2011ರ ವಿಶ್ವಕಪ್ ಟೂರ್ನಿಯನ್ನು ಯಾರಿಂದ ತಾನೆ ಮರೆಯಲು ಸಾಧ್ಯ. ಯುವಿಯ ಆಲ್ರೌಂಡರ್ ಪ್ರದರ್ಶನದಿಂದ ಟೀಂ ಇಂಡಿಯಾ ಎರಡನೇ ಬಾರಿ ವಿಶ್ವಕಪ್ಗೆ ಮುತ್ತಿಕ್ಕಿತು.
2/ 12
ಹೌದು, ಯುವರಾಜ್ ಕ್ರೀಸ್ನಲ್ಲಿದ್ದರೆ ಎದುರಾಳಿ ಬೌಲರುಗಳಿಗೆ ಅದೇಕೋ ನಡುಕ. ಏಕೆಂದರೆ ಅತ್ಯುತ್ತಮ ವೇಗಿ ಎನಿಸಿಕೊಂಡಿದ್ದ ಸ್ಟುವರ್ಟ್ ಬ್ರಾಡ್ ಆರು ಎಸೆತಗಳನ್ನೂ ಯುವಿ ಸಿಕ್ಸರ್ಗೆ ಅಟ್ಟಿದ್ದರು.
3/ 12
ಆದರೆ ಇದೇ ಸಿಕ್ಸರ್ ಸಿಂಗ್ ಕೆಲ ಬೌಲರುಗಳನ್ನು ಎದುರಿಸಲು ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ ಎಂದರೆ ನಂಬಲೇಬೇಕು. ಏಕೆಂದರೆ ಯುವರಾಜ್ ಸಿಂಗ್ ಅತ್ಯುತ್ತಮ ವೇಗಿಗಳನ್ನು ನೀರಾಯಾಸವಾಗಿ ಎದುರಿಸುತ್ತಿದ್ದರು. ಅದೇ ಸ್ಪಿನ್ ಬೌಲರುಗಳ ವಿರುದ್ಧ ಬ್ಯಾಟ್ ಬೀಸಲು ತಡಕಾಡುತ್ತಿದ್ದರು.
4/ 12
ತಮ್ಮ ಕೆರಿಯರ್ನಲ್ಲಿ ಅತೀ ಹೆಚ್ಚು ಕಾಡಿದ ಬೌಲರುಗಳ ಬಗ್ಗೆ ಇದೀಗ ಯುವರಾಜ್ ಸಿಂಗ್ ಮಾತನಾಡಿದ್ದಾರೆ. ಮೂರು ಮಾದರಿಯ ಕ್ರಿಕೆಟ್ನಲ್ಲೂ ಸಂಚಲನ ಸೃಷ್ಟಿಸಿದ್ದ ಯುವಿಯನ್ನು ಅತೀ ಹೆಚ್ಚು ಕಾಡಿದ ಬೌಲರ್ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
5/ 12
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸ್ಪಿನ್ ಮಾಂತ್ರಿಕ ಲೆಜೆಂಡ್ ಮುತ್ತಯ್ಯ ಮುರಳೀಧರನ್. ಹೌದು, ಯುವರಾಜ್ ಸಿಂಗ್ಗೆ ಶ್ರೀಲಂಕಾದ ಮುರಳೀಧರನ್ ಎಸೆತವನ್ನು ಎದುರಿಸಲು ತಡಕಾಡುತ್ತಿದ್ದೆ ಎಂದು ತಿಳಿಸಿದ್ದಾರೆ.
6/ 12
ಮುರಳೀಧರನ್ ಅವರ ಎಸೆತಗಳನ್ನು ಎದುರಿಸುವುದು ನನಗೆ ಸವಾಲಿನ ವಿಷಯವಾಗಿತ್ತು. ಅವರ ಬೌಲಿಂಗ್ನಲ್ಲಿ ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲ ಎಂದು ಯುವಿ ಹೇಳಿದ್ದಾರೆ.
7/ 12
ಆದರೆ ಮುರಳೀಧರನ್ ಅವರ ಚೆಂಡುಗಳನ್ನು ಎದುರಿಸಲು ಆ ಬಳಿಕ ಕ್ರಿಕೆಟ್ ದೇವರು ನೀಡಿದ ಸಲಹೆ ಉಪಯುಕ್ತವಾಯಿತು ಅಂದಿದ್ದಾರೆ ಯುವಿ. ನನ್ನ ಸಮಸ್ಯೆಯಲ್ಲಿ ಸಚಿನ್ ಪಾಜಿ ಅವರ ಬಳಿ ಹೇಳಿಕೊಂಡೆ.
8/ 12
ಈ ವೇಳೆ ಮಾಸ್ಟರ್ ಬ್ಲಾಸ್ಟರ್ ನೀಡಿದ ಸಲಹೆಯಿಂದ ಮುಂದೆ ಮುತ್ತಯ್ಯ ಮುರಳೀಧರನ್ ಅವರ ಎಸೆತಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದೆ ಎಂದು ಯುವರಾಜ್ ಸಿಂಗ್ ಹೇಳಿದರು.
9/ 12
ಇನ್ನು ವೇಗದ ಬೌಲರುಗಳಲ್ಲಿ ನಾನು ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್ಗ್ರಾಥ್ ಎಸೆತಗಳನ್ನು ಎದುರಿಸಲು ಒದ್ದಾಡುತ್ತಿದ್ದೆ. ಅವರ ಕರಾರುವಾಕ್ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲುವುದೇ ದೊಡ್ಡ ಸವಾಲು.
10/ 12
ಮೆಕ್ಗ್ರಾಥ್ ಅವರ ಚೆಂಡುಗಳು ಬ್ಯಾಟ್ ಸವರಿಕೊಂಡು ಕೀಪರ್ನತ್ತ ಹೋಗುತ್ತಿತ್ತು. ಇದರಿಂದ ಅವರ ಬೌಲಿಂಗ್ನಲ್ಲಿ ಔಟಾಗದೇ ಉಳಿಯುವುದು ಸವಾಲಿನ ವಿಷಯವಾಗಿತ್ತು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
11/ 12
ಟೀಂ ಇಂಡಿಯಾದ ಸಾರ್ವಕಾಲಿಕ ಮ್ಯಾಚ್ ವಿನ್ನರ್ ಎಂದೇ ಖ್ಯಾತರಾಗಿದ್ದ ಆಲ್ರೌಂಡರ್ ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಗೆದ್ದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
12/ 12
ಟೀಂ ಇಂಡಿಯಾ ಪರ 301 ಏಕದಿನ ಪಂದ್ಯವಾಡಿರುವ ಯುವರಾಜ್ ಸಿಂಗ್ 8701 ರನ್ ಬಾರಿಸಿದ್ದಾರೆ. ಹಾಗೆಯೇ 40 ಟೆಸ್ಟ್ ಪಂದ್ಯಗಳಿಂದ 1900 ರನ್ ಕಲೆಹಾಕಿದ್ದಾರೆ. ಇನ್ನು 132 ಟಿ20 ಪಂದ್ಯಗಳಿಂದ 2750 ರನ್ ಬಾರಿಸಿದ್ದಾರೆ. ಇನ್ನು ಮೂರು ಮಾದರಿಯ ಕ್ರಿಕೆಟ್ನಲ್ಲಿ 148 ವಿಕೆಟ್ ಉರುಳಿಸಿದ್ದಾರೆ.