ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕ್ರಿಕೆಟ್ ಅಂಗಳ ಕಳೆದೊಂದು ತಿಂಗಳಿಂದ ಸ್ತಬ್ಧವಾಗಿವೆ. ಹೀಗಾಗಿ ಕ್ರಿಕೆಟರುಗಳು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
2/ 13
ಅದರಲ್ಲೂ ಕೆಲ ಆಟಗಾರರು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನದ ರೋಚಕ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
3/ 13
ಇದರ ನಡುವೆ ವೆಸ್ಟ್ ಇಂಡೀಸ್ ತಂಡದ ಆಟಗಾರ ಕ್ರಿಸ್ ಗೇಲ್ ಯುಟ್ಯೂಬ್ ಚಾನೆಲ್ನಲ್ಲಿ ಸಹ ಆಟಗಾರನ ವಿರುದ್ಧ ಹಿಗ್ಗಾಮಗ್ಗ ಜರಿಯುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
4/ 13
ಕೆರಿಬಿಯನ್ ತಂಡದ ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ವಿಂಡೀಸ್ ತಂಡದ ಮಾಜಿ ಆಟಗಾರ ರಾಮ್ನರೇಶ್ ಸರವಣ್ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ.
5/ 13
ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ, ಗೇಲ್ ಹಲವಾರು ವರ್ಷಗಳ ಕಾಲ ಜಮೈಕಾದ ತಲ್ಲಾವಾಸ್ ಪರ ಆಡಿದ್ದರು. ಆದರೆ ಈ ವರ್ಷ ಅವರನ್ನು ತಲ್ಲಾವಾಸ್ ತಂಡ ಕೈ ಬಿಟ್ಟಿದೆ. ಇದರಿಂದ ಕುಪಿತಗೊಂಡಿರುವ ಗೇಲ್ ಇದಕ್ಕೆ ಕಾರಣ ರಾಮ್ನರೇಶ್ ಸರವಣ್ ಅಂದಿದ್ದಾರೆ.
6/ 13
ನನ್ನನ್ನು ಏಕಾಏಕಿ ತಂಡದಿಂದ ಕೈ ಬಿಡಲು ಕಾರಣ ಸರವಣ್. ಅವರೇ ತಮ್ಮ ಮತ್ತು ಫ್ರಾಂಚೈಸಿ ವಿರುದ್ಧ ಭಿನ್ನಾಭಿಪ್ರಾಯ ತಂದಿಟ್ಟಿದ್ದಾರೆ ಎಂದು ಗೇಲ್ ಆರೋಪಿಸಿದ್ದಾರೆ.
7/ 13
ಸರವಣ್ ತಲ್ಲಾವಾಸ್ ತಂಡದ ಮುಖ್ಯ ಕೋಚ್ ಆಗಲು ಬಯಸಿದ್ದರು. ಅದಕ್ಕಾಗಿ ತಂಡದಲ್ಲಿ ಭಿನ್ನಾಭಿಪ್ರಾಯವನ್ನು ತಂದಿಡುತ್ತಿದ್ದಾರೆ. ನಾನು ಹೇಳುವುದೇನೆಂದರೆ ನಿಮಗೆ ಮುಖ್ಯ ಕೋಚ್ ಆಗುವ ಯಾವುದೇ ಅನುಭವವಿಲ್ಲ. ಅದು ಸುಲಭದ ಕೆಲಸವಲ್ಲ ಎಂದು ಗೇಲ್ ಹೇಳಿದರು.
8/ 13
1996 ರಲ್ಲಿ ಅಂಡರ್ -19 ತಂಡದಲ್ಲಿ ನಾವು ರೂಮ್ಮೇಟ್ಗಳಾಗಿದ್ದಾಗ ನೀನು ತೊಂದರೆ ಕೊಡುತ್ತಿದ್ದೆ. ರಾತ್ರಿಯಿಡೀ ಟಿವಿ ನೋಡುತ್ತಾರೆ ಎಂದು ನೀನು ದೂರು ನೀಡಿದ್ದರಿಂದ ಮುಖ್ಯ ತರಬೇತುದಾರ ಗುಸ್ ಲೋಗಿಯನ್ನು ಬಾರ್ಬಡೋಸ್ನ ಶಿಬಿರದಿಂದ ಜಮೈಕಾದವರನ್ನು ಹೊರಹಾಕಿದ್ದರು.
9/ 13
ಅಂದು ನಾನು ನಿನ್ನನ್ನು ಕ್ಷಮಿಸಿದ್ದೆ. ಆದರೆ ಆ ಘಟನೆಯನ್ನು ಇನ್ನೂ ಮರೆತಿಲ್ಲ ಎಂದ ಗೇಲ್ ಸರವಣ್ನ್ನು ಹಾವಿಗೆ ಹೋಲಿಸಿದರು. ಆತನಲ್ಲಿ ವಿಷ ತುಂಬಿದೆ. ಹೀಗಾಗಿಯೇ ಬೆನ್ನ ಹಿಂದೆಯಿಂದ ಇರಿಸುವಂತಹ ಕೆಲಸ ಮಾಡುತ್ತಾನೆ ಎಂದು ಸ್ಪೋಟಕ ಆಟಗಾರ ತಿಳಿಸಿದರು.
10/ 13
ಇನ್ನು ಒಂದು ಹೆಜ್ಜೆ ಮುಂದೆ ಹೋದ ಗೇಲ್, ನೀನು ಕೊರೋನಾ ವೈರಸ್ಗಿಂತಲೂ ಅಪಾಯಕಾರಿ. ಇದಕ್ಕೆ ನೀನು ಪ್ರತಿಫಲ ಅನುಭವಿಸುತ್ತೀಯಾ ಸರವಣ್ ಎಂದು ಯುನಿವರ್ಸಲ್ ಬಾಸ್ ಎಚ್ಚರಿಕೆ ನೀಡಿದರು.
11/ 13
ಜಮೈಕಾ ಮೂಲಕ ಕ್ರಿಸ್ ಗೇಲ್ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ತವರಿನ ತಂಡವಾದ ತಲ್ಲಾವಾಸ್ ಜೆರ್ಸಿಯೊಂದಿಗೆ ಕ್ರಿಕೆಟ್ಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದರು. ಆದರೆ ಇದೀಗ ಏಕಾಏಕಿ ತಂಡದಿಂದ ಕೈ ಬಿಟ್ಟಿರುವ ಪರಿಣಾಮ ಗೇಲ್ ಸೆಂಟ್ ಲೂಸಿಯಾ ತಂಡದ ಪರ ಕಣಕ್ಕಿಳಿಯಲಿದ್ದಾರೆ.
12/ 13
ವೆಸ್ಟ್ ಇಂಡೀಸ್ ಪರ 87 ಟೆಸ್ಟ್, 181 ಏಕದಿನ ಹಾಗೂ 18 ಟಿ20 ಪಂದ್ಯಗಳನ್ನು ಆಡಿರುವ ರಾಮ್ನರೇಶ್ ಸರವಣ್ ಪ್ರಸ್ತುತ ತಲ್ಲಾವಾಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
13/ 13
ಟೆಸ್ಟ್ನಲ್ಲಿ 5842 ರನ್ ಹಾಗೂ ಏಕದಿನ ಪಂದ್ಯಗಳಿಂದ 5842 ರನ್ ಕಲೆಹಾಕಿರುವ ಸರವಣ್ 2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರು.