WPL 2023: ಚೊಚ್ಚಲ ಟ್ರೋಫಿ ಗೆದ್ದ ಮುಂಬೈಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು? ಎಲ್ಲಾ ಪ್ರಶಸ್ತಿ ವಿಜೇತರ ವಿವರ ಇಲ್ಲಿದೆ

ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿಗೆ ಭಾನುವಾರ ತೆರೆಬಿದ್ದಿದೆ. ಮಾರ್ಚ್ 26 ರಂದು ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್​ ಮಹಿಳಾ ತಂಡ ಚೊಚ್ಚಲ ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ.

First published:

  • 17

    WPL 2023: ಚೊಚ್ಚಲ ಟ್ರೋಫಿ ಗೆದ್ದ ಮುಂಬೈಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು? ಎಲ್ಲಾ ಪ್ರಶಸ್ತಿ ವಿಜೇತರ ವಿವರ ಇಲ್ಲಿದೆ

    ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿಗೆ ಭಾನುವಾರ ತೆರೆಬಿದ್ದಿದೆ. ಮಾರ್ಚ್ 26 ರಂದು ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್​ ಮಹಿಳಾ ತಂಡ ಚೊಚ್ಚಲ ಟೂರ್ನಿಯಲ್ಲಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

    MORE
    GALLERIES

  • 27

    WPL 2023: ಚೊಚ್ಚಲ ಟ್ರೋಫಿ ಗೆದ್ದ ಮುಂಬೈಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು? ಎಲ್ಲಾ ಪ್ರಶಸ್ತಿ ವಿಜೇತರ ವಿವರ ಇಲ್ಲಿದೆ

    ಮಹಿಳಾ ಕ್ರಿಕೆಟ್ ಜನಪ್ರಿಯಗೊಳಿಸುವ ಉದ್ದೇಶದಿಂದ ಆರಂಭವಾಗಿರುವ ಮಹಿಳಾ ಪ್ರೀಮಿಯರ್ ಲೀಗ್​ನ ಮೊದಲ ಆವೃತ್ತಿ ಭರ್ಜರಿ ಯಶಸ್ಸು ಸಾಧಿಸಿದೆ. ಇನ್ನೂ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್​ ಪಟ್ಟಕ್ಕೇರಿದ ತಂಡ ಭರ್ಜರಿ ಬಹುಮಾನ ಮೊತ್ತವನ್ನೇ ಪಡೆದುಕೊಂಡಿದೆ.

    MORE
    GALLERIES

  • 37

    WPL 2023: ಚೊಚ್ಚಲ ಟ್ರೋಫಿ ಗೆದ್ದ ಮುಂಬೈಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು? ಎಲ್ಲಾ ಪ್ರಶಸ್ತಿ ವಿಜೇತರ ವಿವರ ಇಲ್ಲಿದೆ

    ಚೊಚ್ಚಲ ಟೂರ್ನಿಯಲ್ಲೇ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ  6 ಕೋಟಿ ರೂಪಾಯಿ ಮೊತ್ತವನ್ನು ಬಹುಮಾನವಾಗಿ ಪಡೆದುಕೊಂಡಿದೆ. ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ಕೋಟಿ ರೂಪಾಯಿಯನ್ನು ಪಡೆದುಕೊಂಡಿದೆ.

    MORE
    GALLERIES

  • 47

    WPL 2023: ಚೊಚ್ಚಲ ಟ್ರೋಫಿ ಗೆದ್ದ ಮುಂಬೈಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು? ಎಲ್ಲಾ ಪ್ರಶಸ್ತಿ ವಿಜೇತರ ವಿವರ ಇಲ್ಲಿದೆ

    ವಿಶ್ವದ ಪುರುಷ ಮತ್ತು ಮಹಿಳಾ ಕ್ರಿಕೆಟ್‌ ಲೀಗ್‌ಗಳಲ್ಲಿ WPL ಅತಿ ಹೆಚ್ಚು ಬಹುಮಾನ ನೀಡುವ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಐಪಿಎಲ್ ಅಗ್ರಸ್ಥಾನದಲ್ಲಿದ್ದು, ಐಪಿಎಲ್ ಚಾಂಪಿಯನ್​ ತಂಡ 20 ಕೋಟಿ ರುಪಾಯಿ ಬಹುಮಾನ ಪಡೆದುಕೊಳ್ಳಲಿದೆ.

