ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ತನ್ನ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟಾಪ್ 10ರಲ್ಲಿ ಟೀಂ ಇಂಡಿಯಾದ ಮೂರು ಬ್ಯಾಟ್ಸ್ಮನ್ಗಳು ಸ್ಥಾನ ಪಡೆದುಕೊಂಡಿದ್ದಾರೆ.
2/ 12
ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ನಂತರ ಐಸಿಸಿ ನೂತನ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ಪಟ್ಟಿ ಪ್ರಕಟಿಸಿದೆ.
3/ 12
ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿ ಭದ್ರವಾಗಿದ್ದರೆ.
4/ 12
ಕಳೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಟೆಸ್ಟ್ ಸ್ಪೆಷಲಿಸ್ಟ್ ಚೆತೇಶ್ವರ್ ಪೂಜಾರ 6ನೇ ಸ್ಥಾನಕ್ಕೇರಿದ್ದಾರೆ.
5/ 12
ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದ ಅಜಿಂಕ್ಯ ರಹಾನೆ 8ನೇ ಸ್ಥಾನಕ್ಕೇರಿದ್ದಾರೆ.
6/ 12
ಕೊಹ್ಲ 862 ರೇಟಿಂಗ್ ಹೊಂದಿದ್ದರೆ, ಪೂಜಾರ 760 ರೇಟಿಂಗ್ನೊಂದಿಗೆ ಒಂದು ಸ್ಥಾನ ಮೇಲೇರಿ 6ನೇ ಸ್ಥಾನದಲ್ಲಿದ್ದಾರೆ. ರಹಾನೆ 748 ರೇಟಿಂಗ್ ಸಂಪಾದಿಸಿದ್ದಾರೆ.
7/ 12
ಇನ್ನು ಯುವ ವಿಕೆಟ್ ಕೀಪರ್ ರಿಷಭ್ ಪಂತ್ 13 ಮತ್ತು ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ 18ರಲ್ಲಿದ್ದಾರೆ.
8/ 12
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 919 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇನ್ನು 891 ಅಂಕಗಳೊಂದಿಗೆ ಸ್ಟೀವ್ ಸ್ಮಿತ್ 2ನೇ ಸ್ಥಾನದಲ್ಲಿದ್ದಾರೆ.
9/ 12
ಮಾರ್ನಸ್ ಲಾಬುಶೇನ್(878) ಮೂರನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ನಾಯಕ ಜೋ ರೂಟ್( 823) 5ನೇ ಸ್ಥಾನದಲ್ಲಿದ್ದಾರೆ.
10/ 12
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಗಮನಾರ್ಗ ಪ್ರದರ್ಶನ ತೋರಲು ವಿಫಲರಾದ ಬಾಬರ್ ಅಜಮ್(755) ಒಂದು ಸ್ಥಾನ ಕುಸಿದು 7ನೇ ಸ್ಥಾನ ಪಡೆದಿದ್ದಾರೆ.
11/ 12
ಬೌಲರ್ಗಳ ಪೈಕಿ ರವಿಚಂದ್ರನ್ ಅಶ್ವಿನ್(760) ಮತ್ತು ವೇಗಿ ಜಸ್ಪ್ರೀತ್ ಬುಮ್ರಾ(757) ಕ್ರಮವಾಗಿ 8 ಮತ್ತು 9ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
12/ 12
ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್(908), ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್(839) ಮತ್ತು ಕಿವೀಸ್ ವೇಗಿ ನೈಲ್ ವ್ಯಾಗ್ನರ್(825) ಮೊದಲ 3 ಸ್ಥಾನದಲ್ಲಿದ್ದಾರೆ.