Mohammed Shami: ಮಿಂಚಿನ ಬೌಲಿಂಗ್ ಮೂಲಕ ಹೊಸ ಇತಿಹಾಸ ಬರೆದ ಮೊಹಮ್ಮದ್ ಶಮಿ
1983 ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೊಹಿಂದರ್ ಅಮರನಾಥ್ 12 ರನ್ಗಳಿಗೆ 3 ವಿಕೆಟ್ ಪಡೆದಿರುವುದು ಇದುವರೆಗಿನ ಸಾಧನೆಯಾಗಿತ್ತು. ಇದೀಗ 38 ವರ್ಷಗಳ ಹಿಂದಿನ ದಾಖಲೆಯನ್ನು 4 ವಿಕೆಟ್ ಉರುಳಿಸುವ ಮೂಲಕ ಶಮಿ ಮುರಿದಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹೊಸ ದಾಖಲೆ ಬರೆದಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ನ 4 ಪ್ರಮುಖ ವಿಕೆಟ್ ಪಡೆಯುವ ಮೂಲಕ ಶಮಿ ಹೊಸ ಇತಿಹಾಸ ನಿರ್ಮಿಸಿದರು.
2/ 6
ಹೌದು, ಮಂಗಳವಾರ 4 ವಿಕೆಟ್ ಪಡೆಯುವ ಮೂಲಕ ಭಾರತದ ಪರ ಐಸಿಸಿ ಫೈನಲ್ ಪಂದ್ಯದಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೆ ಶಮಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮೊಹಿಂದರ್ ಅಮರನಾಥ್ ಅವರ ಹೆಸರಿನಲ್ಲಿತ್ತು.
3/ 6
1983 ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೊಹಿಂದರ್ ಅಮರನಾಥ್ 12 ರನ್ಗಳಿಗೆ 3 ವಿಕೆಟ್ ಪಡೆದಿರುವುದು ಇದುವರೆಗಿನ ಸಾಧನೆಯಾಗಿತ್ತು. ಇದೀಗ 38 ವರ್ಷಗಳ ಹಿಂದಿನ ದಾಖಲೆಯನ್ನು 4 ವಿಕೆಟ್ ಉರುಳಿಸುವ ಮೂಲಕ ಶಮಿ ಮುರಿದಿದ್ದಾರೆ.
4/ 6
ಅಷ್ಟೇ ಅಲ್ಲದೆ 2007 ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಇರ್ಫಾನ್ ಪಠಾಣ್ (16 ರನ್ಗಳಿಗೆ 3 ವಿಕೆಟ್) ಹಾಗೂ ಆರ್.ಪಿ. ಸಿಂಗ್ (26 ರನ್ಗಳಿಗೆ 3 ವಿಕೆಟ್) ನಿರ್ಮಿಸಿದ್ದ 3 ವಿಕೆಟ್ಗಳ ಸಾಧನೆಯನ್ನು ಶಮಿ ಹಿಂದಿಕ್ಕಿದ್ದಾರೆ.
5/ 6
ಇದಲ್ಲದೆ 2000 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ವೆಂಕಟೇಶ್ ಪ್ರಸಾದ್ (27 ರನ್ಗಳಿಗೆ 3 ವಿಕೆಟ್) ಹಾಗೂ 2002 ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಹರ್ಭಜನ್ ಸಿಂಗ್ (27 ರನ್ಗಳಿಗೆ 3) ಮಾಡಿದ ದಾಖಲೆಯನ್ನು ಶಮಿ 4 ವಿಕೆಟ್ನೊಂದಿಗೆ ಮುರಿದಿದ್ದಾರೆ.
6/ 6
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ 26 ಓವರ್ ಎಸೆದು 76 ರನ್ಗಳಿಗೆ 4 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಐಸಿಸಿ ಆಯೋಜಿಸುವ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.