ಪೋರ್ಚುಗಲ್ನ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ತಾನೇಗೆ ಇತರೆ ತಾರೆಗಳಿಕ್ಕಿಂತ ಭಿನ್ನ ಎಂದು ಅನೇಕ ಬಾರಿ ನಿರೂಪಿಸಿದ್ದಾರೆ. ಫುಟ್ಬಾಲ್ ಅಂಗಳದ ಆಕ್ರಮಣಕಾರಿ ಆಟಗಾರ ಎಂದು ಖ್ಯಾತಿ ಪಡೆದಿರುವ ಕ್ರಿಸ್ಟಿಯಾನೊ ಮೈದಾನದ ಹೊರಗೆ ಮಾತ್ರ ಮಾನವೀಯತೆಯ ಸರದಾರ. ಸ್ಪೇನ್ನ ಖ್ಯಾತ ಫುಟ್ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ನಿಂದ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದ ರೊನಾಲ್ಡೊ ಸದ್ಯ ಯುವೆಂಟಸ್ ಪರ ಆಡುತ್ತಿದ್ದಾರೆ.
ಒಂದು ಸಂದರ್ಭದಲ್ಲಿ ನಾನು ಪೋರ್ಚುಗಲ್ನಲ್ಲಿ ಅವರಿಗಾಗಿ ಹುಡುಕಾಟ ನಡೆಸಿದ್ದೆ. ಆದರೆ ಪ್ರಯೋಜನವಾಗಲಿಲ್ಲ. ಅಂದು ನನಗೆ ಆಹಾರ ಒದಗಿಸಿದ ಅವರನ್ನು ಭೇಟಿಯಾಗಬೇಕೆಂಬ ಮಹದಾಸೆಯಿದೆ. ಅವರನ್ನು ಮನೆಗೆ ಕರೆಸಿ ಅವರೊಂದಿಗೆ ಸ್ಪೆಷಲ್ ಡಿನ್ನರ್ ಮಾಡಬೇಕು. ಅಲ್ಲದೆ ನನ್ನ ಬಾಲ್ಯದ ಹಸಿವು ನೀಗಿಸಿದ ಅವರಿಗೆ ಧನ್ಯವಾದ ಹೇಳಬೇಕು ಎಂದು ರೊನಾಲ್ಡೊ ಸಂದರ್ಶನವೊಂದರಲ್ಲಿ ಹೇಳಿದ್ದರು. ಕೊನೆಗೂ ಸಿಕ್ಕಿದ್ರಾ ಅಡೆನಾ?
ಈ ಸಂದರ್ಶನ ಭಾರೀ ವೈರಲ್ ಕೂಡ ಆಗಿತ್ತು. ಅಲ್ಲದೆ ಇಂಟರ್ವ್ಯೂ ನಡೆಸಿದ ಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮೊರ್ಗನ್ ರೊನಾಲ್ಡೊ ಅವರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದರು. ಅದೇನೆಂದರೆ ಅಂದು ಹಸಿವು ನೀಗಿಸಿದ ಮೂವರು ಹುಡುಗಿಯರಲ್ಲಿ ಒಬ್ಬರು ಸಿಕ್ಕಿದ್ದಾರೆಂದು. ಪೋರ್ಚುಗಲ್ ರೆಡಿಯೋವೊಂದು ಪೌಲಾ ಲೆಕಾ ಎಂಬ ಮಹಿಳೆಯನ್ನು ಪತ್ತೆ ಹಚ್ಚಿದ್ದಾರೆ. ಮೆಕ್ಡೋನಾಲ್ಡ್ ಈಕೆ ಕೆಲಸಕ್ಕಿದ್ದಾಗ ಅಲ್ಲಿ ಅಡೆನಾ ಸೀನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರಂತೆ.
ರೊನಾಲ್ಡೊ ಕಥೆಯನ್ನು ಕೇಳಿದ ಪೌಲಾ ಅವರು ಹೇಳಿದ ಅಡೆನಾ ಅವರೇ ಆಗಿದ್ದಾರೆ. ಆದರೆ ಈಗ ಅವರು ನನ್ನ ಸಂಪರ್ಕದಲ್ಲಿಲ್ಲ ಎಂದು ರೆಡಿಯೋಗೆ ತಿಳಿಸಿದ್ದಾರೆ. ರಾತ್ರಿ ವೇಳೆ ಉಳಿದ ಬರ್ಗರ್ಗಾಗಿ ರೊನಾಲ್ಡೊ ಹಾಗೂ ಕೆಲ ಹುಡುಗರು ಬರುತ್ತಿದ್ದರು. ನಾವು ಅವರಿಗೆ ಅಳಿದು ಉಳಿದು ಹೋದ ಬರ್ಗರ್ಗಳನ್ನು ನೀಡುತ್ತಿದ್ದೆವು ಎಂದು ಪೌಲಾ ತಿಳಿಸಿದ್ದಾರೆ. ಇಂತಹದೊಂದು ಸುದ್ದಿ ಹೊರಬೀಳುತ್ತಿದ್ದಂತೆ ಇದೀಗ ಪೋರ್ಚುಗಲ್ನಲ್ಲಿ ಅಡೆನಾ ಹೆಸರು ಚರ್ಚೆಗೆ ಬಂದಿದೆ. ಮೂವರಲ್ಲಿ ಒಬ್ಬರು ಅದು ನಾನೇ ಅಂದಿರುವುದು ಇದೀಗ ರೊನಾಲ್ಡೊ ಹುಡುಕಾಟವನ್ನು ಜೀವಂತವಾಗಿರಿಸಿದೆ.
ರೊನಾಲ್ಡೊ ಕುಟುಂಬವನ್ನು 10 ಮಂದಿಯ ತಂಡ ಉಪಚರಿಸಿದ್ದು, ತಲಾ 2 ಸಾವಿರ ಯುರೋನಂತೆ ಈ ಟಿಪ್ಸ್ ಹಣವನ್ನು ಹಂಚಲಾಯಿತು.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಸ್ಟಿಯಾನೊ ಫೋಟೋವನ್ನು ಹಾಕಿ ರೆಸ್ಟೊರೆಂಟ್ ಸಿಬ್ಬಂದಿಗಳು ಧನ್ಯವಾದ ತಿಳಿಸಿದ್ದರು. ಈ ಫೋಟೊಗಳು ವೈರಲ್ ಆಗುತ್ತಿದ್ದಂತೆ ಮತ್ತೊಮ್ಮೆ ಮೈದಾನದ ಹೊರಗೆ ಕ್ರಿಸ್ಟಿಯಾನೊ ರೊನಾಲ್ಡೊ ಹೀರೋ ಆಗಿ ಮಿಂಚಿದ್ದರು. ಅಲ್ಲದೆ ಫುಟ್ಬಾಲ್ ಲೋಕದ ವಿಶಾಲ ಹೃದಯಿ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗಳನ್ನು ಸೂಚಿಸಿದ್ದರು.
ವಿಶ್ವಕಪ್-2018 ನಲ್ಲಿ ಪೋರ್ಚುಗಲ್ ತಂಡವನ್ನು ಮುನ್ನೆಡೆಸಿದ್ದ ರೊನಾಲ್ಡೊ ತಂಡವನ್ನು 8ರ ಘಟಕ್ಕೆ ಕೊಂಡೊಯ್ಯಲು ವಿಫಲರಾಗಿದ್ದರು. ಇದರ ಬೆನ್ನಲ್ಲೇ ನಡೆದ ಕ್ಲಬ್ ಬಿಡ್ಡಿಂಗ್ನಲ್ಲಿ 'ರಿಯಲ್ ಮ್ಯಾಡ್ರಿಡ್' ತಂಡದಿಂದ 'ಯುವೆಂಟಸ್' ತಂಡಕ್ಕೆ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದರು. ಇದರೊಂದಿಗೆ ವಿಶ್ವ ಫುಟ್ಬಾಲ್ನ ಅತೀ ಬೇಡಿಕೆಯ ಆಟಗಾರ ಎಂಬ ಖ್ಯಾತಿ ಇದೀಗ ರೊನಾಲ್ಡೊ ಪಾಲಾಗಿದೆ.
ಇಟಲಿಯ 'ಜುವೆಂಟಸ್' ಕ್ಲಬ್ ಬರೊಬ್ಬರಿ 100 ಮಿಲಿಯನ್ ಯೂರೋಗಳನ್ನು ನೀಡಿ ರೊನಾಲ್ಡೋ ಅವರನ್ನು ಖರೀದಿ ಮಾಡಿದೆ. ಅಲ್ಲದೆ ಪ್ರತೀ ಟೂರ್ನಿಗೆ ಸುಮಾರು 30 ಮಿಲಿಯನ್ ಯೂರೋಗಳನ್ನು ಕ್ರಿಸ್ಟಿಯಾನೊಗೆ ನೀಡಲು ಯುವೆಂಟಸ್ ತಂಡ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಕ್ರಿಸ್ಟಿಯಾನೊ ರೊನಾಲ್ಡೊ ಎಲ್ಲರನ್ನೂ ಆಕರ್ಷಿಸುವುದು ಅವರ ಮಾನವೀಯ ಗುಣಗಳಿಂದ ಎಂಬುದೇ ಸತ್ಯ.
