4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ

First published:

  • 112

    4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ

    19 ವರ್ಷದೊಳಗಿನವರ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಬಾಂಗ್ಲಾ ವಿರುದ್ದ ಸೋಲುವ ಮೂಲಕ 5ನೇ ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನು ಗೆಲ್ಲುವ ಅವಕಾಶವನ್ನು ಕೈ ತಪ್ಪಿಸಿಕೊಂಡಿದೆ.

    MORE
    GALLERIES

  • 212

    4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ

    ಇಲ್ಲಿಯವರೆಗೆ, ಅಂಡರ್ 19 ವಿಶ್ವಕಪ್ ಕ್ರಿಕೆಟ್  13 ಬಾರಿ ನಡೆದಿದೆ. ಮೊದಲ ಅಂಡರ್ -19 ವಿಶ್ವಕಪ್  32 ವರ್ಷಗಳ ಹಿಂದೆ 1988ರಲ್ಲಿ ಆರಂಭವಾಗಿತ್ತು.

    MORE
    GALLERIES

  • 312

    4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ

    ಇನ್ನು 32 ವರ್ಷಗಳ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಯುವ ಪಡೆ 4 ಬಾರಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಆಸ್ಟ್ರೇಲಿಯಾ ತಂಡವು 3 ಬಾರಿ ಪ್ರಶಸ್ತಿಯನ್ನು ಗೆದ್ದಿದ್ದರೆ, ಪಾಕಿಸ್ತಾನವು 2 ಬಾರಿ ವಿಶ್ವ ಚಾಂಪಿಯನ್ ಆಗಿದೆ. ಹಾಗೆಯೇ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಒಂದೊಂದು ಬಾರಿ ವಿಶ್ವಕಪ್​ಗೆ ಮುತ್ತಿಟ್ಟಿದೆ.

    MORE
    GALLERIES

  • 412

    4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ

    2000 ರಲ್ಲಿ ಮೊಹಮ್ಮದ್ ಕೈಫ್ ನಾಯಕತ್ವದಲ್ಲಿ ಟೀಂ ಇಂಡಿಯಾ ಯುವ ಪಡೆ ಮೊದಲ ಬಾರಿ ವಿಶ್ವ ಚಾಂಪಿಯನ್​ನ್ನಾಗಿ ಹೊರಹೊಮ್ಮಿತು. ಫೈನಲ್‌ನಲ್ಲಿ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದಿತು.ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 178 ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ನಾಲ್ಕು ವಿಕೆಟ್ ಕಳೆದುಕೊಂಡು 180 ರನ್ ಗಳಿಸಿ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿತು.

    MORE
    GALLERIES

  • 512

    4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ

    ಎರಡನೇ ಬಾರಿಗೆ ವಿಶ್ವಕಪ್ ಗೆಲ್ಲಲು ಭಾರತ ತಂಡವು 8 ವರ್ಷ ಕಾಯಬೇಕಾಯಿತು. 2008 ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಡಕ್​ವರ್ಥ್ ಲೂಯಿಸ್ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾವನ್ನು 12 ರನ್​ಗಳಿಂದ ಸೋಲಿಸಿ ದ್ವಿತೀಯ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 159 ರನ್ ಗಳಿಸಿತ್ತು. ನಂತರ ದಕ್ಷಿಣ ಆಫ್ರಿಕಾವು ಡಕ್​ವರ್ಥ್ ಲೂಯಿಸ್ ಪ್ರಕಾರ ದಕ್ಷಿಣ ಆಫ್ರಿಕಾ 116 ರನ್​ಗಳ ಗುರಿ ಪಡೆಯಿತು. ಆದರೆ ನಿಗದಿತ 25 ಓವರ್‌ಗಳಲ್ಲಿ ಕೇವಲ 103 ರನ್ ಗಳಿಗೆ ಹರಿಣರನ್ನು ಕಟ್ಟಿ ಹಾಕುವ ಮೂಲಕ ಟೀಂ ಇಂಡಿಯಾ ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿತು.

    MORE
    GALLERIES

  • 612

    4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ

    2012 ರಲ್ಲಿ ಉನ್ಮುಕ್ತ್ ಚಂದ್ ಭಾರತಕ್ಕೆ ಮೂರನೇ ಬಾರಿಗೆ ವಿಶ್ವಕಪ್​ನ್ನು ತಂದುಕೊಟ್ಟರು. ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ವಿಶ್ವ ಚಾಂಪಿಯನ್​ನ್ನಾಗಿ ಹೊರಹೊಮ್ಮಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರ್‌ನಲ್ಲಿ 225 ರನ್ ಗಳಿಸಿತು. ಇದಕ್ಕೆ ಪ್ರತಿಯೆಯಾಗಿ, ನಾಯಕ ಉನ್ಮುಕ್ತ್ ಅವರ ಅಜೇಯ ಶತಕ (111 ರನ್) ನೆರವಿನಿಂದ ಗುರಿ ಮುಟ್ಟುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.

