ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಮಾಜಿ ನಾಯಕ ಎಂಎಸ್ ಧೋನಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
2/ 10
ಗೌತಮ್ ಗಂಭೀರ್ ಟೀಂ ಇಂಡಿಯಾ ಸಿಮೀತ ಓವರ್ ಕ್ರಿಕೆಟ್ನ ಪ್ರಮುಖ ಬ್ಯಾಟ್ಸ್ಮನ್ ಆಗಿದ್ದರು ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿವೃತ್ತಿಗೂ ಮುನ್ನ ಗಂಭೀರ್ 147 ಏಕದಿನ ಪಂದ್ಯಗಳನ್ನು ಆಡಿದ್ದರು. ಇದರಲ್ಲಿ 11 ಶತಕ ಹಾಗು 34 ಅರ್ಧಶತಕ ಸೇರಿ ಒಟ್ಟು 5,238 ರನ್ ಕಲೆಹಾಕಿದ್ದರು.
3/ 10
ಅದರಲ್ಲು 2011ರ ವಿಶ್ವಕಪ್ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಗಂಭೀರ್ ಬಾರಿಸಿದ 97 ರನ್ ಭಾರತ ಗೆಲ್ಲಲು ಪ್ರಮುಖ ಕಾರಣ ಎಂಬುವುದನ್ನು ಮರೆಯುವಂತಿಲ್ಲ.
4/ 10
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಫೈನಲ್ ಫೈಟ್ನಲ್ಲಿ ಗಂಭೀರ್ 122 ಎಸೆತಗಳಲ್ಲಿ 97 ರನ್ ಗಳಿಸಿ ಔಟಾಗಿದ್ದರು. ನಾನು ಶತಕ ಬಾರಿಸಲು ವಿಫಲವಾದೆ, ಇದಕ್ಕೆ ಕಾರಣ ಎಂಎಸ್ ಧೋನಿ ಎಂದು ಗಂಭೀರ್ ಎಂದು ಆರೋಪ ಮಾಡಿದ್ದಾರೆ.
5/ 10
ಶ್ರೀಲಂಕಾ ನೀಡಿದ್ದ 275 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಮೊದಲಿಗೆ ವೀರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಕ್ರೀಸ್ಗೆ ಬಂದ ಗಂಭೀರ್ ಅತ್ಯುತ್ತಮ ಆಟ ಪ್ರದರ್ಶಿಸಿದರು. ನಾಯಕ ಧೋನಿ ಜೊತೆಗೂಡಿ 109 ರನ್ಗಳ ಕಾಣಿಕೆ ನೀಡಿದರು. ಆದರೆ, ಶತಕದ ಅಂಚಿನಲ್ಲಿ ಎಡವಿದ್ದರು.
6/ 10
ಈ ಬಗ್ಗೆ ಮಾತನಾಡಿರುವ ಗಂಭೀರ್, ನಾನು 97 ರನ್ ತಲುಪುವ ತನಕ ನನ್ನ ವೈಯಕ್ತಿಕ ಮೊತ್ತದ ಕಡೆ ಯೋಚಿಸಿರಲಿಲ್ಲ. ಟಾರ್ಗೆಟ್ ಬೆನ್ನಟ್ಟುವುದು ನನ್ನ ಗುರಿಯಾಗಿತ್ತು. ಆದರೆ, ನಾನು 97 ರನ್ ಗಳಿಸಿದಾಗ ಧೋನಿ ನನ್ನ ಬಳಿ ಬಂದು ನಿನ್ನ ಶತಕ ಪೂರ್ಣಗೊಳ್ಳಲು ಕೇವಲ 3 ರನ್ ಅಷ್ಟೇ ಬೇಕಾಗಿದೆ ಎಂದರು.
7/ 10
ಧೋನಿ ಹೀಗೆ ಹೇಳಿದಾಗ ನನ್ನ ಗಮನ ವೈಯಕ್ತಿಕ ಸಾಧನೆಯತ್ತ ತಿರುಗಿತು. ಏಕಾಗ್ರತೆ ಕಳೆದುಕೊಂಡೆ. ಟಾರ್ಗೆಟ್ ಅನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಬ್ಯಾಟ್ ಬೀಸುತ್ತಿದ್ದರೆ ನಾನು ಸುಲಭವಾಗಿ ಶತಕ ಪೂರೈಸುತ್ತಿದ್ದೆ. ಆದರೆ, ಧೋನಿ ಹೇಳಿದ ಆ ಮಾತು ನಾನು 97 ರನ್ಗೆ ಔಟ್ ಆಗುವಂತೆ ಮಾಡಿತು - ಗಂಭೀರ್.
8/ 10
ಈ ಹಿಂದೆ ಕೂಡ ಗಂಭೀರ್ ಅನೇಕ ಬಾರಿ ವಿಶ್ವಕಪ್ ಫೈನಲ್ನಲ್ಲಿ ಶತಕದ ಅಂಚಿನಲ್ಲಿ ಎಡವಿದ ಬಗ್ಗೆ ಬೇಸರ ಹೊರ ಹಾಕಿದ್ದರು.
9/ 10
ವಿಶ್ವಕಪ್ ಫೈನಲ್ನಲ್ಲಿ 97 ರನ್ಗೆ ಔಟ್ ಆಗಿದ್ದು ತುಂಬಾನೆ ಬೇಸರ ತಂದಿದೆ. ಅದಕ್ಕಿಂತಲು ಪಂದ್ಯದ ಕೊನೆಯವರೆಗೂ ನಿಂತು ವಿನ್ನಿಂಗ್ ಶಾಟ್ ಹೊಡೆಯಲು ಮಿಸ್ ಆಗಿದ್ದು ಇನ್ನೂ ನೋವುಂಟು ಮಾಡಿತು. ಆದರೆ, ದೇಶಕ್ಕೋಸ್ಕರ ವಿಶ್ವಕಪ್ ಗೆಲ್ಲಲು ನನ್ನ 97 ರನ್ ಸಹಾಯವಾಗಿದೆ ಎಂಬುದು ಸಂತಸ ನೀಡಿದೆ ಎಂದು ಹೇಳಿದ್ದರು.
10/ 10
ಗಂಭೀರ್ ಅವರು 2018, ಡಿಸೆಂಬರ್ 3 ರಂದು ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದರು.