ಭಾರತೀಯ ಕ್ರಿಕೆಟ್ನಲ್ಲಿ ಸದ್ಯ ತಲೆಯೆತ್ತಿರುವ ದೊಡ್ದ ಸಮಸ್ಯೆ ಎಂದರೆ ವಿಕೆಟ್ ಜವಾಬ್ದಾರಿ. ಧೋನಿ ತಂಡದಿಂದ ಹೊರಗುಳಿದ ಬಳಿಕ ರಿಷಭ್ ಪಂತ್ ಈ ಸ್ಥಾನಕ್ಕೆ ಬಂದರಾದರೂ ಸಮರ್ಪಕವಾಗಿ ಈ ಜಾಗವನ್ನು ತುಂಬುತ್ತಿಲ್ಲ ಎಂದು ಹೇಳಲಾಗುತ್ತಿದೆ.
2/ 14
ಹೀಗಾಗಿ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಿ ಎಂಬ ಕೂಗು ಬಹುದಿನಗಳಿಂದ ಕೇಳಿಬರುತ್ತಿದೆ. ಆದರೆ, ಈ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ಮಹಾಟೂರ್ನಿ ಗಮನದಲ್ಲಿಟ್ಟುಕೊಂಡರೆ ಸ್ಯಾಮ್ಸನ್ಗಿಂತ ಪಂತ್ಗೆ ಅವಕಾಶ ನೀಡಿದರೆ ಉತ್ತಮ ಎಂದು ಅಂಕಿಅಂಶಗಳು ಹೇಳುತ್ತಿವೆ.
3/ 14
ಟೀಂ ಇಂಡಿಯಾ ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚು ಬಲಗೈ ಬ್ಯಾಟ್ಸ್ಮನ್ಗಳೇ ಇದ್ದಾರೆ. ಶಿಖರ್ ಧವನ್ ಹೊರತು ಪಡಿಸಿ ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಐಯರ್ ಹೀಗೆ ಟಾಪ್ ಆರ್ಡರ್ನಲ್ಲಿ ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ಗಳ ದಂಡೇ ಇದೆ.
4/ 14
ಅಲ್ಲದೆ ಶಿವಂ ದುಬೆ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಬಂದರೆ, ಅವರೂಕೂಡ ಬಲಗೈ ಬ್ಯಾಟ್ಸ್ಮನ್ ಆಗಿದ್ದಾರೆ.
5/ 14
ಎಲ್ಲಾದರು ಸ್ಯಾಮ್ಸನ್ರನ್ನು ವಿಶ್ವಕಪ್ ಟಿ-20ಗೆ ಆಯ್ಕೆ ಮಾಡಿದರೆ ತಂಡಕ್ಕೆ ಮತ್ತೊಬ್ಬ ಬಲಗೈ ಬ್ಯಾಟ್ಸ್ಮನ್ ಕಾಲಿಟ್ಟಂತಾಗುತ್ತದೆ. ಇವರು ಕಣಕ್ಕಿಳಿದರೆ 6ನೇ ಬಲಗೈ ಬ್ಯಾಟ್ಸ್ಮನ್ ಆಗಲಿದ್ದಾರೆ.
6/ 14
ಟೀಂ ಇಂಡಿಯಾ ಈರೀತಿ ಇದ್ದರೆ ಎದುರಾಳಿಗೆ ಇದು ದೊಡ್ಡ ಸವಲಾಗಿ ಪರಿಗಣಿಸುವುದಿಲ್ಲ. ಹೀಗಾಗಿ ಎಡಗೈ ಬ್ಯಾಟ್ಸ್ಮನ್ ಆಗಿರುವ ಪಂತ್ ತಂಡದಲ್ಲಿದ್ದರೆ ಉತ್ತಮ.
