Sandeep Lamichhane: ಅತ್ಯಾಚಾರ ಮಾಡಿ ಜೈಲು ಸೇರಿದ್ದ ಸ್ಟಾರ್ ಕ್ರಿಕೆಟರ್ಗೆ ಜಾಮೀನು! ಈ ಬಾರಿ ಮತ್ತೆ ಐಪಿಎಲ್ ಆಡ್ತಾರಾ?
Sandeep Lamichhane: ನೇಪಾಳದ ಲೆಗ್ ಸ್ಪಿನ್ನರ್ ಸಂದೀಪ್ ಲಮಿಚಾನೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಕಳೆದ ಕೆಲ ತಿಂಗಳು ಹಿಂದೆ ಬಂಧಿಸಲಾಗಿತ್ತು. ಇದೀಗ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ ನೇಪಾಳದ ಸ್ಪಿನ್ ಬೌಲರ್ ಸಂದೀಪ್ ಲಾಮಿಚಾನೆ ನೇಪಾಳ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಲಮಿಚಾನೆ ಮೇಲಿದೆ.
2/ 8
ನೇಪಾಳದ ಪಟಾನ್ ಹೈಕೋರ್ಟ್ ಲಾಮಿಚಾನೆಗೆ 2 ಲಕ್ಷ ರೂಪಾಯಿ ಬಾಂಡ್ ಮೇಲೆ ಜಾಮೀನು ನೀಡಿದೆ. ಸಂದೀಪ್ಗೆ ಜಾಮೀನು ಸಿಕ್ಕಿದ್ದು, ವಿದೇಶಕ್ಕೆ ತೆರಳದಂತೆ ನಿರ್ಬಂಧವಿದೆ. ಅವರು ಇಂದು ಬಿಡುಗಡೆಯಾಗಲಿದ್ದಾರೆ.
3/ 8
ಸೆಪ್ಟೆಂಬರ್ 8 ರಂದು ನೇಪಾಳದ ನ್ಯಾಯಾಲಯವು ಲಾಮಿಚಾನೆಗೆ ಬಂಧನ ವಾರಂಟ್ ಹೊರಡಿಸಿತ್ತು. ಸಂದೀಪ್ ಲಮಿಚಾನೆ ಕಠ್ಮಂಡುವಿನ ಹೋಟೆಲ್ನಲ್ಲಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದಾರೆ. 22 ವರ್ಷದ ಲಮಿಚಾನೆ ತನಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಬಾಲಕಿ ಆಗಸ್ಟ್ನಲ್ಲಿ ಪ್ರಕರಣ ದಾಖಲಿಸಿದ್ದಳು.
4/ 8
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆಗಸ್ಟ್ 21 ರಂದು ಈ ಹುಡುಗಿಯನ್ನು ಕಠ್ಮಂಡುವಿನ ಅನೇಕ ಸ್ಥಳಗಳಿಗೆ ಕರೆದೊಯ್ಯಲಾಯಿತು. ಅದೇ ರಾತ್ರಿ ಆಕೆಗೆ ಹೋಟೆಲ್ನಲ್ಲಿ ದೈಹಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿತ್ತು.
5/ 8
ನ್ಯಾಯಮೂರ್ತಿಗಳಾದ ಧ್ರುವರಾಜ್ ನಂದಾ ಮತ್ತು ರಮೇಶ್ ಧಾಕಲ್ ಅವರ ಜಂಟಿ ಪೀಠವು ಕಠ್ಮಂಡು ಜಿಲ್ಲಾ ನ್ಯಾಯಾಲಯದ ಮಾಜಿ ಐಪಿಎಲ್ ಆಟಗಾರ ಲಾಮಿಚಾನೆಯನ್ನು 2 ಲಕ್ಷ ರೂಪಾಯಿಗಳ ಶ್ಯೂರಿಟಿ ಮೇಲೆ ಬಿಡುಗಡೆ ಮಾಡಿದೆ.
6/ 8
ಅಕ್ಟೋಬರ್ನಲ್ಲಿ ಫೇಸ್ಬುಕ್ನಲ್ಲಿ ತನಿಖೆಯ ಪ್ರತಿ ಹಂತದಲ್ಲೂ ಸಂಪೂರ್ಣವಾಗಿ ಸಹಕರಿಸುವುದಾಗಿ ಮತ್ತು ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಕಾನೂನು ಹೋರಾಟ ನಡೆಸುವುದಾಗಿ ಕ್ರಿಕೆಟಿಗ ಸಂದೀಪ್ ಲಾಮಿಚಾನೆ ಬರೆದುಕೊಂಡಿದ್ದರು.
7/ 8
ಈ ಪ್ರಕರಣದಲ್ಲಿ ನ್ಯಾಯಾಲಯದ ಅಂತಿಮ ಆದೇಶದವರೆಗೆ ಲಮಿಚಾನೆ ದೇಶ ತೊರೆಯದಂತೆ ನಿರ್ಬಂಧ ಹೇರಲಾಗಿದೆ. ಲೆಗ್ ಸ್ಪಿನ್ನರ್ ಲಮಿಚಾನೆ ನೇಪಾಳದ ಅತ್ಯಂತ ಉನ್ನತ ಮಟ್ಟದ ಕ್ರಿಕೆಟಿಗ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಿದ ನೇಪಾಳದ ಮೊದಲ ಕ್ರಿಕೆಟಿಗ ಅವರು.
8/ 8
ಸಂದೀಪ್ ನೇಪಾಳ ಪರ 30 ಏಕದಿನ ಹಾಗೂ 44 ಟಿ20 ಪಂದ್ಯಗಳನ್ನು ಆಡಿದ್ದಾರೆ.ಇದರಲ್ಲಿ ಅವರು ಕ್ರಮವಾಗಿ 69 ಮತ್ತು 85 ವಿಕೆಟ್ಗಳನ್ನು ಪಡೆದಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 9 ಪಂದ್ಯಗಳಿಂದ 13 ವಿಕೆಟ್ಗಳನ್ನು ಕಬಳಿಸಿ ಮಿಂಚಿದ್ದರು.