ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

First published:

  • 114

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    ಸ್ವಾಮಿ ವಿವೇಕಾನಂದ. ಈ ಹೆಸರು ಇಂದಿಗೂ ಪ್ರೇರಣೆ. ತಮ್ಮ ಭಾಷಣದ ಮೂಲಕ ಹೇಗೆ ಜಗತ್ತಿನ ಗಮನ ಸೆಳೆದಿದ್ದ ಸ್ವಾಮಿ ವಿವೇಕಾನಂದರ ಬರವಣಿಗೆಗಳೂ ಇಂದಿಗೂ ಯುವ ಸಮೂಹಕ್ಕೆ ಸ್ಪೂರ್ತಿಯಾಗಿದೆ. ಹೀಗೆ ಸ್ವಾಮಿ ಅದೆಷ್ಟೋ ಮಂದಿಯ ಜೀವನವನ್ನೇ ಪರೋಕ್ಷವಾಗಿ ವಿವೇಕಾನಂದರು ಬದಲಿಸಿದ್ದಾರೆ.

    MORE
    GALLERIES

  • 214

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ವಿವೇಕಾನಂದರ ಬರಹಗಳು ಕೂಡ ಸಾಕಷ್ಟು ಪ್ರಭಾವ ಬೀರಿದೆ ಎಂಬುದಕ್ಕೆ ಗಾಂಧಿಜೀ, ಸುಭಾಷ್ ಚಂದ್ರ ಬೋಸ್ ಅವರ ಮಾತುಗಳೇ ಸಾಕ್ಷಿ. ಶ್ರೇಷ್ಠ ಚಿಂತಕ, ಬೋಧಕ ಮತ್ತು ಮಾನವೀಯತೆಯ ಪ್ರಚಾರಕ್ಕೆ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಅಂದಾಜು ಮಾಡಲಾಗುವುದಿಲ್ಲ. ಇವೆಲ್ಲದರ ನಡುವೆ ಮತ್ತೊಂದು ಅಚ್ಚರಿಯ ವಿಷಯವೆಂದರೆ ವಿವೇಕಾನಂದರು ಕ್ರಿಕೆಟ್ ಆಡಿರುವುದು...

    MORE
    GALLERIES

  • 314

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    ಅದು ಕೂಡ ಬ್ರಿಟಿಷರ ವಿರುದ್ಧ ಎಂಬುದು ಮತ್ತೊಂದು ಅಚ್ಚರಿ. ಹೌದು,ಕೋಲ್ಕತ್ತಾದ ಐತಿಹಾಸಿಕ ಕ್ರೀಡಾಂಗಣ ಈಡನ್ ಗಾರ್ಡನ್‌ನಲ್ಲಿ ಸ್ವಾಮಿ ವಿವೇಕಾನಂದರು ಬ್ಯಾಟ್ ಬೀಸಿದ್ದರು. ಅಲ್ಲದೆ ಬೌಲಿಂಗ್​ನಲ್ಲೂ ಕಮಾಲ್ ಮಾಡಿದ್ದರು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

    MORE
    GALLERIES

  • 414

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    1880 ರಲ್ಲಿ ವಿವೇಕಾನಂದರು ಜನರಲ್ ಅಸೆಂಬ್ಲಿ ಸಂಸ್ಥೆಯ ವಿದ್ಯಾರ್ಥಿಯಾಗಿದ್ದರು. ಅಲ್ಲಿ ಅವರು ಅನೇಕ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಅದರಲ್ಲೂ ದೇಸಿಯ ಆಟಗಳನ್ನು ಬ್ರಿಟಿಷರು ಟೈಮ್‌ಪಾಸ್ ಎಂದು ಕರೆಯುತ್ತಿದ್ದರು.

