ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಯೊಬ್ಬರು 'ಜಡ್ಡು ದಯವಿಟ್ಟು ಮೊದಲ ಎಸೆತದಲ್ಲೇ ಔಟ್ ಆಗಿ. ಧೋನಿ ಬ್ಯಾಟಿಂಗ್ ನೋಡಬೇಕು' ಎಂಬ ಫಲಕದೊಂದಿಗೆ ಕಾಣಿಸಿಕೊಂಡಿದ್ದರು. ಅಲ್ಲದೇ ಈ ಬಾರಿಯ ಸಿಎಸ್ಕೆ ಪಂದ್ಯದಲ್ಲಿ ಜಡೇಜಾ ಔಟ್ ಆಗುತ್ತಿದ್ದಂತೆ ಖುದ್ದು ಸಿಎಸ್ಕೆ ಅಭಿಮಾಣಿಗಳೇ ಸಂತಸಗೊಳ್ಳುತ್ತಿದ್ದಾರೆ. ಅದಕ್ಕೆ ಒಂದೇ ಒಂದು ಕಾರಣವೆಂದರೆ ಅದು ಜಡ್ಡು ಬಳಿಕ ಧೋನಿ ಬ್ಯಾಟಿಂಗ್ಗೆ ಬರುತ್ತಾರೆ ಎನ್ನುವುದಾಗಿದೆ.