IPL 2023: ಐಪಿಎಲ್​ ಚೊಚ್ಚಲ ಪಂದ್ಯಕ್ಕೂ ಮುನ್ನವೇ ಸಿಎಸ್​ಕೆ ತಂಡಕ್ಕೆ ಆಘಾತ, ಸ್ಟಾರ್​ ಪ್ಲೇಯರ್​ ಔಟ್​!

IPL 2023: ಇಂಡಿಯನ್ ಪ್ರೀಮಿಯರ್ ಲೀಗ್ 2023 ಮಾರ್ಚ್ 31 ರಿಂದ ಪ್ರಾರಂಭವಾಗುತ್ತಿದೆ. ಈ ಋತುವಿನ ಮೊದಲ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಗುಜರಾತ್​ ತಂಡಗಳು ಸೆಣಸಾಡಲಿದೆ.

First published:

  • 18

    IPL 2023: ಐಪಿಎಲ್​ ಚೊಚ್ಚಲ ಪಂದ್ಯಕ್ಕೂ ಮುನ್ನವೇ ಸಿಎಸ್​ಕೆ ತಂಡಕ್ಕೆ ಆಘಾತ, ಸ್ಟಾರ್​ ಪ್ಲೇಯರ್​ ಔಟ್​!

    ಇಂಡಿಯನ್ ಪ್ರೀಮಿಯರ್ ಲೀಗ್ 2023 ಮಾರ್ಚ್ 31 ರಿಂದ ಪ್ರಾರಂಭವಾಗುತ್ತಿದೆ. ಈ ಋತುವಿನ ಮೊದಲ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಗುಜರಾತ್​ ತಂಡಗಳು ಸೆಣಸಾಡಲಿದೆ.

    MORE
    GALLERIES

  • 28

    IPL 2023: ಐಪಿಎಲ್​ ಚೊಚ್ಚಲ ಪಂದ್ಯಕ್ಕೂ ಮುನ್ನವೇ ಸಿಎಸ್​ಕೆ ತಂಡಕ್ಕೆ ಆಘಾತ, ಸ್ಟಾರ್​ ಪ್ಲೇಯರ್​ ಔಟ್​!

    ಉಭಯ ತಂಡಗಳ ನಡುವಿನ ಈ ರೋಚಕ ಕದನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ಟಾಸ್​ ನಡೆಯಲಿದೆ. ಬಳಿಕ ಅರ್ಧ ಗಂಟೆಯ ನಂತರ ಅಂದರೆ 7.30ಕ್ಕೆ ಪಂದ್ಯದ ನಿಜವಾದ ರೋಚಕತೆ ಶುರುವಾಗಲಿದೆ. ಇದರ ನಡುವೆ ಚೆನ್ನೈ ದೊಡ್ಡ ಹಿನ್ನಡೆಯಾಗಿದೆ.

    MORE
    GALLERIES

  • 38

    IPL 2023: ಐಪಿಎಲ್​ ಚೊಚ್ಚಲ ಪಂದ್ಯಕ್ಕೂ ಮುನ್ನವೇ ಸಿಎಸ್​ಕೆ ತಂಡಕ್ಕೆ ಆಘಾತ, ಸ್ಟಾರ್​ ಪ್ಲೇಯರ್​ ಔಟ್​!

    ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ಮುಖೇಶ್ ಚೌಧರಿ ಐಪಿಎಲ್​ನಿಂದ ಹೊರನಡೆದಿದ್ದಾರೆ. ಮುಖೇಶ್ ಬೆನ್ನು ನೋವಿನ ಸಮಸ್ಯೆ ಹಿನ್ನಲೆ 26 ವರ್ಷದ ವೇಗಿ ಟೂರ್ನಿಗೆ ಈವರೆಗೂ ಸಂಪೂರ್ಣವಾಗಿ ಫಿಟ್​ ಆಗಿಲ್ಲ ಎಂದು ವರದಿಯಾಗಿದೆ.

    MORE
    GALLERIES

  • 48

    IPL 2023: ಐಪಿಎಲ್​ ಚೊಚ್ಚಲ ಪಂದ್ಯಕ್ಕೂ ಮುನ್ನವೇ ಸಿಎಸ್​ಕೆ ತಂಡಕ್ಕೆ ಆಘಾತ, ಸ್ಟಾರ್​ ಪ್ಲೇಯರ್​ ಔಟ್​!

