ರಷ್ಯಾದ ಮಾಜಿ ಟೆನಿಸ್ ಆಟಗಾರ್ತಿ ಅನ್ನ ಕುರ್ನಿಕೋವಾ ಅವರ ಸೌಂದರ್ಯಕ್ಕೆ ಸೋತವರು ಅದೆಷ್ಟೋ ಮಂದಿ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಅನ್ನು ಹುಟ್ಟುಹಾಕಿಸಿಕೊಂಡಿದ್ದಾರೆ. ಮಾಜಿ ಟೆನ್ನಿಸ್ ತಾರೆ ಅನ್ನ ಕ್ರೀಡೆಯಿಂದ ದೂರವಿದ್ದರು ಸಹ ಅವರ ಫಿಟ್ನೆಸ್ ವೀಡಿಯೊಗಳು ಮತ್ತು ಫೋಟೋಗಳಿಂದಾಗಿ ಸದಾ ಟ್ರೆಂಡಿಗ್ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ.
ಅನ್ನ ಅವರ ವೈಯಕ್ತಿಕ ಜೀವನದ ಹಲವಾರು ಸುದ್ದಿಗಳಿವೆ. ಈ ಟೆನಿಸ್ ಆಟಗಾರ್ತಿ 2001 ರಲ್ಲಿ ಅಮೆರಿಕನ್ ಗಾಯಕ ಎನ್ರಿಕ್ ಇಗ್ಲೇಷಿಯಸ್ ಅವರನ್ನು ಭೇಟಿಯಾದರು ಮತ್ತು ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಎನ್ರಿಕ್ ಅವರ ಪ್ರಸಿದ್ಧ ಹಾಡು 'ಎಸ್ಕೇಪ್' ನಲ್ಲಿ ಕಾಣಿಸಿಕೊಂಡರು, ನಂತರ ಇಬ್ಬರೂ ಸ್ನೇಹಿತರಾದರು. ಅನ್ನ ಈಗ ಅಮೇರಿಕನ್ ಪ್ರಜೆಯಾಗಿದ್ದು, ತನ್ನ ಪತಿ ಎನ್ರಿಕ್ ಇಗ್ಲೇಷಿಯಸ್ ಅವರೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.