನಿಗೆ ಮೋಸ, ಕೊಲೆ ಬೆದರಿಕೆ; ಕಹಾನಿ ಮೇ ಟ್ವಿಸ್ಟ್

Deepak Chahar: ದೀಪಕ್ ಚಾಹರ್ ಪತ್ನಿಗೆ ಕೊಲೆ ಬೆದರಿಕೆ ಬಂದ ಹಿನ್ನಲೆ ಕುಟುಂಬದವರು ಆಗ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಹಲವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

First published:

  • 18

    Deepak Chahar: ಟೀಂ ಇಂಡಿಯಾ ಸ್ಟಾರ್​ ಆಟಗಾರನ ಪತ್ನಿಗೆ ಮೋಸ, ಕೊಲೆ ಬೆದರಿಕೆ; ಕಹಾನಿ ಮೇ ಟ್ವಿಸ್ಟ್

    ಟೀಂ ಇಂಡಿಯಾದ ಸ್ಟಾರ್ ವೇಗಿ ದೀಪಕ್ ಚಹಾರ್ ಅವರ ಪತ್ನಿ ಜಯ ಭಾರದ್ವಾಜ್ ಅವರಿಗೆ ಅನಾಮಿಕರಿಂದ ಕೊಲೆ ಬೆದರಿಕೆ ಕರೆಗಳು ಬಂದಿದೆ ಎಂದು ವರದಿಯಾಗಿದೆ. ಅಲ್ಲದೇ 10 ಲಕ್ಷ ರೂಪಾಯಿ ಕೇಳಿದ್ದಕ್ಕೆ ಕೊಲೆ ಬೆದರಿಕೆ ಕರೆಗಳು ಬಂದಿವೆ ಎಂದು ವರದಿಯಾಗಿದೆ.

    MORE
    GALLERIES

  • 28

    Deepak Chahar: ಟೀಂ ಇಂಡಿಯಾ ಸ್ಟಾರ್​ ಆಟಗಾರನ ಪತ್ನಿಗೆ ಮೋಸ, ಕೊಲೆ ಬೆದರಿಕೆ; ಕಹಾನಿ ಮೇ ಟ್ವಿಸ್ಟ್

    ಈ ಬಗ್ಗೆ ದೀಪಕ್ ಚಾಹರ್ ತಂದೆ ಆಗ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಹಲವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

    MORE
    GALLERIES

  • 38

    Deepak Chahar: ಟೀಂ ಇಂಡಿಯಾ ಸ್ಟಾರ್​ ಆಟಗಾರನ ಪತ್ನಿಗೆ ಮೋಸ, ಕೊಲೆ ಬೆದರಿಕೆ; ಕಹಾನಿ ಮೇ ಟ್ವಿಸ್ಟ್

    ಧ್ರುವ ಪಾರಿಖ್, ಕಮಲೇಶ್ ಪಾರಿಖ್, ಪಾರಿಖ್ ಸ್ಪೋರ್ಟ್ಸ್ ಮಾಲೀಕರಾದ ಅವರು ದೀಪಕ್ ಚಾಹರ್ ಅವರ ಪತ್ನಿ ಜಯಾ ಭಾರದ್ವಾಜ್ ಅವರಿಂದ 10 ಲಕ್ಷ ರೂಪಾಯಿ ತೆಗೆದುಕೊಂಡಿದ್ದರು ಎಂದು ದೀಪಕ್ ಚಾಹರ್ ತಂದೆ ಹೇಳಿಕೊಂಡಿದ್ದಾರೆ. ವ್ಯಾಪಾರಕ್ಕೆ ಎಂದು ಹೇಳಿ 10 ಲಕ್ಷವನ್ನು ಜಯ ಭಾರದ್ವಾಜ್ ಅವರು 2022ರಲ್ಲಿ ಅಕ್ಟೋಬರ್ 7ರಂದು ಆನ್‌ಲೈನ್ ವಹಿವಾಟಿನ ಮೂಲಕ ನೀಡಿದ್ದರಂತೆ.