    MORE
    GALLERIES

  • 514

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    ಕ್ರಿಕೆಟ್ ಒಂದೇ ಉತ್ತಮ ಕ್ರೀಡೆ ಎಂದು ಪರಿಗಣಿಸಲಾಗಿತ್ತು. ಹೀಗಾಗಿಯೇ ಬ್ರಿಟಿಷರು ಹೋದಲ್ಲೆಡೆ ಕ್ರಿಕೆಟ್ ಆಟವನ್ನು ಉತ್ತೇಜಿಸಿದ್ದರು. ಹಾಗೆಯೇ ದೇಶದ ಇತರೆ ಭಾಗಗಳಂತೆ ಕೊಲ್ಕತ್ತಾದಲ್ಲೂ ಅನೇಕ ಕ್ರಿಕೆಟ್​ ಕ್ಲಬ್‌ಗಳನ್ನು ಪ್ರಾರಂಭಿಸಿದ್ದರು. ಇದು ಯುವಕರನ್ನು ಆಕರ್ಷಿಸಿತು. ಬಂಗಾಳ ಭಾಗದಲ್ಲೂ ಕ್ರಿಕೆಟ್ ಕ್ರೇಜ್ ಶುರುವಾಗಿತ್ತು.

    MORE
    GALLERIES

  • 614

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    ಬ್ರಿಟಿಷರು 1792 ರಲ್ಲೇ ಕೊಲ್ಕತ್ತಾದಲ್ಲಿ ಕ್ರಿಕೆಟ್ ಕ್ಲಬ್ ಅನ್ನು ಸ್ಥಾಪಿಸಿದ್ದರು. ಇದರ ನಂತರ ಪ್ರಸಿದ್ಧವಾದ ಕ್ರಿಕೆಟ್ ಕ್ಲಬ್ ಅನ್ನು 1884 ರಲ್ಲಿ ರಚಿಸಲಾಯಿತು. ಇದನ್ನು ಅಂದಿನ ಗಣಿತ ತಜ್ಞ ಸರ್ದಾರಂಜನ್ ರೇ ಸ್ಥಾಪಿಸಿದ್ದರು.

    MORE
    GALLERIES

  • 714

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    ಈ ಕ್ಲಬ್‌ನ ಹೆಸರು ಟೌನ್ ಕ್ಲಬ್. ಇಂತಹದೊಂದು ಕ್ಲಬ್ ಸ್ಥಾಪನೆಯ ಉದ್ದೇಶವೇ  ಕ್ರೀಡೆಯಲ್ಲೂ ಬ್ರಿಟಿಷರ ವಿರುದ್ಧ ಸೆಡ್ಡು ಹೊಡೆಯುವುದಾಗಿತ್ತು.

    MORE
    GALLERIES

  • 814

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    ಬ್ರಿಡ್ಜ್ ವರದಿಯ ಪ್ರಕಾರ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಹೆಮ್ ಚಂದ್ರ ಘೋಷ್ ಅವರು ಸ್ವಾಮಿ ವಿವೇಕಾನಂದರನ್ನು ಕ್ರಿಕೆಟ್‌ನಲ್ಲಿ ತಮ್ಮ ಜೊತೆ ಕೈ ಜೋಡಿಸಲು ಇಚ್ಛಿಸುತ್ತೀರಾ ಎಂದು ಕೇಳಿದ್ದರು.

    MORE
    GALLERIES

  • 914

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    ಸಾಧನೆಗೆ ಹಾದಿ ಹಲವು, ಸಾಧಿಸಿದವನಿಗೆ ಸಾವಿಲ್ಲ ಎಂದು ನಂಬಿದ್ದ ಸ್ವಾಮಿ ವಿವೇಕಾನಂದರು ಮರು ಮಾತನಾಡದೆ ಖಂಡಿತವಾಗಿಯು ಪಾಲ್ಗೊಳ್ಳುವುದಾಗಿ ತಿಳಿಸಿದರು. ಅದರಂತೆ ಘೋಷ್ ಅವರು ಸ್ವಾಮಿ ವಿವೇಕಾನಂದರಿಗೆ ಕೋಚಿಂಗ್ ನೀಡಿದರು.

