ಸೆಹ್ವಾಗ್ ದಾಖಲೆ ಮುರಿಯುವುದು ಯುವರಾಜ್ ಸಿಂಗ್ ಗುರಿಯಾಗಿತ್ತು..!
Yuvraj singh: ಏಕದಿನ ಕ್ರಿಕೆಟ್ನಲ್ಲಿ ಡಬಲ್ ಸೆಂಚುರಿ ಕಷ್ಟಸಾಧ್ಯ ಎನ್ನುತ್ತಿದ್ದ ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕಗಳು ಮೂಡಿಬಂದಿದ್ದವು. ಅದರ ಬೆನ್ನಲ್ಲೇ ಸೆಹ್ವಾಗ್ ದಾಖಲೆಯ ಆಯುಷ್ಯದ ಬಗ್ಗೆ ಚರ್ಚೆಗಳು ಶುರುವಾಗಿದ್ದವು.
2010ರಲ್ಲಿ ಪುರುಷರ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಇತಿಹಾಸ ಪುಟದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದ್ದರು.
2/ 9
ಈ ವಿಶ್ವದಾಖಲೆಗೆ ವರುಷ ತುಂಬುತ್ತಿದ್ದಂತೆ ನಜಾಫ್ಘಡದ ಸುಲ್ತಾನ್ ವೀರೇಂದ್ರ ಸೆಹ್ವಾಗ್ ವೆಸ್ಟ್ ಇಂಡೀಸ್ ವಿರುದ್ಧ 219 ರನ್ ಚಚ್ಚುವ ಮೂಲಕ ಸಚಿನ್ ದಾಖಲೆಯನ್ನು ಅಳಿಸಿ ಹಾಕಿದ್ದರು.
3/ 9
ಅಲ್ಲಿವರೆಗೂ ಏಕದಿನ ಕ್ರಿಕೆಟ್ನಲ್ಲಿ ಡಬಲ್ ಸೆಂಚುರಿ ಕಷ್ಟಸಾಧ್ಯ ಎನ್ನುತ್ತಿದ್ದ ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕಗಳು ಮೂಡಿಬಂದಿದ್ದವು. ಅದರ ಬೆನ್ನಲ್ಲೇ ಸೆಹ್ವಾಗ್ ದಾಖಲೆಯ ಆಯುಷ್ಯದ ಬಗ್ಗೆ ಚರ್ಚೆಗಳು ಶುರುವಾಗಿದ್ದವು.
4/ 9
ಈ ಗುರಿಯನ್ನು ಬೆನ್ನತ್ತಲು ಮೊದಲು ಬಯಸಿದ್ದು ಟೀಮ್ ಇಂಡಿಯಾದ ಆಲ್ರೌಂಡರ್ ಯುವರಾಜ್ ಸಿಂಗ್ ಅಂತೆ. ಯುವಿಗೆ ಸೆಹ್ವಾಗ್ ಅವರ ದಾಖಲೆಯನ್ನು ಮುರಿಯುವ ಆಸೆಯಿತ್ತು ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
5/ 9
219 ರನ್ಗಳ ದಾಖಲೆಯನ್ನು ಅಳಿಸಿ ಹಾಕಿ ಹೊಸ ಇತಿಹಾಸ ರಚಿಸಲು ಯುವರಾಜ್ ಸಿಂಗ್ ಬಯಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ ಎಂದು ಅಶ್ವಿನ್ ಜೊತೆಗಿನ ಚಿಟ್ ಚಾಟ್ ವೇಳೆ ರೋಹಿತ್ ಬಹಿರಂಗಪಡಿಸಿದರು.
6/ 9
ಇದಾಗ್ಯೂ ನಾನು 2013 ರಲ್ಲಿ ಭರ್ಜರಿಯಾಗಿ ಆಟವಾಡಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 209 ರನ್ ಬಾರಿಸಲು ಯಶಸ್ವಿಯಾಗಿದ್ದೆ. ಆದರೆ ಅಂದು ನನಗೆ ವೀರು ದಾಖಲೆಯನ್ನು ಮುರಿಯಲಾಗಿರಲಿಲ್ಲ ರೋಹಿತ್ ತಿಳಿಸಿದರು.
7/ 9
ಆದರೆ ನಾನು 2014ರಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಬಾರಿಸುವ ಮೂಲಕ ವಿಶ್ವ ದಾಖಲೆ ಬರೆದೆ. ಸೆಹ್ವಾಗ್ ದಾಖಲೆಯನ್ನು ಮೀರಿ ಕ್ರಿಕೆಟ್ ಇತಿಹಾಸದಲ್ಲೇ ಮೈಲಿಗಲ್ಲು ಸೃಷ್ಟಿಸಿದೆ ಎಂದು ರೋಹಿತ್ ನೆನಪಿಸಿಕೊಂಡರು.
8/ 9
ಇದಾಗಿ 2017 ರಲ್ಲಿ ಶ್ರೀಲಂಕಾ ವಿರುದ್ಧ ಮತ್ತೊಂದು ದ್ವಿಶತಕ ಸಿಡಿಸಿದ ರೋಹಿತ್ ಅಜೇಯ 208 ರನ್ಗಳಿಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಮೂರು ಡಬಲ್ ಸೆಂಚುರಿ ಸಿಡಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಹಿಟ್ ಮ್ಯಾನ್ ಪಾತ್ರರಾಗಿದ್ದಾರೆ.
9/ 9
ಇನ್ನು ಟೀಮ್ ಇಂಡಿಯಾ ಪರ 304 ಏಕದಿನ ಪಂದ್ಯಗಳನ್ನು ಆಡಿರುವ ಯುವರಾಜ್ ಸಿಂಗ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 150 ರನ್.