ಮಾರಕ ವೇಗಿ ಎದುರು ಬ್ಯಾಟ್ ಬೀಸಲಿ ನೋಡೋಣ: ರೋಹಿತ್ ಶರ್ಮಾಗೆ ಸವಾಲು..!
Rohit Sharma: ಹಿಟ್ ಮ್ಯಾನ್ ಬ್ಯಾಟ್ ಬೀಸಲಾರಂಭಿಸಿದ್ರೆ ಚೆಂಡು ಬೌಂಡರಿ ಗೆರೆಗಳನ್ನು ಸರಾಗವಾಗಿ ದಾಟುತ್ತಿರುತ್ತವೆ. ಹೀಗಾಗಿಯೇ ಟೀಮ್ ಇಂಡಿಯಾ ಓಪನರ್ಗೆ ಚೆಂಡೆಸಲು ಅನೇಕ ಬೌಲರ್ಗಳು ಹೆದರುತ್ತಾರೆ.
News18 Kannada | June 8, 2020, 8:27 PM IST
1/ 9
ಏಕದಿನ ಪಂದ್ಯಗಳಲ್ಲಿ 29 ಶತಕ, 42 ಅರ್ಧಶತಕ, ಮೂರು ಡಬಲ್ ಸೆಂಚುರಿ ಬಾರಿಸಿದ ಏಕೈಕ ಬ್ಯಾಟ್ಸ್ಮನ್, ಬ್ಯಾಟಿಂಗ್ ಸರಾಸರಿ 50 ರನ್, ಟಿ20ಯಲ್ಲಿ 4 ಶತಕ ಸಿಡಿಸಿದ ಆಟಗಾರ. ಈ ಅಂಕಿ ಅಂಶಗಳನ್ನು ಗಮನಿಸಿದ್ರೆ ರೋಹಿತ್ ಶರ್ಮಾ ಎಂತಹ ಬ್ಯಾಟ್ಸ್ಮನ್ ಎಂಬುದನ್ನು ಊಹಿಸಿಕೊಳ್ಳಬಹುದು.
2/ 9
ಅದು ವೇಗದ ಬೌಲರ್ ಆಗಿರಲಿ ಅಥವಾ ಸ್ಪಿನ್ನರ್ ಆಗಿರಲಿ ಹಿಟ್ ಮ್ಯಾನ್ ಬ್ಯಾಟ್ ಬೀಸಲಾರಂಭಿಸಿದ್ರೆ ಚೆಂಡು ಬೌಂಡರಿ ಗೆರೆಗಳನ್ನು ಸರಾಗವಾಗಿ ದಾಟುತಿರುತ್ತವೆ. ಹೀಗಾಗಿಯೇ ಟೀಮ್ ಇಂಡಿಯಾ ಓಪನರ್ಗೆ ಚೆಂಡೆಸಲು ಅನೇಕ ಬೌಲರ್ಗಳು ಹೆದರುತ್ತಾರೆ.
3/ 9
ಇಂತಹ ರೋಹಿತ್ ಶರ್ಮಾಗೆ ಇದೀಗ ವೆಸ್ಟ್ ಇಂಡೀಸ್ ಕ್ರಿಕೆಟ್ನ ದಿಗ್ಗಜ ಮೈಕಲ್ ಹೋಲ್ಡಿಂಗ್ ಸವಾಲು ಹಾಕಿದ್ದಾರೆ. ಟೀಮ್ ಇಂಡಿಯಾ ಉಪನಾಯಕನಿಗೆ ಅತ್ಯುತ್ತಮ ವೇಗದ ಎದುರು ಸ್ವಾಭಾವಿಕ ಹೊಡೆತಗಳನ್ನು ಬಾರಿಸಲಾಗುವುದಿಲ್ಲ ಎಂದು ಮಾಜಿ ಕೆರಿಬಿಯನ್ ಬೌಲರ್ ಅಭಿಪ್ರಾಯಪಟ್ಟಿದ್ದಾರೆ.