ಮನಸ್ಸು ಮಾಡಿದರೆ ಯಾವುದೇ ಬ್ರಾಂಡ್ ಅಂಬಾಸಿಡರ್ ಆಗಿ ಮಿಂಚಬಹುದಾದ ಕ್ರಿಸ್ಟಿಯಾನೊ ಆರಿಸಿಕೊಂಡಿರುವುದು ಮೂರು ಸಂಸ್ಥೆಗಳ ರಾಯಭಾರಿ ಪಟ್ಟವನ್ನು ಎಂಬುದು ವಿಶೇಷ. 'ಸೇವ್ ದಿ ಚೈಲ್ಡ್', 'ಯುನಿಸೆಫ್' ಮತ್ತು 'ವರ್ಲ್ಡ್ವಿಶ್' ಎಂಬ ಮಕ್ಕಳಿಗಾಗಿ ಸೇವೆ ಸಲ್ಲಿಸುವ ಸಂಘಟನೆಗಳ ರಾಯಭಾರಿಯಾಗಿದ್ದಾರೆ. ಮಕ್ಕಳ ಬಾಲ್ಯ ಉತ್ತಮವಾಗಿದ್ದರೆ ಭವಿಷ್ಯದ ಪ್ರಪಂಚ ಅತ್ಯುತ್ತಮವಾಗಿರುತ್ತದೆ ಎಂದು ಸಾರುವ ವಿಶ್ವ ಮೂರು ಮಕ್ಕಳ ಸಂಘಟನೆಯ ರಾಯಭಾರಿ ಆಗಿದ್ದಾರೆ. ಇದು ಸಮಾಜದ ಮೇಲಿನ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ.
ಇದಲ್ಲದೆ, 2011 ರಲ್ಲಿ ದೊರೆತ 'ಗೋಲ್ಡನ್ ಬೂಟ್' ಅನ್ನು ಕ್ರಿಸ್ಟಿಯಾನೊ ಹರಾಜಿಗಿಟ್ಟಿದ್ದರು. ಇದರಿಂದ ಬಂದ 1.2 ಮಿಲಿಯನ್ ಪೌಂಡ್ ಮೊತ್ತವನ್ನು ಯುದ್ದ ಪೀಡಿತ ಪ್ಯಾಲೇಸ್ತೀನ್ನ ಶಾಲೆಗಳ ಪುನರ್ಸ್ಥಾಪನೆಗೆ ದಾನ ಮಾಡಿದ್ದರು. 2013 ರಲ್ಲಿ ಲಭಿಸಿದ ಫುಟ್ಬಾಲ್ ಲೋಕದ ಆಸ್ಕರ್ ಎಂದು ಕರೆಯಲ್ಪಡುವ 'ಬಾಲನ್ ಡಿ ಒರ್' ಪ್ರಶಸ್ತಿಯನ್ನು ಕೂಡ ಹರಾಜಿಗೆ ನೀಡಿದ್ದರು. ಇದರಿಂದ ದೊರೆತ 5.3 ಲಕ್ಷ ಪೌಂಡ್ ಅನ್ನು 'ಮೇಕ್ ಎ ವಿಶ್' ಎಂಬ ಸಂಸ್ಥೆಗೆ ಕೊಟ್ಟಿದ್ದರು. ಅನಾರೋಗ್ಯ ಪೀಡಿತ ಮಕ್ಕಳ ಶ್ರುಶೂಷೆಯಲ್ಲಿ ಈ ಸಂಸ್ಥೆಯು ಪ್ರಮುಖ ಪಾತ್ರವಹಿಸುತ್ತದೆ ಎಂಬುದೇ ವಿಶೇಷ.
ಹಾಗೆಯೇ, 2014 ರಲ್ಲಿ ರಿಯಲ್ ಮ್ಯಾಡ್ರಿಡ್ ತಂಡಕ್ಕೆ 10ನೇ ಚಾಂಪಿಯನ್ ಟ್ರೋಫಿ ಗೆದ್ದು ಕೊಡುವಲ್ಲಿ ಕ್ರಿಸ್ಟಿಯಾನೊ ಪಾತ್ರ ಬಲು ದೊಡ್ಡದು. ಈ ಸಂದರ್ಭದಲ್ಲಿ 'ರಿಯಲ್ ಮ್ಯಾಡ್ರಿಡ್' ಕ್ಲಬ್ ತನ್ನ ಆಟಗಾರರಿಗೆ 4.5 ಲಕ್ಷ ಪೌಂಡ್ ಮೊತ್ತವನ್ನು ಬೋನಸ್ ಆಗಿ ನೀಡಿದ್ದರು. ಈ ಮೊತ್ತವನ್ನು ತಾನು ರಾಯಭಾರಿಯಾಗಿರುವ ಮೂರು ಸಂಘಟನೆಗಳಿಗೆ ರೊನಾಲ್ಡೊ ದಾನವಾಗಿ ನೀಡಿದ್ದರು. ಸಾಮಾಜಿಕ ತಾಣದಲ್ಲಿ ವಿವಾದಕ್ಕೀಡಾಗಿದ್ದ 'ಐಸ್ ಬಕೆಟ್' ಚಾಲೆಂಜ್ನಲ್ಲೂ ಕ್ರಿಸ್ಟಿಯಾನೊ ಭಾಗವಹಿಸಿದ್ದರು. ಆದರೆ ಇದರಿಂದ ಸಿಕ್ಕಿರುವ ಫಂಡ್ ಅನ್ನು 'ಮೊಟೊರ್ ನ್ಯೂರೊನ್' ಕಾಯಿಲೆ ಬಾಧಿಸಿದವರ ಚಿಕಿತ್ಸೆಗೆ ರೊನಾಲ್ಡೊ ದಾನ ಮಾಡಿದ್ದರು.
