Yuvraj Singh: ಸ್ಟುವರ್ಟ್ ಬ್ರಾಡ್ 500 ವಿಕೆಟ್ ಸಾಧನೆ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದೇನು ನೋಡಿ!

ಭಾರತ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್​ ಯುವರಾಜ್ ಸಿಂಗ್ ಕೂಡ ಬ್ರಾಡ್ ಸಾಧನೆ ಬಗ್ಗೆ ಮನಮುಟ್ಟುವ ಸಂದೇಶ ಬರೆದಿದ್ದಾರೆ.

First published:

  • 19

    Yuvraj Singh: ಸ್ಟುವರ್ಟ್ ಬ್ರಾಡ್ 500 ವಿಕೆಟ್ ಸಾಧನೆ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದೇನು ನೋಡಿ!

    ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನ ಇಂಗ್ಲೆಂಡ್ ತಂಡ ವೇಗಿ ಸ್ಟುವರ್ಟ್ ಬ್ರಾಡ್ 500ನೇ ಟೆಸ್ಟ್ ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

    MORE
    GALLERIES

  • 29

    Yuvraj Singh: ಸ್ಟುವರ್ಟ್ ಬ್ರಾಡ್ 500 ವಿಕೆಟ್ ಸಾಧನೆ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದೇನು ನೋಡಿ!

    ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್​ಗಳನ್ನು ಪಡೆದ ವಿಶ್ವದ 4ನೇ ವೇಗದ ಬೌಲರ್ ಹಾಗೂ ಒಟ್ಟಾರೆ 7ನೇ ಬೌಲರ್ ಆಗಿ ಬ್ರಾಡ್ ದೀರ್ಘಾವದಿ ಕ್ರಿಕೆಟ್​ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದರು.

    MORE
    GALLERIES

  • 39

    Yuvraj Singh: ಸ್ಟುವರ್ಟ್ ಬ್ರಾಡ್ 500 ವಿಕೆಟ್ ಸಾಧನೆ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದೇನು ನೋಡಿ!

    ಎರಡನೇ ಇನಿಂಗ್ಸ್​ನ 13.3ನೇ ಓವರ್​​ನಲ್ಲಿ ಬ್ರಾಡ್ ಈ ಮೈಲಿಗಲ್ಲು ತಲುಪಿದರು. ವೆಸ್ಟ್ ಇಂಡೀಸ್​ನ ಆರಂಭಿಕ ಬ್ರಾಥ್​ವೈಟ್(19) ಅವರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸುವ ಮೂಲಕ ಬ್ರಾಡ್ ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್ ಗಳಿಸಿದ ದಾಖಲೆ ಬರೆದರು.

    MORE
    GALLERIES

  • 49

    Yuvraj Singh: ಸ್ಟುವರ್ಟ್ ಬ್ರಾಡ್ 500 ವಿಕೆಟ್ ಸಾಧನೆ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದೇನು ನೋಡಿ!

    ಸ್ಟುವರ್ಟ್ ಬ್ರಾಡ್ ಅವರ ಈ ವಿಶೇಷ ಸಾಧನೆಗೆ ಸ್ವತಃ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ತಲೆಬಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯದಿಂದ ಬ್ರಾಡ್ ಹೊರಗುಳಿದಿದ್ದು, ನಮಗೆ ಶಾಕ್ ಕೊಟ್ಟಿತು. ಏಕೆಂದರೆ ಸ್ಟುವರ್ಟ್ ಬ್ರಾಡ್ ಸಾಮರ್ಥ್ಯದ ಬಗ್ಗೆ ನಮಗೆ ತಿಳಿದಿದೆ ಎಂದು ಹೋಲ್ಡರ್ ಬ್ರಾಡ್ ಸಾಧನೆಯನ್ನು ಶ್ಲಾಘಿಸಿದರು.

    MORE
    GALLERIES

  • 59

    Yuvraj Singh: ಸ್ಟುವರ್ಟ್ ಬ್ರಾಡ್ 500 ವಿಕೆಟ್ ಸಾಧನೆ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದೇನು ನೋಡಿ!

