ಗ್ರ್ಯಾನ್ ಸ್ಲಾಮ್ ಗೆದ್ದ ಬಿಯಾಂಕಗೆ ಕೇವಲ 19 ವರ್ಷ; ಮುದ್ದು ಮುಖದ ಚೆಲುವೆಯ ಫೋಟೋ ಇಲ್ಲಿದೆ ನೋಡಿ!
ಬಿಯಾಂಕ ಆಂಡ್ರೆಸ್ಕಾ ಹುಟ್ಟಿದ್ದು 2000ನೇ ಇಸವಿ ಜೂನ್ 16 ರಂದು! ಇಂದು ಯುಎಸ್ ಓಪನ್ ಟೆನಿಸ್ ಟೂರ್ನಿಯ ರೋಚಕ ಫೈನಲ್ನಲ್ಲಿ 23 ಗ್ರಾನ್ ಸ್ಲಾಮ್ ವಿಜೇತೆ ಅಮೆರಿಕದ ಪ್ರಬಲ ಆಟಗಾರ್ತಿ ಸೆರೆನಾ ವಿಲಿಯಮ್ಸ್ರನ್ನು ಸೋಲಿಸಿದ್ದು 19 ವರ್ಷ ಪ್ರಾಯದ ಬಿಯಾಂಕ ಆಂಡ್ರೆಸ್ಕಾ. 6-3, 7-5 ಅಂಕಗಳ ಅಂತರದಿಂದ ಗೆಲುವು ದಾಖಲು ಮಾಡಿ ಚೊಚ್ಚಲ ಯುಎಸ್ ಓಪನ್ ಕಿರೀಟ ತೊಟ್ಟು ಇತಿಹಾಸ ಪುಟ ಸೇರಿದರು. ಅಲ್ಲದೆ ಬಿಯಾಂಕ ಯುಎಸ್ ಓಪನ್ ಜಯಿಸಿದ ಮೊತ್ತಮೊದಲ ಕೆನಡಾ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾದರು. 19ರ ಹರೆಯದ ಮುದ್ದು ಮುಖದ ಚೆಲುವೆಯ ಫೋಟೋ ಇಲ್ಲಿದೆ ನೋಡಿ… (ಫೋಟೋ ಕೃಪೆ; ಯುಎಸ್ ಓಪನ್, ಟ್ವಿಟ್ಟರ್)