ಇತ್ತೀಚೆಗಷ್ಟೆ ಬಿಡುಗಡೆಗೊಂಡ 2019ರ ವಿಸ್ಡನ್ ವರ್ಷದ ಕ್ರಿಕೆಟಿಗ ಪ್ರಶಸ್ತಿ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2/ 9
2019ರ ವಿಸ್ಡನ್ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಬಾಜಿಕೊಂಡಿದ್ದರು.
3/ 9
ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ಗೆಲ್ಲಲು ಪ್ರಮುಖ ಕಾರಣ ಹಾಗೂ ಆ್ಯಶಸ್ ಸರಣಿಯಲ್ಲಿ ಅತ್ಯತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಬೆನ್ ಸ್ಟೋಕ್ಸ್ ಈ ಪ್ರಶಸ್ತಿಗೆ ಭಾಜನರಾಗಿದ್ದರು.
4/ 9
ಈ ಮೂಲಕ 2005ರಲ್ಲಿ ಆ್ಯಂಡ್ರೂ ಫ್ಲಿಂಟಾಫ್ ನಂತರ ಈ ಪ್ರಶಸ್ತಿ ಪಡೆದುಕೊಂಡ ಇಂಗ್ಲೆಂಡ್ ಆಟಗಾರ ಎಂಬ ಹೆಗ್ಗಳಿಕೆಗೂ ಬೆನ್ ಸ್ಟೋಕ್ಸ್ ಪಾತ್ರರಾಗಿದ್ದರು.
5/ 9
ಬೆನ್ ಸ್ಟೋಕ್ಸ್ ಜೊತೆಗೆ ಆಸ್ಟ್ರೇಲಿಯಾ ತಂಡದ ಮಹಿಳಾ ಆಟಗಾರ್ತಿ ಎಲಿಸೆ ಪೆರ್ರಿ, ಆ್ಯಂಡ್ರೋ ರಸೆಲ್, ಜೋಪ್ರಾ ಆರ್ಚರ್, ಪ್ಯಾಟ್ ಕಮ್ಮಿನ್ಸ್, ಮಾರ್ನಸ್ ಲಾಬುಶೇನ್, ಎಲಿಸೆ ಪೆರ್ರಿ ಹಾಗೂ ಎಸೆಕ್ಸ್ ಆಟಗಾರ ಸಿಮೊನ್ ಹಾರ್ಮರ್ ಇದರೆ ವಿಭಾದಲ್ಲಿ ಪ್ರಶಸ್ತಿ ಬಾಜಿಕೊಂಡಿದ್ದರು.
6/ 9
ಸದ್ಯ ಈ ವಿಚಾರವಾಗಿ ವಿವಿಎಸ್ ಲಕ್ಷ್ಮಣ್ ಗರಂ ಆಗಿದ್ದಾರೆ. ಕಳೆದ ವರ್ಷ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಐದು ಶತಕ ಸಿಡಿಸಿ ಈವರೆಗೆ ಯಾರೂ ಮಾಡಿರದ ಸಾಧನೆ ಮಾಡಿದ್ದ ರೋಹಿತ್ ಶರ್ಮಾ ಹೆಸರು ವಿಸ್ಡನ್ ಪಟ್ಟಿಯಲ್ಲಿ ಇಲ್ಲದಿರುವುದು ಅಚ್ಚರಿ ತಂದಿದೆ ಎಂದಿದ್ದಾರೆ.
7/ 9
ಕ್ರಿಕೆಟ್ ಕ್ರೀಡೆ ಕುರಿತು ತಿಳಿದುಕೊಂಡಿರುವವರು ಅಥವಾ ಈ ಬಗ್ಗೆ ಫಾಲೋ ಮಾಡುವವರು ವಿಸ್ಡನ್ ಪಟ್ಟಿಯಲ್ಲಿ ರೋಹಿತ್ ಹೆಸರು ಇಲ್ಲದಿರುವುದನ್ನು ಕಂಡರೆ ನಿಜಕ್ಕೂ ಅಚ್ಚರಿಗೊಳ್ಳುತ್ತಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.
8/ 9
ಆ್ಯಶಸ್ ಒಂದು ಪ್ರಮುಖ ಸರಣಿ ಹೌದು, ಆದರೆ ಐಸಿಸಿ ವಿಶ್ವಕಪ್ಗಿಂತ ದೊಡ್ದದಲ್ಲ. ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಪ್ರದರ್ಶನ ಹೇಗಿತ್ತು ಎಂಬುದು ಇಡೀ ಕ್ರಿಕೆಟ್ ಜಗತ್ತು ಕಂಡಿದೆ. ರೋಹಿತ್ ಗಳಿಸಿದ ಪ್ರತಿಯೊಂದು ಶತಕ ಪ್ರಮುಖವಾಗಿತ್ತು- ಲಕ್ಷ್ಮಣ್.
9/ 9
2019 ವಿಸ್ಡನ್ ವರ್ಷದ ಕ್ರಿಕೆಟಿಗ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರು ಇಲ್ಲದಿರುವುದನ್ನು ಕಂಡು ನನಗೆ ನಿಜಕ್ಕೂ ಶಾಕ್ ಆಗಿದೆ ಎಂದು ಲಕ್ಷ್ಮಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.