2019 ವಿಶ್ವಕಪ್ ಅಂತ್ಯಗೊಂಡ ಬಳಿಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಆಡಲು ಮೈದಾನಕ್ಕಿಳಿಯಲಿಲ್ಲ. ವೆಸ್ಟ್ ಇಂಡೀಸ್ ಪ್ರವಾಸ ಹಾಗೂ ದ. ಆಫ್ರಿಕಾ ವಿರುದ್ಧದ ಸರಣಿಯಿಂದ ವಿಶ್ರಾಂತಿ ಬಯಸಿದ್ದರು.
2/ 8
ಈ ಮಧ್ಯೆ ಧೋನಿ ವಿದಾಯದ ವಿಚಾರ ಕ್ರಿಕೆಟ್ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕ್ರಿಕೆಟ್ ದಿಗ್ಗಜರು ಒಬ್ಬೊಬ್ಬರಾಗಿ ಧೋನಿ ನಿವೃತ್ತಿ ನೀಡುವ ಸಮಯ ಬಂದಿದೆ ಎಂದು ಹೇಳುತ್ತಿದ್ದಾರೆ.
3/ 8
ಮಾಜಿ ಆಟಗಾರ ಗೌತಮ್ ಗಂಭೀರ್ ಕೂಡ ಧೋನಿ ನಿವೃತ್ತಿ ವಿಚಾರವಾಗಿ ಮಾತನಾಡಿದ್ದಾರೆ
4/ 8
ಒಬ್ಬ ಆಟಗಾರನಿಗೆ ನಿವೃತ್ತಿ ಅವನ ವೈಯಕ್ತಿಕ ವಿಚಾರ. ಧೋನಿ ಜೊತೆಗೆ ಬಿಸಿಸಿಐ ಆಯ್ಕೆದಾರರು ಸಮಾಲೋಚನೆ ನಡೆಸಬೇಕಿದೆ- ಗಂಭೀರ್
5/ 8
ಒಬ್ಬ ಆಟಗಾರ ಭಾರತ ತಂಡದ ಪರ ಆಡಬೇಕು. ಅದುಬಿಟ್ಟು ತನಗೆ ಇಷ್ಟ ಬಂದ ಸರಣಿ ಆಯ್ಕೆ ಮಾಡಿಕೊಂಡು ಆಡುವಂತೆ ಇರಬಾರದು ಎಂದು ಗಂಭಿರ್ ಪರೋಕ್ಷವಾಗಿ ಧೋನಿ ನಿವೃತ್ತಿ ನೀಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ
6/ 8
ರಿಷಭ್ ಪಂತ್ ಭವಿಷ್ಯ ಉತ್ತಮವಾಗಿದೆ. ಅವರಿಗೆ ಕೋಚ್, ಹಿರಿಯ ಆಟಗಾರರು ಸರಿಯಾದ ರೀತಿಯಲ್ಲಿ ಬೆಂಬಲ ನೀಡಬೇಕು. ಧೋನಿ ಜೊತೆ ಜೊತೆ ಪಂತ್ನನ್ನು ಹೋಲಿಕೆ ಮಾಡುವುದು ಸರಿಯಲ್ಲಿ- ಗಂಭೀರ್
7/ 8
ಎಂ ಎಸ್ ಧೋನಿ ನವೆಂಬರ್ನಲ್ಲಿ ಭಾರತ ತಂಡವನ್ನು ಸೇರಲಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಕೂಲ್ ಕ್ಯಾಪ್ಟನ್ ಮಣಿಕಟ್ಟು ಗಾಯದ ತೊಂದರೆಯಿಂದ ಬಳಲುತ್ತಿದ್ದಾರೆ.
8/ 8
ಮುಂಬರುವ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದಲೂ ಧೋನಿ ಹಿಂದೆ ಸರಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