    ಇದೇ ಕಾರಣಕ್ಕಾಗಿ ಮುಖೇಶ್​ ಚೌಧರಿ ಐಪಿಎಲ್​ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಕಳೆದ ಸೀಸನ್​ನಲ್ಲಿ ಚೌಧರಿ ಭರ್ಜರಿ ಪ್ರದರ್ಶನ ನೀಡಿದ್ದರು, ಅವರು ಕಳೆದ ಬಾರಿ 13 ಪಂದ್ಯಗಳಿಂದ 16 ವಿಕೆಟ್​ಗಳನ್ನು ಪಡೆದಿದ್ದರು. ಆದರೆ ಇಂತಹ ಸ್ಟಾರ್​ ಬೌಲರ್​ ಇದೀಗ ತಂಡದಿಂದ ಹೊರಗುಳಿದಿದ್ದಾರೆ.

    MORE
    GALLERIES

  • 58

    IPL 2023: ಐಪಿಎಲ್​ ಚೊಚ್ಚಲ ಪಂದ್ಯಕ್ಕೂ ಮುನ್ನವೇ ಸಿಎಸ್​ಕೆ ತಂಡಕ್ಕೆ ಆಘಾತ, ಸ್ಟಾರ್​ ಪ್ಲೇಯರ್​ ಔಟ್​!

    ಈಗಾಗಲೇ ಚೆನ್ನೈ ತಂಡದ ವೇಗಿ ಕೈಲ್ ಜೇಮಿಸನ್ ಗಾಯದ ಕಾರಣ ಈ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದರ ನಡುವೆ ಮತ್ತೋರ್ವ ಬೌಲರ್​ ತಂಡದಿಂದ ಹೊರನಡೆಯುತ್ತಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

    MORE
    GALLERIES

  • 68

    IPL 2023: ಐಪಿಎಲ್​ ಚೊಚ್ಚಲ ಪಂದ್ಯಕ್ಕೂ ಮುನ್ನವೇ ಸಿಎಸ್​ಕೆ ತಂಡಕ್ಕೆ ಆಘಾತ, ಸ್ಟಾರ್​ ಪ್ಲೇಯರ್​ ಔಟ್​!

    ಹೀಗಾಗಿ ಇದೀಗ ಚೆನ್ನೈ ತಂಡ ಮುಖೇಶ್​ ಚೌಧರಿ ಬದಲಿಗೆ ಮತ್ತೋರ್ವ ಭಾರತೀಯ ಆಟಗಾರನನ್ನು ಪ್ಲೇಯಿಂಗ್​ 11ನಲ್ಲಿ ಕಣಕ್ಕಿಳಿಸ ಬೇಕಿದೆ. ಆದರೆ ಗುಜರಾತ್​ ವಿರುದ್ಧದ ಮೊದಲ ಪಂದ್ಯದಲ್ಲಿ ಚೌಧರಿ ಬದಲಿಗೆ ಯಾರಿಗೆ ಅವಕಾಶ ಸಿಗಲಿದೆ ಎಂದು ಕಾದು ನೋಡಬೇಕಿದೆ.

    MORE
    GALLERIES

  • 78

    IPL 2023: ಐಪಿಎಲ್​ ಚೊಚ್ಚಲ ಪಂದ್ಯಕ್ಕೂ ಮುನ್ನವೇ ಸಿಎಸ್​ಕೆ ತಂಡಕ್ಕೆ ಆಘಾತ, ಸ್ಟಾರ್​ ಪ್ಲೇಯರ್​ ಔಟ್​!

    ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್​ 11: ರುತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೇ, ಅಂಬಟಿ ರಾಯುಡು, ಬೆನ್ ಸ್ಟೋಕ್ಸ್, ಎಂಎಸ್ ಧೋನಿ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ದೀಪಕ್ ಚಾಹರ್, ಮಹೇಶ್ ಟೀಕ್ಷಣ.

    MORE
    GALLERIES

  • 88

    IPL 2023: ಐಪಿಎಲ್​ ಚೊಚ್ಚಲ ಪಂದ್ಯಕ್ಕೂ ಮುನ್ನವೇ ಸಿಎಸ್​ಕೆ ತಂಡಕ್ಕೆ ಆಘಾತ, ಸ್ಟಾರ್​ ಪ್ಲೇಯರ್​ ಔಟ್​!

    ಗುಜರಾತ್ ಟೈಟಾನ್ಸ್ ಸಂಭಾವ್ಯ ಪ್ಲೇಯಿಂಗ್​ 11: ಶುಭ್​ಮನ್ ಗಿಲ್, ಮ್ಯಾಥ್ಯೂ ವೇಡ್, ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಶಿವಂ ಮಾವಿ, ಆರ್ ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಯಶ್ ದಯಾಲ್.

    MORE
    GALLERIES