4/ 9
ಅಲ್ಲದೆ ಆಕ್ರಮಣಕಾರಿ ವೇಗದ ಬೌಲಿಂಗ್ನಲ್ಲಿ ರೋಹಿತ್ ಶರ್ಮಾ ಹೇಗೆ ಬ್ಯಾಟಿಂಗ್ ಮಾಡುತ್ತಾರೆ ಎಂಬುದನ್ನು ನಾನು ಎದುರು ನೋಡುತ್ತಿರುವುದಾಗಿ ಮೈಕೆಲ್ ಹೋಲ್ಡಿಂಗ್ ತಿಳಿಸಿದ್ದಾರೆ.
5/ 9
ಉತ್ತಮ ಬ್ಯಾಟ್ಸ್ಮನ್ಗಳು ಅತ್ಯುತ್ತಮ ವೇಗದ ಬೌಲರ್ಗಳ ವಿರುದ್ಧ ತಮ್ಮ ನೈಸರ್ಗಿಕ ಹೊಡೆತಗಳನ್ನು ಬಾರಿಸುವುದು ಕಷ್ಟ. ರೋಹಿತ್ ಶರ್ಮಾ ಮತ್ತು ಎಬಿ ಡಿವಿಲಿಯರ್ಸ್ ಅತ್ಯುತ್ತಮ ಬ್ಯಾಟಿಂಗ್ ಶೈಲಿಯನ್ನು ಹೊಂದಿದ್ದಾರೆ. ಆದರೆ ಅವರ ಸಾಮರ್ಥ್ಯ ಇಂದಿನ ಬೌಲರ್ಗಳ ವೇಗಕ್ಕೆ ಅನುಗುಣವಾಗಿದೆ.
6/ 9
ಆದರೆ ನಮ್ಮ ಕಾಲದ ವೇಗಿಗಳ ಮುಂದೆ ಇವರ ಬ್ಯಾಟಿಂಗ್ ಪರಾಕ್ರಮ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಡೇಲ್ ಸ್ಟೇನ್, ಬ್ರೆಟ್ ಲೀ ಮತ್ತು ಶೋಯೆಬ್ ಅಖ್ತರ್ ಅವರಂತಹ ವೇಗಿಗಳ ಮುಂದೆ ಹೇಗೆ ಬ್ಯಾಟ್ ಬೀಸುತ್ತಾರೆ ಎಂಬುದನ್ನು ನೋಡ ಬಯಸುವೆ ಎಂದು ಹೋಲ್ಡಿಂಗ್ ತಿಳಿಸಿದರು.
7/ 9
80 ದಶಕ ಮಾರಕ ವೇಗಿಯಾಗಿದ್ದ ಮೈಕೆಲ್ ಹೋಲ್ಡಿಂಗ್ ಎಸೆತಗಳನ್ನು ಎದುರಿಸಲು ಬ್ಯಾಟ್ಸ್ಮನ್ಗಳು ಪರದಾಡುತ್ತಿದ್ದರು. ಇನ್ನು 60 ಟೆಸ್ಟ್ ಪಂದ್ಯಗಳಲ್ಲಿ 249 ವಿಕೆಟ್ ಹಾಗೂ 102 ಏಕದಿನ ಪಂದ್ಯಗಳಿಂದ 142 ವಿಕೆಟ್ ಹಾಗೆಯೇ 778 ಪ್ರಥಮ ದರ್ಜೆ ವಿಕೆಟ್ ಮತ್ತು 343 ಲಿಸ್ಟ್ ಎ ವಿಕೆಟ್ ಉರುಳಿಸಿರುವುದು ಮೈಕೆಲ್ ಹೋಲ್ಡಿಂಗ್ ಸಾಧನೆಗೆ ಹಿಡಿದ ಕನ್ನಡಿ.