ಇಂಗ್ಲೆಂಡ್ನಲ್ಲಿ ಮುಂದಿನ ವರ್ಷ ನಡೆಯಲಿರುವ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಗೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಆದರೆ ಅಚ್ಚರಿ ಎಂಬಂತೆ ಟಿ-20 ಕ್ರಿಕೆಟ್ನ ಹುಲಿಗಳು ಎಂದು ಕರೆಯಲ್ಪಡುವ ಸ್ಫೋಟಕ ಆಟಗಾರರ ಈ ಟೂರ್ನಮೆಂಟ್ನಲ್ಲಿ ಖರೀದಿಯಾಗದೆ ಉಳಿದಿದ್ದಾರೆ.
2/ 9
ಟಿ-20 ಕ್ರಿಕೆಟ್ನ ಸ್ಟಾರ್ ಆಟಗಾರರಾದ ಕ್ರಿಸ್ ಗೇಲ್, ಲಸಿತ್ ಮಾಲಿಂಗ, ಕೀರೊನ್ ಪೊಲ್ಲಾರ್ಡ್, ಡ್ವೇನ್ ಬ್ರಾವೋ ಸೇರಿದಂತೆ ಪ್ರಮುಖರು ಅನ್ಸೋಲ್ಡ್ ಆಗಿದ್ದಾರೆ
3/ 9
ಮೊದಲ ಸುತ್ತಿನಲ್ಲೇ ಗೇಲ್, ಮಲಿಂಗಾ ಹಾಗೂ ಕಗಿಸೊ ರಬಾಡ ಅವರ ಬೇಸ್ ಪ್ರೈಸ್ 1.14 ಕೋಟಿ ಇಟ್ಟಿದ್ದು ಯಾರೊಬ್ಬರು ಖರೀದಿ ಮಾಡಲಿಲ್ಲ
4/ 9
ಅಷ್ಟೇ ಅಲ್ಲದೆ ಟಿ-20 ಕ್ರಿಕೆಟ್ನ ನಂಬರ್ 1 ಬ್ಯಾಟ್ಸ್ಮನ್ ಪಾಕಿಸ್ತಾನದ ಬಾಬರ್ ಅಜಮ್ ಕೂಡ ಬಿಕರಿಯಾಗಿದ್ದಾರೆ. ಕ್ವಿಂಟನ್ ಡಿಕಾಕ್, ತಮಿಮ್ ಇಖ್ಬಾಲ್ ನನ್ನು ಕೂಡ ಖರೀದಿ ಮಾಡಲಿಲ್ಲ
5/ 9
ಮಿಚೆಲ್ ಸ್ಟಾರ್ಕ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದಾರೆ
6/ 9
ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ರಶೀದ್ ಖಾನ್, ಆ್ಯಂಡ್ರೊ ರಸೆಲ್, ಗ್ಲೆನ್ ಮ್ಯಾಕ್ಸ್ವೆಲ್, ಸುನಿಲ್ ನರೈನ್, ಇಮ್ರಾನ್ ತಾಹಿರ್ ಸೇಲ್ ಆಗಿದ್ದಾರೆ
7/ 9
ಈ ಟೂರ್ನಮೆಂಟ್ನಲ್ಲಿ ಇಂಗ್ಲೆಂಡ್ನ ಎಂಟು ನಗರ ಪ್ರದೇಶದ ತಂಡಗಳು ಭಾಗವಹಿಸಲಿವೆ. ಪ್ರತಿ ಇನಿಂಗ್ಸ್ಗೆ 100 ಎಸೆತಗಳು ಇರುತ್ತವೆ. ಪ್ರತಿ 10 ಎಸೆತಗಳಿಗೆ ಎಂಡ್ ಅನ್ನು ಬದಲಿಸಲಾಗುತ್ತದೆ.
8/ 9
ಬೌಲರ್ಗಳು 5 ಅಥವಾ 10 ಸತತ ಎಸೆತಗಳನ್ನು ಎಸೆಯಬಹುದು. ಪಂದ್ಯದಲ್ಲಿ ಬೌಲರ್ವೊಬ್ಬ ಗರಿಷ್ಠ 20 ಎಸೆತಗಳನ್ನು ಎಸೆಯಲು ಅವಕಾಶವಿದೆ.
9/ 9
ಪ್ರತಿ ತಂಡಕ್ಕೆ 25 ಎಸೆತಗಳ ಪವರ್ ಪ್ಲೇ ಕೂಡ ಇದ್ದು ಎರಡೂವರೆ ನಿಮಿಷಗಳ ಟೈಮ್ ಔಟ್ ತೆಗೆದುಕೊಳ್ಳಬಹುದು.