ಫುಟ್ಬಾಲ್ ಮೈದಾನದಲ್ಲಿ ಸ್ಟೈಲಿಸ್ಟ್ ಲುಕ್ಗಳಿಂದಲೇ ಕೋಟಿ ಸಂಪಾದಿಸುವ ಆಟಗಾರರಲ್ಲಿ ಕ್ರಿಸ್ಟಿಯಾನೊ ಮಾತ್ರ ಭಿನ್ನವಾಗಿ ನಿಲ್ಲುತ್ತಾರೆ. ಸದ್ಯದ ಟ್ರೆಂಡ್ ಆಗಿರುವ ಟ್ಯಾಟೂ ಹಾಕಿಸಿಕೊಳ್ಳುವಲ್ಲಿ ರೊನಾಲ್ಡೊ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಅಸಲಿ ಕಾರಣವೇ ಬೇರೆ. ದೇಹಕ್ಕೆ ಟ್ಯಾಟೂ ಹಾಕಿಸಿಕೊಂಡರೆ ರಕ್ತದಾನ ಮಾಡಲು ಕೆಲ ವಿಷಯಗಳು ಅಡ್ಡಿಯಾಗುತ್ತದೆ. ಈ ಏಕ ಕಾರಣದಿಂದ ಕ್ರಿಸ್ಟಿಯಾನೊ ಟ್ಯಾಟು ಹಾಕಿಸಲು ಮುಂದಾಗಿರಲಿಲ್ಲ. ಒಂದು ಬಾರಿ ಟ್ಯಾಟು ಹಾಕಿಸಿಕೊಂಡರೆ 6 ತಿಂಗಳು ಕಾಲ ರಕ್ತದಾನ ಮಾಡುವಂತಿಲ್ಲ ಎಂದೇಳಾಗುತ್ತದೆ. ಆದರೆ ನಿರಂತರ ರಕ್ತದಾನ ಮಾಡುವ ಕ್ರಿಸ್ಟಿಯಾನೊ ಟ್ಯಾಟು ಹಾಕಿಸಿದರೆ ತುರ್ತು ಸಂದರ್ಭದಲ್ಲಿ ರಕ್ತ ನೀಡಲು ಸಾಧ್ಯವಿಲ್ಲ ಎಂಬುದು ಅರಿತಿದ್ದಾರೆ. ಇದು ಕ್ರಿಸ್ಟಿಯಾನೊ ರೊನಾಲ್ಡೊ ರಕ್ತದಾನದ ಮಹತ್ವವನ್ನು ಎತ್ತಿ ಹಿಡಿದಿರುವುದಕ್ಕೆ ಸಾಕ್ಷಿ.
ಕ್ಲಬ್ ಪರ ಆಡುವ ಆಟಗಾರರಿಗೆ ಮೋಜು ಮಸ್ತಿಗೆ ಸದಾ ಅವಕಾಶವಿರುತ್ತದೆ. ಆದರೆ ರೊನಾಲ್ಡೊ ಮಾತ್ರ ಯಾವತ್ತೂ ಮದ್ಯಪಾನ ಮಾಡಲ್ಲ. ಏಕೆಂದರೆ ತನ್ನ ತಂದೆ ಮದ್ಯಪಾನಿಯಾಗಿದ್ದರು, ಇದರಿಂದ ನೊಂದಿರುವ ಕ್ರಿಸ್ಟಿಯಾನೊ ಯಾವತ್ತೂ ಮದ್ಯಪಾನವನ್ನು ಬೆಂಬಲಿಸುವುದಿಲ್ಲ ಎಂಬುದೇ ಅಸಲಿ ಸತ್ಯ. ತನ್ನ ತಾಯಿಯ ಕ್ಯಾನ್ಸರ್ಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯಲ್ಲಿ ಕಳೆಯುತ್ತಿರುವ ರೋಗಿಗಳಾಗಿ 1.2 ಲಕ್ಷ ಪೌಂಡ್ ಅನ್ನು ಕ್ರಿಸ್ಟಿಯಾನೊ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದರು.