IPL 2023: ಚೆನ್ನೈಗೆ ತವರಿನದ್ದೇ ದೊಡ್ಡ ತಲೆನೋವು! ಧೋನಿ ಟೆನ್ಷನ್​ ಹೆಚ್ಚಿಸಿದ ಹಾರ್ದಿಕ್​ ಬಾಯ್ಸ್​

CSK vs GT Qualifier 1: ಚೆನ್ನೈ ಸೂಪರ್ ಕಿಂಗ್ಸ್ ದಾಖಲೆಯ 12 ನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇಆಫ್‌ಗೆ ಪ್ರವೇಶಿಸಿದೆ. ಇದೀಗ ಕ್ವಾಲಿಫೈಯರ್-1ರಲ್ಲಿ ಧೋನಿ ಪಡೆ ಸಿಎಸ್‌ಕೆ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಬೇಕಾಗಿದೆ.

First published:

  • 18

    IPL 2023: ಚೆನ್ನೈಗೆ ತವರಿನದ್ದೇ ದೊಡ್ಡ ತಲೆನೋವು! ಧೋನಿ ಟೆನ್ಷನ್​ ಹೆಚ್ಚಿಸಿದ ಹಾರ್ದಿಕ್​ ಬಾಯ್ಸ್​

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿನ ನಂತರವೂ, CSK ಕೋಚ್ ಸ್ಟೀಫನ್ ಫ್ಲೆಮಿಂಗ್ ಕ್ವಾಲಿಫೈಯರ್-1 ಬಗ್ಗೆ ಚಿಂತಿತರಾಗಿದ್ದಾರೆ. ಚೆನ್ನೈ ಈ ಪಂದ್ಯವನ್ನು ತವರು ನೆಲದಲ್ಲಿ ಆಡಬೇಕಿದೆ. ಚೆನ್ನೈನಲ್ಲಿ ನಮ್ಮ ಸ್ಥಾನದ ಬಗ್ಗೆ ನಮಗೆ ಇನ್ನೂ ಖಚಿತವಾಗಿಲ್ಲ ಎಂದು ಡೆಲ್ಲಿ ವಿರುದ್ಧದ ಗೆಲುವಿನ ನಂತರ ಫ್ಲೆಮಿಂಗ್ ಹೇಳಿದ್ದಾರೆ.

    MORE
    GALLERIES

  • 28

    IPL 2023: ಚೆನ್ನೈಗೆ ತವರಿನದ್ದೇ ದೊಡ್ಡ ತಲೆನೋವು! ಧೋನಿ ಟೆನ್ಷನ್​ ಹೆಚ್ಚಿಸಿದ ಹಾರ್ದಿಕ್​ ಬಾಯ್ಸ್​

    ಪ್ರಸಕ್ತ ಋತುವಿನಲ್ಲಿ ಸಿಎಸ್‌ಕೆ ತವರಿನಲ್ಲಿ ಆಡಿದ 7 ಪಂದ್ಯಗಳಲ್ಲಿ 3ರಲ್ಲಿ ಸೋತಿದೆ. ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ತವರಿನಲ್ಲಿ ಸೋಲಿಸಿದೆ. ಎರಡೂ ತಂಡಗಳು ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿವೆ. ಐಪಿಎಲ್ 2022 ರಲ್ಲಿ ನಮ್ಮ ಪ್ರದರ್ಶನ ಉತ್ತಮವಾಗಿರಲಿಲ್ಲ, ಆದರೆ ಈ ಬಾರಿ ನಾವು ಉತ್ತಮ ಪುನರಾಗಮನ ಮಾಡಿದ್ದೇವೆ ಎಂದು ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.

    MORE
    GALLERIES

  • 38

    IPL 2023: ಚೆನ್ನೈಗೆ ತವರಿನದ್ದೇ ದೊಡ್ಡ ತಲೆನೋವು! ಧೋನಿ ಟೆನ್ಷನ್​ ಹೆಚ್ಚಿಸಿದ ಹಾರ್ದಿಕ್​ ಬಾಯ್ಸ್​

    ಇದುವರೆಗೆ ಐಪಿಎಲ್‌ನಲ್ಲಿ ತುಷಾರ್ ಪಾಂಡೆ ಉತ್ತಮ ಪ್ರದರ್ಶನ ನೀಡಿದ್ದು, ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಕಾನ್ವೆ ಮತ್ತು ಗಾಯಕ್ವಾಡ್ ಉತ್ತಮ ಬ್ಯಾಟಿಂಗ್​ ತಂಡಕ್ಕೆ ಸಹಾಯಕವಾಗಿದೆ ಎಂದಿದ್ದಾರೆ.