7/ 14
ಇನ್ನು ರಿಷಭ್ ಪಂತ್ ಯಾವುದೇ ಕ್ರಮಾಂಕದಲ್ಲಿ ಕಣಕ್ಕಿಳಿದರೆ ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಸಂಜು ಸ್ಯಾಮ್ಸನ್ಗೆ ಇದು ಕಷ್ಟಸಾಧ್ಯ.
8/ 14
ಪಂತ್ ಈಗಾಗಲೇ ಓಪನರ್ ಆಗಿಯೂ ಬ್ಯಾಟ್ ಬೀಸಿ ಯಶಸ್ಸು ಕಂಡಿದ್ದಾರೆ. ಅಲ್ಲದೆ 3, 4, 5 ಹಾಗೂ 6ನೇ ಕ್ರಮಾಂಕದಲ್ಲೂ ಆಡಿದ್ದಾರೆ.
9/ 14
ಅದೇ ಸ್ಯಾಮ್ಸನ್ಗೆ ಪಂತ್ ರೀತಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟಸಾಧ್ಯ. ಅಲ್ಲದೆ ಅಂತಿಮ ಹಂತದಲ್ಲಿ ಪಂತ್ ಸ್ಪೋಟಕ ಬ್ಯಾಟಿಂಗ್ ಮಾಡುವ ಶಕ್ತಿ ಹೊಂದಿದ್ದಾರೆ. ಸ್ಯಾಮ್ಸನ್ ಫಿನಿಶಿಂಗ್ ಜವಾಬ್ದಾರಿ ನಿಭಾಹಿಸುವುದು ಕಷ್ಟ.
10/ 14
ಈ ಬಾರಿಯ ವಿಶ್ವಕಪ್ ಟಿ-20 ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಹೀಗಾಗಿ ಕಾಂಗರೂಗಳ ನಾಡಿನಲ್ಲಿ ಆಡಿದ ಅನುಭವ ಇರುವ ಆಟಗಾರ ತಂಡದಲ್ಲಿದ್ದರೆ ಉಪಯುಕ್ತವಾಗಲಿದೆ.
11/ 14
ಆಸ್ಟ್ರೇಲಿಯಾ ಕಂಡೀಷನ್ನಲ್ಲಿ ರಿಷಭ್ ಪಂತ್ಗೆ ಈಗಾಗಲೇ ಆಡಿದ ಅನುಭವವಿದೆ. ಅಲ್ಲದೆ ಕಾಂಗರೂಗಳ ನೆಲದಲ್ಲಿ ಶತಕ ಸಿಡಿಸಿ ಪಂತ್ ಅಬ್ಬರಿಸಿದ್ದರು.
12/ 14
ಸಂಜು ಸ್ಯಾಮ್ಸನ್ಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವ ಕಡಿಮೆ ಇರುವ ಜೊತೆಗೆ ವಿದೇಶದಲ್ಲೂ ಹೆಚ್ಚು ಕ್ರಿಕೆಟ್ ಆಡಿಲ್ಲ.
13/ 14
ಇದನ್ನೆಲ್ಲ ಗಮನಿಸಿದರೆ ಟಿ-20 ವಿಶ್ವಕಪ್ ಮಹಾಟೂರ್ನಿಗೆ ಸಂಜು ಸ್ಯಾಮ್ಸನ್ ಬದಲು ರಿಷಭ್ ಪಂತ್ ಅವರನ್ನೇ ಆಯ್ಕೆ ಮಾಡಿದರೆ ಉತ್ತಮ ಎಂದು ಹೇಳಲಾಗುತ್ತಿದೆ.
14/ 14
ಈ ವರ್ಷದ ಅಕ್ಟೋಬರ್ನಲ್ಲಿ ಟಿ-20 ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ. ಮಾಹಿತಿಯ ಪ್ರಕಾರ ಅಕ್ಟೋಬರ್ 18ಕ್ಕೆ ಶ್ರೀಲಂಕಾ ಹಾಗೂ ಐರ್ಲೆಂಡ್ ನಡುವೆ ಮೊದಲ ಪಂದ್ಯ ನಡೆಯಲಿದೆ.