Virat Kohli: ಮತ್ತೊಂದು ವಿಶೇಷ ದಾಖಲೆ ಬರೆದ ರನ್ ಮೆಷಿನ್ ವಿರಾಟ್ ಕೊಹ್ಲಿ..!
ಈ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ಬ್ಯಾಟ್ಸ್ಮನ್ ಕುಮಾರ ಸಂಗಾಕ್ಕರ 3ನೇ ಮೂರನೇ ಸ್ಥಾನದಲ್ಲಿದ್ದಾರೆ. ಸಂಗಾಕ್ಕರ 3ನೇ ಕ್ರಮಾಂಕದಲ್ಲಿ 238 ಇನಿಂಗ್ಸ್ಗಳ ಮೂಲಕ 9,747 ರನ್ ಕಲೆಹಾಕಿದ್ದರು.
ಭಾರತ-ಇಂಗ್ಲೆಂಡ್ ನಡುವಣ 2ನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಒನ್ಡೇ ಕ್ರಿಕೆಟ್ನಲ್ಲಿ ಮತ್ತೊಂದು ಮೈಲುಗಲ್ಲನ್ನು ದಾಟಿದ್ದಾರೆ.
2/ 6
ಶುಕ್ರವಾರ ನಡೆದ ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ವಿರಾಟ್ ಕೊಹ್ಲಿ 79 ಎಸೆತಗಳಲ್ಲಿ 66 ರನ್ ಬಾರಿಸಿದ್ದರು. ಇದರಲ್ಲಿ 30 ರನ್ಗಳಿಸುವುದರೊಂದಿಗೆ ವಿಶೇಷ ದಾಖಲೆ ನಿರ್ಮಿಸಿದರು.
3/ 6
ಹೌದು, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 10 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ವಿಶ್ವದ ಎರಡನೇ ಬ್ಯಾಟ್ಸ್ಮನ್ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾದರು.
4/ 6
ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ 10 ಸಾವಿರ ರನ್ ಪೂರೈಸಿದ ದಾಖಲೆ ಬರೆದಿದ್ದರು. ಪಾಂಟಿಂಗ್ 3ನೇ ಕ್ರಮಾಂಕದಲ್ಲಿ 330 ಇನಿಂಗ್ಸ್ಗಳಿಂದ ಒಟ್ಟು 12,662 ರನ್ ಕಲೆಹಾಕಿ ಅಗ್ರಸ್ಥಾನದಲ್ಲಿದ್ದಾರೆ.
5/ 6
ಇದೀಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೇವಲ 190 ಇನಿಂಗ್ಸ್ಗಳ ಮೂಲಕ 3ನೇ ಕ್ರಮಾಂಕದಲ್ಲಿ 10,000 ರನ್ ಪೂರೈಸಿ ಗಮನ ಸೆಳೆದಿದ್ದಾರೆ.
6/ 6
ಇನ್ನು ಈ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ಬ್ಯಾಟ್ಸ್ಮನ್ ಕುಮಾರ ಸಂಗಾಕ್ಕರ 3ನೇ ಮೂರನೇ ಸ್ಥಾನದಲ್ಲಿದ್ದಾರೆ. ಸಂಗಾಕ್ಕರ 3ನೇ ಕ್ರಮಾಂಕದಲ್ಲಿ 238 ಇನಿಂಗ್ಸ್ಗಳ ಮೂಲಕ 9,747 ರನ್ ಕಲೆಹಾಕಿದ್ದರು.