'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

Yuvraj Singh: ಸಿಕ್ಸರ್ ಸಿಂಗ್​ನ ಈ ದಾಖಲೆಯನ್ನು ನೋಡಿ ಇಡೀ ವಿಶ್ವ ಕ್ರಿಕೆಟ್ ಪ್ರೇಮಿಗಳು ನಿಬ್ಬೆರಗಾಗಿ ನಿಂತಿದ್ದರು. ಏಕೆಂದರೆ ಯುವರಾಜ್ ಖ್ಯಾತ ಬೌಲರ್​ರೊಬ್ಬರ ಆರು ಎಸೆತಗಳನ್ನು ಸಿಕ್ಸರ್​ಗೆ ಅಟ್ಟಿದ್ದರು. ಅದುವರೆಗೆ ಅಂತಹದೊಂದು ಬಿರುಸಿನ ಬ್ಯಾಟಿಂಗ್​ ಕ್ರಿಕೆಟ್ ಪ್ರೇಮಿಗಳು ನೋಡಿರಲಿಲ್ಲ.

First published:

  • 113

    'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

    2007ರ ಟಿ20 ವಿಶ್ವಕಪ್. ಇಡೀ ವಿಶ್ವವೇ ಚುಟುಕು ಕ್ರಿಕೆಟ್ ಕದನದತ್ತ ಮುಖ ಮಾಡಿದ್ದರು. ಪ್ರತಿಯೊಂದು ಪಂದ್ಯಗಳೂ ರೋಚಕತೆಗೆ ಸಾಕ್ಷಿಯಾಗುತ್ತಿತ್ತು. ಅದರ ನಡುವೆ ಟೀಮ್ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಒಂದು ವಿಶ್ವ ದಾಖಲೆ ನಿರ್ಮಿಸಿದ್ದರು.

    MORE
    GALLERIES

  • 213

    'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

    ಸಿಕ್ಸರ್ ಸಿಂಗ್​ನ ಈ ದಾಖಲೆಯನ್ನು ನೋಡಿ ಇಡೀ ವಿಶ್ವ ಕ್ರಿಕೆಟ್ ಪ್ರೇಮಿಗಳು ನಿಬ್ಬೆರಗಾಗಿ ನಿಂತಿದ್ದರು. ಏಕೆಂದರೆ ಯುವರಾಜ್ ಖ್ಯಾತ ಬೌಲರ್​ರೊಬ್ಬರ ಆರು ಎಸೆತಗಳನ್ನು ಸಿಕ್ಸರ್​ಗೆ ಅಟ್ಟಿದ್ದರು. ಅದುವರೆಗೆ ಅಂತಹದೊಂದು ಬಿರುಸಿನ ಬ್ಯಾಟಿಂಗ್​ ಕ್ರಿಕೆಟ್ ಪ್ರೇಮಿಗಳು ನೋಡಿರಲಿಲ್ಲ.

    MORE
    GALLERIES

  • 313

    'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

    ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಸೆ.19 ರಂದು ಭಾರತ - ಇಂಗ್ಲೆಂಡ್ ಮುಖಾಮುಖಿಯಾಗಿತ್ತು. ಟಾಸ್ ಗೆದ್ದು ಭಾರತದ ನಾಯಕ ಧೋನಿ ಬ್ಯಾಟಿಂಗ್ ಆಯ್ದುಕೊಂಡರು.

    MORE
    GALLERIES

  • 413

    'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

    ಓಪನರ್​ಗಳಾಗಿ ಕಣಕ್ಕಿಳಿದ ಗಂಭೀರ್(58) ಹಾಗೂ ಸೆಹ್ವಾಗ್ ( 68) ಭರ್ಜರಿ ಆರಂಭ ಒದಗಿಸಿದ್ದರು. 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದ ಯುವರಾಜ್ ಸಿಂಗ್ ರನ್​ ಗತಿ ಹೆಚ್ಚಿಸುವ ಉತ್ಸಾಹದಲ್ಲಿದ್ದರು.