    ಸದ್ಯ ಭಾರತ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್​ ಯುವರಾಜ್ ಸಿಂಗ್ ಕೂಡ ಬ್ರಾಡ್ ಸಾಧನೆ ಬಗ್ಗೆ ಮನಮುಟ್ಟುವ ಸಂದೇಶ ಬರೆದಿದ್ದಾರೆ.

    MORE
    GALLERIES

  • 69

    Yuvraj Singh: ಸ್ಟುವರ್ಟ್ ಬ್ರಾಡ್ 500 ವಿಕೆಟ್ ಸಾಧನೆ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದೇನು ನೋಡಿ!

    'ಸ್ಟುವರ್ಟ್ ಬ್ರಾಡ್ ಬಗ್ಗೆ ನಾನು ಮಾತನಾಡಿದಾಗೆಲ್ಲ ಪ್ರತೀ ಬಾರಿಯೂ ಜನರು ಆ 6 ಸಿಕ್ಸ್​ಗೆ ಸಂಬಂಧ ಕಲ್ಪಿಸುತ್ತಾರೆ ಅನ್ನೋದು ನನಗೆ ಗೊತ್ತಿದೆ. ಇವತ್ತು ನಾನು ನನ್ನೆಲ್ಲಾ ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತೇವೆ, ಆತನ ಸಾಧನೆಗೆ ಅಭಿನಂದಿಸಿ ಎಂದು ಹೇಳಿದ್ದಾರೆ.

    MORE
    GALLERIES

  • 79

    Yuvraj Singh: ಸ್ಟುವರ್ಟ್ ಬ್ರಾಡ್ 500 ವಿಕೆಟ್ ಸಾಧನೆ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದೇನು ನೋಡಿ!

    ಅಲ್ಲದೆ 500 ಟೆಸ್ಟ್ ವಿಕೆಟ್ ಪಡೆಯೋದೆಂದರೆ ಅದು ತಮಾಷೆಯಲ್ಲ. ಅದಕ್ಕೆ ಪ್ರತಿಭೆ, ಪರಿಶ್ರಮ, ಸಮರ್ಪಣಾ ಭಾವ ಬೇಕು. ಬ್ರಾಡಿ, ನೀನು ದಂತಕತೆ ಕಣೊ. ನಿಂಗೆ ಹ್ಯಾಟ್ಸ್ ಆಫ್' ಎಂದು ಯುವಿ ಹೇಳಿದ್ದಾರೆ.

    MORE
    GALLERIES

  • 89

    Yuvraj Singh: ಸ್ಟುವರ್ಟ್ ಬ್ರಾಡ್ 500 ವಿಕೆಟ್ ಸಾಧನೆ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದೇನು ನೋಡಿ!

    ಯುವಿ ಹೀಗೆ ವಿಶೇಷವಾಗಿ ಅಭಿನಂದಿಸಿರುವುದಕ್ಕೆ ಕಾರಣವೂ ಇದೆ. 2007ರಲ್ಲಿ ನಡೆದಿದ್ದ ಐಸಿಸಿ ಟಿ-20 ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಓವರ್ ಒಂದರಲ್ಲಿ 6 ಸಿಕ್ಸರ್​ಗಳನ್ನು ಬಾರಿಸಿದ್ದರು. ಆವತ್ತು ಆ ಓವರ್ ಎಸೆದಿದ್ದು ಇದೇ ಸ್ಟುವರ್ಟ್ ಬ್ರಾಡ್.

    MORE
    GALLERIES

  • 99

    Yuvraj Singh: ಸ್ಟುವರ್ಟ್ ಬ್ರಾಡ್ 500 ವಿಕೆಟ್ ಸಾಧನೆ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದೇನು ನೋಡಿ!

    500 ವಿಕೆಟ್ ಪಡೆದ ಆಟಗಾರ ಪಟ್ಟಿ: ಮುತ್ತಯ್ಯ ಮುರಳಿಧರನ್ 800, ಶೇನ್ವಾರ್ನ್ 708, ಅನಿಲ್ ಕುಂಬ್ಳೆ 619, ಜೇಮ್ಸ್ ಅಂಡರ್ಸನ್ 589*, ಮೆಕ್ಗ್ರಾಥ್ 563, ಕೌರ್ಟ್ನಿ ವಾಲ್ಷ್ 519, ಸ್ಟುವರ್ಟ್ ಬ್ರಾಡ್ 500*

    MORE
    GALLERIES