ಭಾರತದ ಆಲ್ ರೌಂಡರ್ ಮತ್ತು T20 ತಂಡದ ನಾಯಕ ಹಾರ್ದಿಕ್ ಫೆಬ್ರವರಿ 14. 2023 ರಂದು ಮತ್ತೊಮ್ಮೆ ವಿವಾಹವಾಗಿದ್ದಾರೆ. ಈ ಬಾರಿ ಉದಯಪುರದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಮದುವೆ ನಡೆದಿದೆ. ಮದುವೆಯ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸ್ಟಾರ್ ಕ್ರಿಕೆಟರ್, 3 ವರ್ಷಗಳ ಹಿಂದೆ ನಾವು ಮಾಡಿದ ಭರವಸೆಯನ್ನು ಪುನರಾವರ್ತಿಸಿ, ಈ ಪ್ರೀತಿಯ ದ್ವೀಪದಲ್ಲಿ ಪ್ರೇಮಿಗಳ ದಿನವನ್ನು ಆಚರಿಸಿದ್ದೇವೆ. ಈ ವಿಶೇಷ ಸಂದರ್ಭವನ್ನು ನಮ್ಮೊಂದಿಗೆ ಆಚರಿಸಲು ಕುಟುಂಬ ಮತ್ತು ಸ್ನೇಹಿತರನ್ನು ಭಾಗವಹಿಸಿ ನಮ್ಮ ಆಶೀರ್ವದಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಜೈಸಮಂದ್ ರೆಸಾರ್ಟ್ ಹೋಟೆಲ್‌ನಲ್ಲಿ ವಿವಾಹವಾಗಿದ್ದಾರೆ. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾರ್ದಿಕ್ ಕಡೆಯವರು ಗಾಢ ನೀಲಿ ಬಣ್ಣದ ಸೂಟ್‌ಗಳನ್ನು ಧರಿಸಿದ್ದರೆ, ಸ್ಟ್ಯಾಂಕೋವಿಕ್ ಕಡೆಯವರು ಮಸುಕಾದ ಗುಲಾಬಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದರು.
ದೀರ್ಘ ಕಾಲದ ಬೆನ್ನು ನೋವಿನ ಸಮಸ್ಯೆ ಎದುರಿಸಿದ್ದ ಹಾರ್ದಿಕ್ ಪಾಂಡ್ಯ ಸರ್ಜರಿಗೆ ಒಳಗಾಗಿ ಸ್ವಲ್ಪ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ನಂತರ ಐಪಿಎಲ್ 2022 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ನಾಯಕನಾಗಿ ಟ್ರೋಫಿ ಗೆದ್ದುಕೊಟ್ಟು ಭರ್ಜರಿ ಕಮ್‌ಬ್ಯಾಕ್ ಮಾಡಿದ್ದರು. ಇದೀಗ ಭಾರತ ಟಿ20 ತಂಡದ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿ ಮಿಂಚುತ್ತಿದ್ದಾರೆ. ಭಾರತ ತಂಡ ಆಸ್ಟ್ರೇಲಿಯಾ ಎದುರು ಟೆಸ್ಟ್ ಕ್ರಿಕೆಟ್ ಸರಣಿಯನ್ನು ಆಡುತ್ತಿದೆ. ಟೆಸ್ಟ್ ಕ್ರಿಕೆಟ್ ತಂಡದಿಂದ ಹೊರಬಿದ್ದಿರುವ ಹಾರ್ದಿಕ್, ಬಿಡುವಿನ ಸಮಯದಲ್ಲಿ ಪ್ರೇಮಿಗಳ ದಿನಾಚರಣೆಯ ದಿನದಂದು ಅದ್ಧೂರಿ ವಿವಾಹವಾಗಿದ್ದಾರೆ.