    MORE
    GALLERIES

  • 48

    Deepak Chahar: ಟೀಂ ಇಂಡಿಯಾ ಸ್ಟಾರ್​ ಆಟಗಾರನ ಪತ್ನಿಗೆ ಮೋಸ, ಕೊಲೆ ಬೆದರಿಕೆ; ಕಹಾನಿ ಮೇ ಟ್ವಿಸ್ಟ್

    ಬಳಿಕ ಜಯಾ ಭಾರದ್ವಾಜ್ ಅವರು ಸಾಲದ ವಿಚಾರವಾಗಿ ತಮ್ಮ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದರು. ಇದಕ್ಕಾಗಿ ಆರೋಪಿಗಳು ಜಯ ಭಾರದ್ವಾಜ್ ಅವರಿಗೆ ದೂರವಾಣಿ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    MORE
    GALLERIES

  • 58

    Deepak Chahar: ಟೀಂ ಇಂಡಿಯಾ ಸ್ಟಾರ್​ ಆಟಗಾರನ ಪತ್ನಿಗೆ ಮೋಸ, ಕೊಲೆ ಬೆದರಿಕೆ; ಕಹಾನಿ ಮೇ ಟ್ವಿಸ್ಟ್

    ಇಲ್ಲಿ ಮತ್ತೊಂದು ಟ್ವಿಸ್ಟ್ ಏನೆಂದರೆ, ಧ್ರುವ್ ಪಾರಿಖ್ ಮತ್ತು ಕಮಲೇಶ್ ಪಾರಿಖ್ ಈ ಹಿಂದೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ಸಂಪೂರ್ಣ ವಿವರ ಹೊರಬೀಳುವ ಸಾಧ್ಯತೆ ಇದೆ.

    MORE
    GALLERIES

  • 68

    Deepak Chahar: ಟೀಂ ಇಂಡಿಯಾ ಸ್ಟಾರ್​ ಆಟಗಾರನ ಪತ್ನಿಗೆ ಮೋಸ, ಕೊಲೆ ಬೆದರಿಕೆ; ಕಹಾನಿ ಮೇ ಟ್ವಿಸ್ಟ್

    ಕಳೆದ ವರ್ಷ ಜೂನ್ 1 ರಂದು ದೀಪಕ್ ಚಹಾರ್ ಮತ್ತು ಜಯ ಭಾರದ್ವಾಜ್ ವಿವಾಹವಾದರು. ಆದರೆ ಈಗ ದೀಪಕ್ ಚಹಾರ್ ಗಾಯದ ಸಮಸ್ಯೆಯಿಂದ ತಂಡದಿಂದ ದೂರವಿದ್ದಾರೆ.

    MORE
    GALLERIES

  • 78

    Deepak Chahar: ಟೀಂ ಇಂಡಿಯಾ ಸ್ಟಾರ್​ ಆಟಗಾರನ ಪತ್ನಿಗೆ ಮೋಸ, ಕೊಲೆ ಬೆದರಿಕೆ; ಕಹಾನಿ ಮೇ ಟ್ವಿಸ್ಟ್

    2022ರ ಐಪಿಎಲ್ ಋತುವಿನ ಮೊದಲು, ಅವರು ತೊಡೆಯ ಸ್ನಾಯುವಿನ ಗಾಯದಿಂದ ಬಳಲುತ್ತಿದ್ದರು. ಬಳಿಕ ಬೆನ್ನಿನ ಗಾಯಕ್ಕೆ ತುತ್ತಾದರು. ನಂತರ ಅವರು ಚೇತರಿಸಿಕೊಂಡು ತಂಡಕ್ಕೆ ಮರಳಿದರೂ ಬಳಿಕ ಮತ್ತೆ ಟಿ20 ವಿಶ್ವಕಪ್‌ಗೂ ಮುನ್ನ ಮತ್ತೊಮ್ಮೆ ಗಾಯಗೊಂಡಿದ್ದಾರೆ.

    MORE
    GALLERIES

  • 88

    Deepak Chahar: ಟೀಂ ಇಂಡಿಯಾ ಸ್ಟಾರ್​ ಆಟಗಾರನ ಪತ್ನಿಗೆ ಮೋಸ, ಕೊಲೆ ಬೆದರಿಕೆ; ಕಹಾನಿ ಮೇ ಟ್ವಿಸ್ಟ್

    ಸದ್ಯ, ದೀಪಕ್ ಚಹಾರ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್‌ನಲ್ಲಿ ಅವರು ಫಿಟ್ ಆಗುವ ಸಾಧ್ಯತೆಗಳಿವೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಅವರು ಐಪಿಎಲ್ 2023 ಸೀಸನ್‌ನಲ್ಲಿ ಪುನರಾಗಮನ ಮಾಡುವ ಸಾಧ್ಯತೆಯಿದೆ.

    MORE
    GALLERIES