ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ಗೆ (Women's Premier League) ಭರ್ಜರಿ ಆರಂಭ ಸಿಕ್ಕಿದೆ. ಶನಿವಾರ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (Gujarat Giants) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ಮುಖಾಮುಖಿಯಾಗಿವೆ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿಯರು, ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಸೇರಿದಂತೆ ಹಲವರು ಸೆಲೆಬ್ರೆಟಿಗಳು ಭಾಗವಹಿಸಿದ್ದರು.
ನಾಯಕಿ ಹರ್ಮನ್ ಪ್ರೀತ್ ಕೌರ್ 30 ಎಸೆತಗಳಲ್ಲಿ 65 ಅಮೆಲಿಯಾ ಕೆರ್ 24 ಎಸೆತಗಳಲ್ಲಿ 45, ಹೇಲಿ ಮ್ಯಾಥ್ಯೂಸ್ 31 ಎಸೆತಗಳಲ್ಲಿ 47 ರನ್, ಸೀವರ್ 18 ಎಸೆತಗಳಲ್ಲಿ 23 ರನ್ಗಳಿಸಿ ಮೊದಲ ಪಂದ್ಯದಲ್ಲೇ ತಂಡ ದ್ವಿಶತಕ ದಾಖಲಿಸಲು ನೆರವಾಗಿದ್ದಾರೆ. ಗುಜರಾತ್ ಪರ ಸ್ನೇಹ್ ರಾಣಾ 2, ಜಾರ್ಜಿಯಾ ವೇರ್ಹ್ಯಾಮ್, ತನ್ವರ್ ಹಾಗೂ ಗಾರ್ಡ್ನರ್ ತಲಾ ಒಂದು ವಿಕೆಟ್ ಪಡೆದರು.