    MORE
    GALLERIES

  • 712

    4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ

    2018ರಲ್ಲಿ ಪೃಥ್ವಿ ಶಾ ನೇತೃತ್ವದಲ್ಲಿ ಭಾರತ ಮತ್ತೊಮ್ಮೆ ಫೈನಲ್​ನಲ್ಲಿ ಆಸ್ಟ್ರೇಲಿಯಾವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ನಾಲ್ಕನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರ್‌ನಲ್ಲಿ 216 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಭಾರತ ಎರಡು ವಿಕೆಟ್ ನಷ್ಟದಲ್ಲಿ 220 ರನ್ ಗಳಿಸುವ ಮೂಲಕ ಟೀಂ ಇಂಡಿಯಾ ಯುವ ಪಡೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು.

    MORE
    GALLERIES

  • 812

    4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ

    ಹೀಗೆ ನಾಲ್ಕು ಬಾರಿ ಭಾರತ ಅಂಡರ್ 19 ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಮೂರು ಬಾರಿ ಫೈನಲ್​ನಲ್ಲಿ ಎಡವಿತ್ತು.

    MORE
    GALLERIES

  • 912

    4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ

    2006 ರಲ್ಲಿ ಫೈನಲ್ ಪ್ರವೇಶಿಸಿದ ಭಾರತವನ್ನು ಪಾಕಿಸ್ತಾನ ಸೋಲಿಸಿತು. ಡಕ್​ವರ್ಥ್ ಲೂಯಿಸ್ ನಿಯಮದ ಪ್ರಕಾರ ಪಾಕ್ ಭಾರತಕ್ಕೆ 109 ರನ್​ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನತ್ತಿದ ರವಿಕಾಂತ್ ಶುಕ್ಲಾ ನಾಯಕತ್ವದ ಟೀಂ ಇಂಡಿಯಾ 71 ರನ್​ಗಳಿಗೆ ಸರ್ವಪತನ ಕಾಣುವ ಮೂಲಕ ರನ್ನರ್ ಅಪ್​ಗೆ ತೃಪ್ತಿ ಪಡಬೇಕಾಯಿತು.

    MORE
    GALLERIES

  • 1012

    4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ

    2016ರಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತವನ್ನು ಸೋಲಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು. ಇಶಾನ್ ಕಿಶನ್ ನಾಯಕತ್ವದ ಟೀಂ ಇಂಡಿಯಾ ಮೊದಲು ಬ್ಯಾಟ್ ಗಳಿಸಿದ್ದು ಕೇವಲ 145 ರನ್​ಗಳು. ಈ ಸುಲಭ ಗುರಿಯನ್ನು ಬೆನ್ನತ್ತಿದ ವಿಂಡೀಸ್ 5 ವಿಕೆಟ್​ಗಳ ಜಯದೊಂದಿಗೆ ವರ್ಲ್ಡ್​ಕಪ್​ಗೆ ಮುತ್ತಿಟ್ಟಿತು.

    MORE
    GALLERIES

  • 1112

    4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ

    ಇನ್ನು ಈ ಬಾರಿ ಬಾಂಗ್ಲಾದೇಶದ ವಿರುದ್ದ ಮತ್ತೆ ಮುಗ್ಗರಿಸಿದ ಪ್ರಿಯಂ ಗರ್ಗ್​ ನೇತೃತ್ವದ ಟೀಂ ಇಂಡಿಯಾ ಯುವ ಪಡೆ 5ನೇ ಬಾರಿ ವಿಶ್ವ ಚಾಂಪಿಯನ್ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದರು.

    MORE
    GALLERIES

  • 1212

    4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ

    32 ವರ್ಷಗಳ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಯುವ ಪಡೆ 4 ಬಾರಿ ಚಾಂಪಿಯನ್​ ಆಗುವ ಮೂಲಕ ಅತೀ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡಗಳ ಪೈಕಿ ಅಗ್ರಸ್ಥಾನದಲ್ಲಿದೆ. ಹಾಗೆಯೇ ಅಂಡರ್ 19 ವಿಶ್ವಕಪ್​ನ ಸಕ್ಸಸ್ ಫುಲ್ ತಂಡವೆಂಬ ಕೀರ್ತಿಗೆ ಪಾತ್ರವಾಗಿದೆ.

    MORE
    GALLERIES