ಈ ಹಿಂದೆ ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ಮತ್ತು ಭಾರತದ ಯುವರಾಜ್ ಸಿಂಗ್ ಅವರು ಈ ಸಾಧನೆ ಮಾಡಿದ್ದರು. ಇನ್ನು ಟಿ20 ಕ್ರಿಕೆಟ್ನಲ್ಲಿ ಯುವರಾಜ್ ಸಿಂಗ್ ನಂತರ ಪೊಲಾರ್ಡ್ ಈ ದಾಖಲೆ ಮಾಡಿರುವುದು ವಿಶೇಷ. ಈ ಹಿಂದೆ 2007 ರಲ್ಲಿ ಯುವರಾಜ್ ಸಿಂಗ್ ಟಿ20 ಕ್ರಿಕೆಟ್ನಲ್ಲಿ 6 ಎಸೆತಕ್ಕೆ 6 ಸಿಕ್ಸರ್ ಸಿಡಿಸಿ ಇತಿಹಾಸ ನಿರ್ಮಿಸಿದ್ದರು. ಇದರ ಬಳಿಕ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಏಕದಿನ ಕ್ರಿಕೆಟ್ನಲ್ಲಿ 6 ಬಾಲ್ಗೆ 6 ಸಿಕ್ಸರ್ ಬಾರಿಸಿದ್ದರು.
ಇನ್ನು ಮತ್ತೋರ್ವ ಸಿಕ್ಸರ್ ಸರದಾರ ಹರ್ಷಲ್ ಗಿಬ್ಸ್ ಕೂಡ ಪ್ರತಿಕ್ರಿಯಿಸಿದ್ದು, ಸಿಕ್ಸ್ ಸಿಡಿಸಲು ಮಾರ್ಚ್ ಅತ್ಯಂತ ಜನಪ್ರಿಯ ತಿಂಗಳು. ಅಭಿನಂದನೆಗಳು ಪೊಲಾರ್ಡ್ ಎಂದಿದ್ದಾರೆ. ಗಿಬ್ಸ್ ಈ ರೀತಿಯಲ್ಲಿ ಟ್ವೀಟ್ ಮಾಡಲು ಕಾರಣ, ಈ ಹಿಂದೆ ನೆದರ್ಲ್ಯಾಂಡ್ಸ್ ವಿರುದ್ದ 6/3/2007 ರಂದು ಗಿಬ್ಸ್ ಆರು ಎಸೆತಗಳಿಗೆ ಸಿಕ್ಸರ್ ಬಾರಿಸಿದ್ದರು. ಇದೀಗ ಮಾರ್ಚ್ನಲ್ಲೇ ಪೊಲಾರ್ಡ್ ಕೂಡ ಈ ದಾಖಲೆ ಬರೆದಿರುವುದು ವಿಶೇಷ.