    MORE
    GALLERIES

  • 513

    'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

    ಇದೇ ವೇಳೆ ಯುವಿಯನ್ನು ಇಂಗ್ಲೆಂಡ್ ಆಲ್​ರೌಂಡರ್ ಆ್ಯಂಡ್ರೊ ಫ್ಲಿಂಟಾಫ್ ಕೆಣಕಿದ್ದರು. ಮಾತಿನ ಚಕಮಕಿಯೊಂದಿಗೆ ಪ್ರಾರಂಭವಾದ ವಾಕ್ಸಮರದಲ್ಲಿ ಒಂದು ಹೆಜ್ಜೆ ಮುಂದೆ ಹೋದ ಯುವಿ ಇಂಗ್ಲೆಂಡ್ ಆಟಗಾರನಿಗೆ ವಾರ್ನಿಂಗ್ ನೀಡಿದರು.

    MORE
    GALLERIES

  • 613

    'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

    ಇತ್ತ ಓವರ್​ ಎಸೆಯಲು ಆಗಷ್ಟೇ ಆಂಗ್ಲರ ತಂಡದಲ್ಲಿ ಸಂಚಲನ ಸೃಷ್ಟಿಸಿದ್ದ ಸ್ಟುವರ್ಟ್ ಬ್ರಾಡ್ ಬಂದು ನಿಂತಿದ್ದರು. ಆದರೆ ಫ್ಲಿಂಟಾಫ್ ಜೊತೆಗಿನ ಕೋಪವನ್ನು ಯುವರಾಜ್ ಸಿಂಗ್ ಬ್ಯಾಟ್ ಮೂಲಕ ಹೊರ ಹಾಕಲು ನಿರ್ಧರಿಸಿದ್ದರು.

    MORE
    GALLERIES

  • 713

    'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

    ನಾನ್ ಸ್ಟ್ರೈಕ್​ನಿಂದ ಬ್ರಾಡ್ ಬಾಲ್ ಎಸೆಯುತ್ತಿದ್ದರೆ ಯುವರಾಜ್ ಸಿಂಗ್ ಚೆಂಡನ್ನು ಸ್ಟೇಡಿಯಂಗೆ ಕಳುಹಿಸುತ್ತಿದ್ದರು. ಹೀಗೆ ಆಫ್ ಸೈಡ್-ಲೆಗ್ ಸೈಡ್​ ಎನ್ನದೇ ಯುವಿ ಆರು ಎಸೆತಗಳಿಗೂ ಸಿಕ್ಸರ್ ಉತ್ತರ ನೀಡಿದ್ದರು.

    MORE
    GALLERIES

  • 813

    'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

    ಸಿಕ್ಸರ್ ಸಿಂಗ್​ ಖ್ಯಾತಿ ತಂದುಕೊಟ್ಟ ಈ ಸಿಕ್ಸ್ ಸಿಕ್ಸರ್ ಬಗ್ಗೆ 13 ವರ್ಷಗಳ ಬಳಿಕ ಯುವರಾಜ್ ಸಿಂಗ್ ಮಾತನಾಡಿದ್ದಾರೆ. ನಾನು ಇಂಗ್ಲೆಂಡ್ ವಿರುದ್ಧವೇ 6 ಸಿಕ್ಸ್ ಸಿಡಿಸಿರುವುದಕ್ಕೆ ನನಗೆ ತುಂಬಾ ಖುಷಿಯಿದೆ.

    MORE
    GALLERIES

  • 913

    'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

    ಏಕೆಂದರೆ ಅದಕ್ಕೂ ಕೆಲ ದಿನಗಳ ಹಿಂದೆಯಷ್ಟೇ ಏಕದಿನ ಪಂದ್ಯದಲ್ಲಿ ನನ್ನ ಓವರ್​ನಲ್ಲಿ ಡಿಮಿಟ್ರಿ ಮಸ್ಕರೇನ್ಹಾಸ್ 5 ಎಸೆತಗಳಲ್ಲಿ ಐದು ಸಿಕ್ಸರ್ ಬಾರಿಸಿದ್ದರು. ಈ ಪ್ರತಿಕಾರ ಕೂಡ ನನ್ನ ಖುಷಿಯನ್ನು ಇಮ್ಮಡಿಗೊಳಿಸಿತು ಎಂದು ಯುವಿ ಹೇಳಿದರು.

