Virat Kohli: ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಕಿಂಗ್ ಕೊಹ್ಲಿ..!
2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ವಿರಾಟ್ ಕೊಹ್ಲಿ 43 ಶತಕಗಳೊಂದಿಗೆ 59.29 ಸ್ಟ್ರೈಕ್ ರೇಟ್ನಲ್ಲಿ 11977 ರನ್ ಕಲೆಹಾಕಿದ್ದಾರೆ.
News18 Kannada | November 29, 2020, 4:21 PM IST
1/ 7
ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಹತ್ವದ ಮೈಲುಗಲ್ಲೊಂದನ್ನು ದಾಖಲಿಸಿದ್ದಾರೆ.
2/ 7
ಈ ಪಂದ್ಯದ ಮೂಲಕ ಕೊಹ್ಲಿ 250ನೇ ಅಂತರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ್ದು, ಈ ಸಾಧನೆಗೈದ 8ನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
3/ 7
ಟೀಮ್ ಇಂಡಿಯಾ ಪರ ಅತೀ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಸಚಿನ್ 463 ಏಕದಿನ ಪಂದ್ಯಗಳನ್ನು ಆಡಿದ್ದರೆ, ಮಹೇಂದ್ರ ಸಿಂಗ್ ಧೋನಿ 347ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ.
4/ 7
3ನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ (340 ಪಂದ್ಯ), ಮೊಹಮ್ಮದ್ ಅಜರುದ್ಧೀನ್ (334 ಪಂದ್ಯ) 4ನೇ ಹಾಗೂ ಸೌರವ್ ಗಂಗೂಲಿ( 308 ಪಂದ್ಯ) 5ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಯುವರಾಜ್ ಸಿಂಗ್ (301 ಪಂದ್ಯ) ಹಾಗೂ ಅನಿಲ್ ಕುಂಬ್ಳೆ (269 ಪಂದ್ಯ) ಅವರು ಈ ಪಟ್ಟಿಯಲ್ಲಿದ್ದಾರೆ.
5/ 7
2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ವಿರಾಟ್ ಕೊಹ್ಲಿ 43 ಶತಕಗಳೊಂದಿಗೆ 59.29 ಸ್ಟ್ರೈಕ್ ರೇಟ್ನಲ್ಲಿ 11977 ರನ್ ಕಲೆಹಾಕಿದ್ದಾರೆ.
6/ 7
ಇನ್ನು ಕೇವಲ 23 ರನ್ ಸಿಡಿಸಿದ್ರೆ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 12 ಸಾವಿರ ರನ್ ಪೂರೈಸಿದ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆ ವಿರಾಟ್ ಕೊಹ್ಲಿ ಪಾಲಾಗಲಿದೆ.