ಇನ್ಸ್ಟಾಗ್ರಾಂ ಒಂದು ಪೋಸ್ಟ್ಗೆ ಕೊಹ್ಲಿ ಪಡೆದ ಹಣ ಎಷ್ಟು ಗೊತ್ತಾ? ಇಲ್ಲಿದೆ ಸ್ಟಾರ್ ಆಟಗಾರರ ಸಂಭಾವನೆ
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲೂ ಸಾಧನೆಯೊಂದನ್ನು ಬರೆದಿದ್ದಾರೆ. hopperhq.com ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕೊಹ್ಲಿ ಇನ್ಸ್ಟಾಗ್ರಾಂ ಟಾಪ್ 10 ಸ್ಟೋರ್ಟ್ಸ್ ರಿಚ್ ಲಿಸ್ಟ್ನಲ್ಲಿ 9 ನೇ ಸ್ಥಾನವನ್ನು ಪಡೆದಿದ್ದಾರೆ. ಈ ಮೂಲಕ ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಗುರುತಿಸಿಕೊಂಡ ಭಾರತದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂತೆಯೇ, ಟಾಪ್ 100 ಇನ್ಸ್ಟಾಗ್ರಾಂ ರಿಚ್ ಲೀಸ್ಟ್ನಲ್ಲಿ ಕೊಹ್ಲಿ 23ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನುಇನ್ಸ್ಟಾಗ್ರಾಂ ಟಾಪ್ 10 ರಿಚ್ ಲೀಸ್ಟ್ನಲ್ಲಿ ಸ್ಥಾನ ಪಡೆದಿರುವ ಆಟಗಾರರು ಯಾರು? ಇನ್ಸ್ಟಾಗ್ರಾಂನಲ್ಲಿ ಹಾಕುವ ಪ್ರತಿ ಪೋಸ್ಟ್ಗೆ ಅವರು ಪಡೆಯುವ ಸಂಭಾವನೆ ಎಷ್ಟು? ಇಲ್ಲಿದೆ ಮಾಹಿತಿ..
ಇನ್ಸ್ಟಾಗ್ರಾಂನಲ್ಲಿ ಕೊಹ್ಲಿಗೆ 34 ದಶಲಕ್ಷ ಅಭಿಮಾನಿಗಳಿದ್ದಾರೆ. ಅಂತೇಯೇ, ಇನ್ಸ್ಟಾಗ್ರಾಂನಲ್ಲಿ ಹಾಕುವ ಪ್ರತಿ ಪೋಸ್ಟ್ಗೆ ಕೊಹ್ಲಿ 1.35 ಲಕ್ಷ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
2/ 10
ಟಾಪ್ 10 ಇನ್ಸ್ಟಾಗ್ರಾಂ ಸ್ಟೋರ್ಟ್ಸ್ ರಿಚ್ ಲೀಸ್ಟ್ನಲ್ಲಿ ಪೋರ್ಚುಗಲ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ. ರೊನಾಲ್ಡೊ ಪ್ರತಿ ಪೋಸ್ಟ್ಗೆ 6.74 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.
3/ 10
ಸ್ಟಾರ್ ಫುಟ್ಬಾಲ್ ಆಟಗಾರ ನೆಯ್ಮಾರ್ 2 ಸ್ಥಾನದಲ್ಲಿದ್ದು, ಇನ್ಸ್ಟಾಗ್ರಾಂನಲ್ಲಿ ಹಾಕುವ ಪ್ರತಿ ಪೋಸ್ಟ್ 4.98 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.
4/ 10
ಇನ್ಸ್ಟಾಗ್ರಾಂ ಸ್ಟೋರ್ಟ್ಸ್ ರಿಚ್ ಲೀಸ್ಟ್ನಲ್ಲಿ ಲಿಯೋನಲ್ ಮೆಸ್ಸಿ 3ನೇ ಸ್ಥಾನದಲ್ಲಿದ್ದು, ಪ್ರತಿ ಪೋಸ್ಟ್ಗೆ 4.47 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.
5/ 10
4ನೇ ಸ್ಥಾನದಲ್ಲಿ ಫುಟ್ಬಾಲ್ ಆಟಗಾರ ಡೇವಿಡ್ ಬೇಕಮ್ ಗುರುತಿಸಿಕೊಂಡಿದ್ದು, ಇನ್ಸ್ಟಾಗ್ರಾಂನ ಪ್ರತಿ ಪೋಸ್ಟ್ಗೆ ಬೇಕಮ್ 2.46 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.
6/ 10
ಬಾಸ್ಕೆಟ್ ಬಾಲ್ ಆಟಗಾರ ಲಿಬ್ರಾನ್ 5ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ, ಲಿಬ್ರಾನ್ ಇನ್ಸ್ಟಾಗ್ರಾಂನಲ್ಲಿ ಬಿಡುವ ಪ್ರತಿ ಪೋಸ್ಟ್ಗೆ 1.88 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ
7/ 10
6ನೇ ಸ್ಥಾನದಲ್ಲಿ ಫುಟ್ಬಾಲ್ ತಾರೆ ರೊನಾಲ್ಟಿನೊ ಗುರುತಿಸಿಕೊಂಡಿದ್ದು, ತನ್ನ ಪ್ರತಿ ಪೋಸ್ಟ್ಗೆ 1.77 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.
8/ 10
ಫುಟ್ಬಾಲ್ ಆಟಗಾರ ಗೇರತ್ ಬಾಲೆ ಇನ್ಸ್ಟಾಗ್ರಾಂ ಸ್ಪೋರ್ಟ್ಸ್ ರಿಚ್ ಲೀಸ್ಟ್ನಲ್ಲಿ 7ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಇನ್ಸ್ಟಾಗ್ರಾಂನಲ್ಲಿ ಹಾಕುವ ಪ್ರತಿ ಪೋಸ್ಟ್ಗೆ 1.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.
9/ 10
ಫುಟ್ಬಾಲ್ ಆಟಗಾರ ಲಾಟನ್ ಇಬ್ರಾಹಿಂವಿಕ್ 8ನೇ ಸ್ಥಾನದಲ್ಲಿದ್ದು, ಲಾಟನ್ ಇನ್ಸ್ಟಾಗ್ರಾಂನಲ್ಲಿ ಹಾಕುವ ಪ್ರತಿ ಪೋಸ್ಟ್ಗೆ 1.38 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.
10/ 10
ಫುಟ್ಬಾಲ್ ಆಟಗಾರ ಲೂಯಿಸ್ ಸುಮಾಜೆ ಇನ್ಸ್ಟಾಗ್ರಾಂ ಸ್ಟೋರ್ಟ್ಸ್ ರಿಚ್ ಲೀಸ್ಟ್ನಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಇವರು ಅಪ್ಲೋಡ್ ಮಾಡುವ ಪ್ರತಿ ಪೋಸ್ಟ್ಗೆ 1.27 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.