    MORE
    GALLERIES

  • 57

    WPL 2023: ಚೊಚ್ಚಲ ಟ್ರೋಫಿ ಗೆದ್ದ ಮುಂಬೈಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು? ಎಲ್ಲಾ ಪ್ರಶಸ್ತಿ ವಿಜೇತರ ವಿವರ ಇಲ್ಲಿದೆ

    ಐಪಿಎಲ್ ಫ್ರಾಂಚೈಸಿಗಳ ಒಡೆತನದ ತಂಡಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾದ ಎಸ್​ಎ ಟಿ20 ಲೀಗ್‌ನಲ್ಲಿ ವಿಜೇತ ತಂಡಕ್ಕೆ 15 ಕೋಟಿ ರುಪಾಯಿ ಪಡೆದುಕೊಳ್ಳಲಿದೆ. ವಿಂಡೀಸ್​ನ ಕೆರಿಬಿಯನ್ ಪ್ರೀಮಿಯರ್ ಲೀಗ್​ 8 ಕೋಟಿ ರೂಪಾಯಿ ಪಡೆದುಕೊಳ್ಳಲಿದೆ. ಈ ಮೂರು ಲೀಗ್ ಹೊರೆತುಪಡಿಸಿದರೆ WPL 4ನೇ ಸ್ಥಾನ ಪಡೆದುಕೊಂಡಿದೆ. ಪಾಕಿಸ್ತಾನ್ ಸೂಪರ್​ ಲೀಗ್​ನಲ್ಲಿ ಚಾಂಪಿಯನ್ ತಂಡ 3.4 ಕೋಟಿ ರೂಪಾಯಿ ಪಡೆದುಕೊಂಡಿದೆ.

    MORE
    GALLERIES

  • 67

    WPL 2023: ಚೊಚ್ಚಲ ಟ್ರೋಫಿ ಗೆದ್ದ ಮುಂಬೈಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು? ಎಲ್ಲಾ ಪ್ರಶಸ್ತಿ ವಿಜೇತರ ವಿವರ ಇಲ್ಲಿದೆ

    ಇನ್ನೂ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಗರಿಷ್ಠ ವಿಕೆಟ್ ಜೊತೆಗೆ 270 ರನ್​ ಬಾರಿಸಿದ ಚಾಂಪಿಯನ್ ತಂಡದ ಹೇಲಿ ಮ್ಯಾಥ್ಯೂಸ್​ ಟೂರ್ನಿಯ ಅತ್ಯಮೂಲ್ಯ ಆಟಗಾರ್ತಿ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿಗೆ 5 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ.

    MORE
    GALLERIES

  • 77

    WPL 2023: ಚೊಚ್ಚಲ ಟ್ರೋಫಿ ಗೆದ್ದ ಮುಂಬೈಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು? ಎಲ್ಲಾ ಪ್ರಶಸ್ತಿ ವಿಜೇತರ ವಿವರ ಇಲ್ಲಿದೆ

    ಇನ್ನು ಆರೆಂಜ್​ ಕ್ಯಾಪ್​ ಮೆಗ್​ ಲ್ಯಾನಿಂಗ್, ಪರ್ಪಲ್​ ಕ್ಯಾಪ್​ ಹೇಲಿ ಮ್ಯಾಥ್ಯೂಸ್ ಪಡೆದುಕೊಂಡಿದ್ದಾರೆ. ಪಂದ್ಯಾವಳಿಯ ಅತ್ಯುತ್ತಮ ಕ್ಯಾಚ್​ ಅನ್ನು ಮುಂಬೈ ನಾಯಕಿ ಹರ್ಮನ್​ಪ್ರೀತ್ ಕೌರ್, ಪವರ್​ಫುಲ್ ಸ್ಟ್ರೈಕರ್​ ಆಫ್​  ದ ಸೀಸನ್​ ಪ್ರಶಸ್ತಿಯನ್ನು ಆರ್​ಸಿಬಿಯ ಸೋಫಿ ಡಿವೈನ್​ ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಗಳಿಗೆ ತಲಾ 5 ಲಕ್ಷ ರೂಪಾಯಿ ಸಿಗಲಿದೆ.

    MORE
    GALLERIES