    MORE
    GALLERIES

  • 1013

    'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

    ಇಂಗ್ಲೆಂಡ್‌ ವೇಗಿ ಸ್ಟುವರ್ಟ್ ಬ್ರಾಡ್‌ ಓವರ್‌ನಲ್ಲಿ ಸಿಕ್ಸರ್ ಬಾರಿಸಿರುವುದನ್ನು ಸ್ಮರಿಸಿಕೊಂಡ ಯುವಿ, ಆ ಬಳಿಕ ನಡೆದ ಘಟನೆಗಳನ್ನು ಇದೇ ಮೊದಲ ಬಾರಿ ಬಿಚ್ಚಿಟ್ಟಿದ್ದಾರೆ.

    MORE
    GALLERIES

  • 1113

    'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

    ಸಿಕ್ಸ್ ಸಿಕ್ಸರ್ ಪಂದ್ಯದ ಬಳಿಕ ಸ್ಟುವರ್ಟ್ ಬ್ರಾಡ್ ತಂದೆ ಕ್ರಿಸ್ ಬ್ರಾಡ್ ಯುವರಾಜ್​ ಸಿಂಗ್ ಅವರನ್ನು ಭೇಟಿಯಾಗಿದ್ರಂತೆ. ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ, ಮ್ಯಾಚ್ ರೆಫರಿಯಾಗಿದ್ದ ಕ್ರಿಸ್ ಬ್ರಾಡ್ ಈ ವೇಳೆ ನನ್ನ ಬಳಿ ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್​ನ್ನು ಭಾಗಶಃ ಮುಗಿಸಿಬಿಟ್ಟಿದ್ದೀಯಾ. ಹಾಗಾಗಿ ನೀನು ಅವನಿಗೆ ಟೀ ಶರ್ಟ್ ಮೇಲೆ ಆಟೋಗ್ರಾಫ್ (ಸಹಿ) ಹಾಕಬೇಕೆಂದು ಕೇಳಿಕೊಂಡಿದ್ದರು.

    MORE
    GALLERIES

  • 1213

    'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

    ನಾನು ನನ್ನ ಭಾರತದ ಜೆರ್ಸಿ ಮೇಲೆ ಹೀಗೆ ಬರೆದುಕೊಟ್ಟಿದ್ದೆ ಎಂದು ಯುವರಾಜ್ ಸಿಂಗ್ ನೆನಪಿಸಿಕೊಂಡರು. 'ನನ್ನ ಓವರ್‌ನಲ್ಲಿ ಐದು ಸಿಕ್ಸ್‌ಗಳು ಬಿದ್ದಿದ್ದವು. ಹಾಗಾಗಿ ಆ ನೋವು ಏನು ಎಂಬುದು ನನಗೆ ಗೊತ್ತು. ಇಂಗ್ಲೆಂಡ್ ಕ್ರಿಕೆಟ್‌ನ ಭವಿಷ್ಯಕ್ಕೆ ನನ್ನ ಶುಭಹಾರೈಕೆಗಳು' ಎಂದು ಬರೆದು ಸಹಿ ಹಾಕಿ ಕ್ರಿಸ್ ಬ್ರಾಡ್​ ಅವರಿಗೆ ನೀಡಿದ್ದೆ ಎಂದು ಯುವಿ ಹೇಳಿದರು.

    MORE
    GALLERIES

  • 1313

    'ನೀನು ನನ್ನ ಮಗನ ಕ್ರಿಕೆಟ್ ಕೆರಿಯರ್ ಮುಗಿಸಿಬಿಟ್ಟೆ'..!

    ಸ್ಟುವರ್ಟ್ ಈಗ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ಭಾರತದ ಯಾವುದೇ ಬೌಲರ್ ಓವರ್‌ನಲ್ಲಿ ಆರು ಸಿಕ್ಸರ್ ಹೊಡೆಸಿಕೊಂಡ ಬಳಿಕ ಇಂತಹ ಅದ್ಭುತ ಕಂಬ್ಯಾಕ್ ಮಾಡುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಯುವರಾಜ್ ಸಿಂಗ್ ಹೇಳಿದರು.

    MORE
    GALLERIES