    MORE
    GALLERIES

  • 1014

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    ಸತತ ಅಭ್ಯಾಸದ ಫಲವಾಗಿ ವಿವೇಕಾನಂದರು ಪ್ರಭಾವಿ ಬೌಲರ್ ಆಗಿ ಹೊರಹೊಮ್ಮಿದ್ದರು. 1884 ರಲ್ಲಿ ಬ್ರಿಟಿಷರ ಕೊಲ್ಕತ್ತಾ ಕ್ರಿಕೆಟ್ ಕ್ಲಬ್ ಮತ್ತು ವಿವೇಕಾನಂದರ ಟೌನ್ ಕ್ಲಬ್ ನಡುವೆ ಪಂದ್ಯ ನಡೆಯಿತು.

    MORE
    GALLERIES

  • 1114

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    ಸ್ವಾಮಿ ವಿವೇಕಾನಂದರಿಗೆ ಚೆಂಡು ನೀಡುವಾಗ ಘೋಷ್ ಹೇಳಿದ್ದು ಒಂದೇ ಮಾತು. ಇಲ್ಲಿ ಭಾವನೆಗಳಿಗೆ ಬೆಲೆಯಿಲ್ಲ. ಬೌಲಿಂಗ್​ನಲ್ಲಿ ಸಂಪೂರ್ಣ ಗಮನವನ್ನು ಕೇಂದ್ರಿಕರಿಸು ಎಂದು.

    MORE
    GALLERIES

  • 1214

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    ಅತ್ತ ಸ್ಟ್ರೈಕರ್ ಎಂಡ್​ನಿಂದ ಸ್ವಾಮಿ ವಿವೇಕಾನಂದರು ಓವರ್​ ಎಸೆಯಲು ಆರಂಭಿಸಿದರು...ಒಂದು...ಎರಡು...ಮೂರು...ನಾಲ್ಕು...ಹೀಗೆ ಬ್ರಿಟಿಷರ ವಿಕೆಟ್​ಗಳು ಉರುಳಾರಂಭಿಸಿತು.

    MORE
    GALLERIES

  • 1314

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    ಬ್ರಿಟಿಷರು 20 ರನ್​ಗಳಿಸುವಷ್ಟರಲ್ಲಿ ಏಳು ಮಂದಿಗೆ ಸ್ವಾಮಿ ವಿವೇಕಾನಂದರು ಪೆವಿಲಿಯನ್ ಹಾದಿ ತೋರಿಸಿಯಾಗಿತ್ತು. ಮೊದಲ ಪಂದ್ಯದಲ್ಲೇ 7 ವಿಕೆಟ್ ಉರುಳಿಸಿ ಮಿಂಚಿದ್ದರು.

    MORE
    GALLERIES

  • 1414

    ಆಧ್ಯಾತ್ಮಿಕ ಜ್ಞಾನ ಮಾತ್ರವಲ್ಲ, ಕ್ರಿಕೆಟ್​ನಲ್ಲೂ ಕಮಾಲ್ ಮಾಡಿದ್ದರು ಸ್ವಾಮಿ ವಿವೇಕಾನಂದರು

    ಟೌನ್ ಕ್ರಿಕೆಟ್​ ಕ್ಲಬ್​ನ ಇತಿಹಾಸ ಪುಟಗಳಲ್ಲಿ ಇಂದಿಗೂ ಸ್ವಾಮಿ ವಿವೇಕಾನಂದರ ಮಾರಕ ಬೌಲಿಂಗ್ ದಾಖಲೆಯಾಗಿ ಉಳಿದಿದೆ. ಕ್ರಿಕೆಟ್ ಮಾತ್ರವಲ್ಲದೇ, ಆಧ್ಯಾತ್ಮಿಕ ಜ್ಞಾನದೊಂದಿಗೆ ಫುಟ್ಬಾಲ್, ಬಾಕ್ಸಿಂಗ್ ಮತ್ತು ಫೆನ್ಸಿಂಗ್ ಬಗ್ಗೆಯೂ ಸ್ವಾಮಿ ವಿವೇಕಾನಂದರು ಹೆಚ್ಚಿನ ಆಸಕ್ತಿ ಹೊಂದಿದ್ದರು ಎಂಬುದೇ ಮತ್ತೊಂದು ಅಚ್ಚರಿ.

    MORE
    GALLERIES