    MORE
    GALLERIES

  • 48

    IPL 2023: ಚೆನ್ನೈಗೆ ತವರಿನದ್ದೇ ದೊಡ್ಡ ತಲೆನೋವು! ಧೋನಿ ಟೆನ್ಷನ್​ ಹೆಚ್ಚಿಸಿದ ಹಾರ್ದಿಕ್​ ಬಾಯ್ಸ್​

    ಫ್ಲೆಮಿಂಗ್ ಇನ್ ಫಾರ್ಮ್ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೇ ಮತ್ತು ಗಾಯದಿಂದ ಮರಳಿದ ವೇಗದ ಬೌಲರ್ ದೀಪಕ್ ಚಾಹರ್ ಅವರನ್ನು ಶ್ಲಾಘಿಸಿದ್ದಾರೆ. ಗಾಯದ ಕಾರಣ ಚಾಹರ್‌ಗೆ ಕಳೆದ ಋತುವಿನಲ್ಲಿ ಒಂದೇ ಒಂದು ಪಂದ್ಯವನ್ನು ಆಡಲಾಗಲಿಲ್ಲ. ಡೆಲ್ಲಿ ವಿರುದ್ಧ ಆರಂಭಿಕ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅವರು ಸಿಎಸ್‌ಕೆ ಗೆಲುವಿನಲ್ಲಿ ಪ್ರಮುಖರಾಗಿ ಮಿಂಚಿದರು.

    MORE
    GALLERIES

  • 58

    IPL 2023: ಚೆನ್ನೈಗೆ ತವರಿನದ್ದೇ ದೊಡ್ಡ ತಲೆನೋವು! ಧೋನಿ ಟೆನ್ಷನ್​ ಹೆಚ್ಚಿಸಿದ ಹಾರ್ದಿಕ್​ ಬಾಯ್ಸ್​

    ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2023 ರಲ್ಲಿ ಚೆಪಾಕ್‌ನಲ್ಲಿ ಲಕ್ನೋ, ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿದೆ. ಅದೇ ಸಮಯದಲ್ಲಿ, ಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತಿದ್ದಾರೆ. ಟೈಟಾನ್ಸ್ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತ್ತು.

    MORE
    GALLERIES

  • 68

    IPL 2023: ಚೆನ್ನೈಗೆ ತವರಿನದ್ದೇ ದೊಡ್ಡ ತಲೆನೋವು! ಧೋನಿ ಟೆನ್ಷನ್​ ಹೆಚ್ಚಿಸಿದ ಹಾರ್ದಿಕ್​ ಬಾಯ್ಸ್​

    ಈ ಪಂದ್ಯದಲ್ಲಿ ಸಿಎಸ್‌ಕೆ ಮೊದಲು ಆಡುವಾಗ 7 ವಿಕೆಟ್‌ಗೆ 178 ರನ್ ಗಳಿಸಿತು. ರಿತುರಾಜ್ ಗಾಯಕ್ವಾಡ್ 92 ರನ್ ಗಳ ದೊಡ್ಡ ಇನಿಂಗ್ಸ್ ಆಡಿದರು. ಲೆಗ್ ಸ್ಪಿನ್ನರ್ ರಶೀದ್ ಖಾನ್ 4 ಓವರ್ ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದರು. ಅಲ್ಜಾರಿ ಜೋಸೆಫ್ ಮತ್ತು ಮೊಹಮ್ಮದ್ ಶಮಿ 2-2 ವಿಕೆಟ್ ಪಡೆದರು. ಉತ್ತರವಾಗಿ ಗುಜರಾತ್ ಟೈಟಾನ್ಸ್ 19.2 ಓವರ್‌ಗಳಲ್ಲಿ 5 ವಿಕೆಟ್‌ಗೆ ಗುರಿ ತಲುಪಿತು. ಶುಭಮನ್ ಗಿಲ್ 63 ರನ್ ಗಳಿಸಿದರು.

    MORE
    GALLERIES

  • 78

    IPL 2023: ಚೆನ್ನೈಗೆ ತವರಿನದ್ದೇ ದೊಡ್ಡ ತಲೆನೋವು! ಧೋನಿ ಟೆನ್ಷನ್​ ಹೆಚ್ಚಿಸಿದ ಹಾರ್ದಿಕ್​ ಬಾಯ್ಸ್​

    ಐಪಿಎಲ್ 2023 ರ ಒಟ್ಟಾರೆ ದಾಖಲೆಯ ಬಗ್ಗೆ ಮಾತನಾಡುತ್ತಾ, ಇದುವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ 3 ಪಂದ್ಯಗಳನ್ನು ಆಡಲಾಗಿದೆ ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ಟೈಟಾನ್ಸ್ ಎಲ್ಲವನ್ನೂ ಗೆದ್ದಿದೆ.

    MORE
    GALLERIES

  • 88

    IPL 2023: ಚೆನ್ನೈಗೆ ತವರಿನದ್ದೇ ದೊಡ್ಡ ತಲೆನೋವು! ಧೋನಿ ಟೆನ್ಷನ್​ ಹೆಚ್ಚಿಸಿದ ಹಾರ್ದಿಕ್​ ಬಾಯ್ಸ್​

    ಐಪಿಎಲ್ 2022ರ ಎರಡೂ ಪಂದ್ಯಗಳ ಬಗ್ಗೆ ಮಾತನಾಡುತ್ತಾ, ಗುಜರಾತ್ 3 ಮತ್ತು 7 ವಿಕೆಟ್‌ಗಳಿಂದ ಗೆದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಧೋನಿ ಪಡೆಗೆ ಹಾರ್ದಿಕ್ ಪಡೆಯನ್ನು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಈ ಪಂದ್ಯವು ಮೇ 23ರಂದು ಚೆನ್ನೈನ ಚೆಪಾಕ್​ನಲ್ಲಿ ನಡೆಯಲಿದೆ.

    MORE
    GALLERIES