IPL 2021: CSK ಪರ ಆಡ್ತಾರಾ RCB ಸ್ಪಿನ್ನರ್..?

ಧೋನಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗಿದ್ದ ವೇಳೆ ಚಹಲ್ ಅತ್ಯುತ್ತಮ ಯಶಸ್ಸು ಸಾಧಿಸಿದ್ದರು. ಧೋನಿ ನಿವೃತ್ತಿ ಬಳಿಕ ಚಹಲ್ ಸ್ಪಿನ್ ಮೋಡಿ ತುಸು ಮಂಕಾಯಿತು.

First published:

  • 17

    IPL 2021: CSK ಪರ ಆಡ್ತಾರಾ RCB ಸ್ಪಿನ್ನರ್..?

    ಆರ್​ಸಿಬಿ ತಂಡದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಪ್ರಸ್ತುತ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಕೊನೆಯ ಬಾರಿಗೆ ಐಪಿಎಲ್ 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು.

    MORE
    GALLERIES

  • 27

    IPL 2021: CSK ಪರ ಆಡ್ತಾರಾ RCB ಸ್ಪಿನ್ನರ್..?

    ಇಂಗ್ಲೆಂಡ್ ಪ್ರವಾಸದಲ್ಲಿ ಚಹಲ್ ಅವರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇದಾಗ್ಯೂ ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಮತ್ತು ಟಿ 20 ತಂಡಗಳಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಈ ನಡುವೆ ವೆಬ್​ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಚಹಲ್ ಮನಬಿಚ್ಚಿ ಮಾತನಾಡಿದ್ದಾರೆ.

    MORE
    GALLERIES

  • 37

    IPL 2021: CSK ಪರ ಆಡ್ತಾರಾ RCB ಸ್ಪಿನ್ನರ್..?

    ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಚಹಲ್ ಸದ್ಯ ಆರ್​ಸಿಬಿ ತಂಡದ ಸ್ಟಾರ್ ಸ್ಪಿನ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಇದಾಗ್ಯೂ ಈ ಬಾರಿಯ ಐಪಿಎಲ್​ನಲ್ಲಿ 7 ಪಂದ್ಯಗಳಲ್ಲಿ ಚಹಲ್ 4 ವಿಕೆಟ್ ಕಬಳಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದರು. ಹೀಗಾಗಿ ಮುಂದಿನ ಸೀಸನ್​ಗಾಗಿ ಆರ್​ಸಿಬಿ ಚಹಲ್ ಅವರನ್ನು ಉಳಿಸಿಕೊಳ್ಳೋದು ಡೌಟ್ ಎನ್ನಲಾಗುತ್ತಿದೆ.

    MORE
    GALLERIES

  • 47

    IPL 2021: CSK ಪರ ಆಡ್ತಾರಾ RCB ಸ್ಪಿನ್ನರ್..?

    ಹೀಗಾಗಿಯೇ ಚಹಲ್​ ಅವರಿಗೆ ಮುಂದೆ ಯಾವ ತಂಡದ ಪರ ಆಡಲು ಬಯಸುತ್ತೀರಿ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರಿಸಿದ ಚಹಲ್, ಮುಂದೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 57

    IPL 2021: CSK ಪರ ಆಡ್ತಾರಾ RCB ಸ್ಪಿನ್ನರ್..?

    ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡದಿದ್ದರೆ, ನಾನು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಆಡಲು ಬಯಸುತ್ತೇನೆ ಎಂದಿದ್ದಾರೆ. ಇದಕ್ಕೆ ಮತ್ತೊಂದು ಕಾರಣ ಕೂಡ ಇದೆ.

    MORE
    GALLERIES

  • 67

    IPL 2021: CSK ಪರ ಆಡ್ತಾರಾ RCB ಸ್ಪಿನ್ನರ್..?

    ಧೋನಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗಿದ್ದ ವೇಳೆ ಚಹಲ್ ಅತ್ಯುತ್ತಮ ಯಶಸ್ಸು ಸಾಧಿಸಿದ್ದರು. ಧೋನಿ ನಿವೃತ್ತಿ ಬಳಿಕ ಚಹಲ್ ಸ್ಪಿನ್ ಮೋಡಿ ತುಸು ಮಂಕಾಯಿತು. ಇದೀಗ ಮತ್ತೊಮ್ಮೆ ಟ್ರ್ಯಾಕ್ ತಪ್ಪಿರುವ ಚಹಲ್ ಸಿಎಸ್​ಕೆ ಪರ ಆಡುವ ಮೂಲಕ ಲಯಕ್ಕೆ ಮರಳುವ ಪ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗುತ್ತಿದೆ.

    MORE
    GALLERIES

  • 77

    IPL 2021: CSK ಪರ ಆಡ್ತಾರಾ RCB ಸ್ಪಿನ್ನರ್..?

    ಮುಂದಿನ ಸೀಸನ್​ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಹೀಗಾಗಿ 3 ಆಟಗಾರರನ್ನು ರಿಟೈನ್ ಮಾಡುವ ಅವಕಾಶ ಮಾತ್ರ ಇರುತ್ತದೆ. ಇದಾಗ್ಯೂ ಇಬ್ಬರ ಮೇಲೆ ಆರ್​ಟಿಎಂ ಕಾರ್ಡ್​ ಬಳಸಿಕೊಳ್ಳಬಹುದು. ಆರ್​ಸಿಬಿ ಆಯ್ಕೆ ಮಾಡಲಿರುವ ಈ ಐದು ಆಟಗಾರರಲ್ಲಿ ಚಹಲ್ ಸ್ಥಾನ ಪಡೆಯದಿದ್ದರೆ, ಸಿಎಸ್​ಕೆ ತಂಡದಲ್ಲಿ ಚಹಲ್ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.

    MORE
    GALLERIES