ಇಶಾಂತ್ ಶರ್ಮಾ: 13 ವರ್ಷಗಳಿಂದ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಿರುವ ಇಶಾಂತ್ ಶರ್ಮಾ ಈ ವರೆಗೂ 6 ಫ್ರಾಂಚೈಸಿಗಳ ಪರ ಆಡಿದ್ದಾರೆ. ಅಲ್ಲದೆ ಐಪಿಎಲ್ ನಲ್ಲಿ 38 ವಿಕೆಟ್ ಪಡೆಯುವ ಮೂಲಕ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. 2018ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಇಶಾಂತ್ ಈ ಬಾರಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇವರ ಖರೀದಿ ಬಹುತೇಕ ಅನುಮಾನ.
ಪಿಯೂಶ್ ಚಾವ್ಲಾ: 33 ವರ್ಷದ ಪಿಯೂಶ್ ಚಾವ್ಲಾ ಈ ಬಾರಿ ಹರಾಜಿನಲ್ಲಿ 1 ಕೋಟಿ ರೂ. ಮೂಲ ಬೆಲೆ ಪಡೆದಿದ್ದಾರೆ. 2014ರಿಂದ 2019ರವರೆಗೆವ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದ ಲೆಗ್ ಸ್ಪಿನ್ನರ್ 2020ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೇರಿದ್ದರು. ಬಳಿಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. 2021ರಲ್ಲಿ ಕೇವಲ 1 ಪಂದ್ಯವನ್ನಷ್ಟೇ ಆಡಿರುವ ಪಿಯೂಶ್ ಅವರನ್ನು ಖರೀದಿಸಲು ಈ ಬಾರಿ ಯಾರು ಆಸಕ್ತಿ ತೋರಿಸದಿರುವ ಸಾಧ್ಯತೆ ಇದೆ.
ಮುರುಳಿ ವಿಜಯ್: ಐಪಿಎಲ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿರುವ ಕೆಲವೇ ಬ್ಯಾಟ್ಸ್ಮನ್ಗಳ ತಮಿಳುನಾಡು ಮೂಲದ ಮುರುಳಿ ವಿಜಯ್ ಕೂಡ ಒಬ್ಬರು. ಈವರೆಗೂ ಒಂದು 106 ಐಪಿಎಲ್ ಪಂದ್ಯಗಳನ್ನು ಆಡಿರುವ ಮುರುಳಿ ವಿಜಯ್ ಎರಡು ಶತಕ 13 ಅರ್ಧ ಶತಕಗಳನ್ನು ಬಾರಿಸಿದ್ದಾರೆ.ಆದ್ರೆ ಈಗ ಹೆಚ್ಚಿನ ಅವಕಾಶಗಳು ಲಭ್ಯವಾಗಿಲ್ಲ. ಅಲ್ಲದೆ 2021ರ ಐಪಿಎಲ್ ಪಂದ್ಯದಲ್ಲಿ ಒಂದೇ ಒಂದು ಪಂದ್ಯವನ್ನು ಮುರುಳಿ ವಿಜಯ ಆಡಿಲ್ಲ. ಹೀಗಾಗಿ ಈ ಬಾರಿ ಅವರಿಗೆ ಅವಕಾಶ ಸಿಗುವುದು ಡೌಟ್.