ಕೊರೋನಾ ಸೋಂಕಿತರಿಗಾಗಿ ಸ್ವಂತ ಹೊಟೇಲನ್ನೇ ಆಸ್ಪತ್ರೆಯನ್ನಾಗಿಸಿದ ಕ್ರಿಸ್ಟಿಯಾನೋ ರೊನಾಲ್ಡೊ!
#CoronavirusOutbreak: ವಿದೇಶದಲ್ಲೂ ಕೊರೋನಾದಿಂದಾಗಿ ಸಾಕಷ್ಟು ಜೀವಗಳು ಕಂಬನಿ ಮಿಡಿಯುತ್ತಿದೆ. ಹೀಗಿರುವಾಗ ಫುಟ್ಬಾಲ್ ದಂತಕಥೆ ಎಂದೇ ಖ್ಯಾತರಾಗಿರುವ ರೊನಾಲ್ಡೊ ಕೊರೋನಾ ಪೀಡಿತರಿಗಾಗಿ ತನ್ನ ಹೊಟೆಲ್ ಅನ್ನು ಆಸ್ಪತ್ರೆಯಾಗಿ ಬದಲಾಯಿಸಿ ಮಾನವೀಯತೆ ಮೆರೆದಿದ್ದಾರೆ.
ಪೊರ್ಚುಗಲ್ನ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ತನ್ನ ಐಷರಾಮಿ ಹೊಟೇಲ್ಗಳನ್ನ ಕೊರೋನಾ ಪೀಡಿತರಿಗಾಗಿ ಆಸ್ಪತ್ರೆಯಾಗಿ ಮಾರ್ಪಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
2/ 16
ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಸಾವಿನ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಅತ್ತ ಚೀನಾದಲ್ಲಿ 3 ಸಾವಿರಕ್ಕೂ ಅಧಿಕ ಜನರು ಸಾವನಪ್ಪಿದ್ದಾರೆ.
3/ 16
ವಿದೇಶದಲ್ಲೂ ಕೊರೋನಾದಿಂದಾಗಿ ಸಾಕಷ್ಟು ಜೀವಗಳು ಕಂಬನಿ ಮಿಡಿಯುತ್ತಿದೆ. ಹೀಗಿರುವಾಗ ಫುಟ್ಬಾಲ್ ದಂತಕಥೆ ಎಂದೇ ಖ್ಯಾತರಾಗಿರುವ ರೊನಾಲ್ಡೊ ಕೊರೋನಾ ಪೀಡಿತರಿಗಾಗಿ ತನ್ನ ಹೊಟೆಲ್ ಅನ್ನು ಆಸ್ಪತ್ರೆಯಾಗಿ ಬದಲಾಯಿಸಿ ಮಾನವೀಯತೆ ಮೆರೆದಿದ್ದಾರೆ ಎಂಬ ವಿಚಾರ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿದೆ.
4/ 16
ಮತ್ತೊಂದೆಡೆ ಇದೊಂದು ಗಾಳಿ ಸುದ್ದಿ ಎಂಬ ವಿಚಾರವು ಹರಿದಾಡುತ್ತಿದೆ. ರೊನಾಲ್ಡೊ ಅವರು ತಮ್ಮ ಹೊಟೇಲ್ಗಳನ್ನ ಆಸ್ಪತ್ರೆಯಾಗಿ ಪರಿವರ್ತಿಸಿಲ್ಲ ಎಂಬ ವಿಚಾರವನ್ನು ಗೋಲ್ ವೆಬ್ಸೈಟ್ ಪ್ರಕಟಿಸಿದೆ.
5/ 16
ಸದ್ಯ ಪೊರ್ಚುಗಲ್ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 169ಕ್ಕೆ ಏರಿಕೆಯಾಗಿದೆ. ಅತ್ತ ಅಲ್ಲಿನ ಸರ್ಕಾರ ಕೂಡ ಈ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ.
6/ 16
ಇನ್ನು ಪೊರ್ಚುಗಲ್ನಲ್ಲಿ ಕೊರೋನಾದಿಂದಾಗಿ ಯಾವುದೇ ಸಾವು ಸಂಬಂವಿಸಿಲ್ಲ. ಆದರೂ ಮುಂಜಾಗ್ರತೆ ಕ್ರಮವಾಗಿ ಅಲ್ಲಿನ ಸರ್ಕಾರ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ.
7/ 16
ಇತ್ತೀಚೆಗೆ ರೊನಾಲ್ಡೊ ಕೂಡ ನಿಗಾ ಘಟಕದಲ್ಲಿದ್ದರು. ಆನಂತರ ಪರೀಕ್ಷೆ ಬಳಿಕ ಸೋಂಕು ತಗುಲಲಿಲ್ಲ ಎಂಬುದು ಖಾತ್ರಿಯಾಯಿತು. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭಾವನಾತ್ಮಕ ಪತ್ರ ಬರೆದಿದ್ದರು.
8/ 16
ಈ ಪತ್ರ ಭಾರೀ ವೈರಲ್ ಆಗಿತ್ತು. ಪತ್ರದಲ್ಲಿ ‘ಫುಟ್ಬಾಲಿಗನಾಗಿ, ಮಗನಾಗಿ, ತಂದೆಯಾಗಿ ಮಾತನಾಡುತ್ತಿದ್ದೇನೆ‘ ಎಂದು ಬರೆದುಕೊಂಡಿದ್ದರು.
9/ 16
ಭಾರತದಲ್ಲೂ ಕೂಡ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಭಾರತದಲ್ಲಿ 110 ಜನರಲ್ಲಿ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ. ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ.