ಸಚಿನ್-ಸೆಹ್ವಾಗ್ ಸ್ಫೋಟಕ ಬ್ಯಾಟಿಂಗ್ ನೋಡಲು ವಾಂಖೆಡೆಯಲ್ಲಿ ಸೇರಿದ್ದ ಪ್ರೇಕ್ಷಕರೆಷ್ಟು ಗೊತ್ತಾ?
Sachin-Sehwag at Wankhede: ಭಾರತ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆರಂಭಿಕ ಜೋಡಿ ಸಚಿನ್-ಸೆಹ್ವಾಗ್ ಮೊದಲ ವಿಕೆಟ್ಗೆ 83 ರನ್ಗಳ ಜೊತೆಯಾಟ ಆಡಿ ತಂಡಕ್ಕೆ ಗೆಲುವನ್ನು ಹತ್ತಿರ ಮಾಡಿದರು. 10.2 ಓವರ್ನಲ್ಲಿ 83 ರನ್ಗಳು ಹರಿದುಬಂತು.
ದೇಶದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆದ ರೋಡ್ ಸೇಫ್ಟಿ ಟಿ-20 ಸರಣಿಯ ಮೊದಲ ಪಂದ್ಯದಲ್ಲೇ ಭಾರತ ಲೆಜೆಂಡ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ.
2/ 16
ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್- ವಿರೇಂದ್ರ ಸೆಹ್ವಾಗ್ ಜೋಡಿ ತಮ್ಮ ಹಳೆದ ಖದರ್ ತೋರಿಸಿ ಭಾರತಕ್ಕೆ 7 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
3/ 16
ಮೊದಲು ಬ್ಯಾಟ್ ಮಾಡಿದ ಬ್ರಿಯಾನ್ ಲಾರ ನಾಯಕತ್ವದ ವೆಸ್ಟ್ ಇಂಡೀಸ್ ಲೆಜೆಂಡ್ ತಂಡ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 150 ರನ್ ಬಾರಿಸಿತು.
4/ 16
ವಿಂಡೀಸ್ ಪರ ಶಿವನಾರಯಣ್ ಚಂದ್ರಪಾಲ್ 41 ಎಸೆತಗಳಲ್ಲಿ 61 ರನ್ ಸಿಡಿಸಿದರೆ, ಡ್ಯಾರೆನ್ ಗಂಗಾ 24 ಎಸೆತಗಳಲ್ಲಿ 32 ರನ್ ಗಳಿಸಿದರು.
5/ 16
ಭಾರತ ಲೆಜೆಂಡ್ ಪರ ಜಹೀರ್ ಖಾನ್, ಮುನಾಫ್ ಪಟೇಲ್ ಹಾಗೂ ಪ್ರಗ್ಯಾನ್ ಓಜಾ ತಲಾ 2 ವಿಕೆಟ್ ಕಿತ್ತರು.
6/ 16
151 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಓಪನರ್ಗಳಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಭರ್ಜರಿ ಆರಂಭ ಒದಗಿಸಿದರು.
7/ 16
ಅದರಲ್ಲು ಸೆಹ್ವಾಗ್, ಇನ್ನಿಂಗ್ಸ್ನ ಮೊದಲೆರಡು ಎಸೆತವನ್ನು ಬೌಂಡರಿಗೆ ಅಟ್ಟಿ ಹಳೆಯ ಡ್ಯಾಶಿಂಗ್ ಶೈಲಿಯ ಬ್ಯಾಟಿಂಗ್ ಕಣ್ಣೆದುರು ತಂದರು.
8/ 16
ಭಾರತ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆರಂಭಿಕ ಜೋಡಿ ಸಚಿನ್-ಸೆಹ್ವಾಗ್ ಮೊದಲ ವಿಕೆಟ್ಗೆ 83 ರನ್ಗಳ ಜೊತೆಯಾಟ ಆಡಿ ತಂಡಕ್ಕೆ ಗೆಲುವನ್ನು ಹತ್ತಿರ ಮಾಡಿದರು. 10.2 ಓವರ್ನಲ್ಲಿ 83 ರನ್ಗಳು ಹರಿದುಬಂತು.
9/ 16
ನಾಯಕ ಸಚಿನ್ ತೆಂಡೂಲ್ಕರ್ 29 ಎಸೆತಗಳಲ್ಲಿ 36 ರನ್ ಗಳಿಸಿ ಔಟ್ ಆದರೆ, ಮೊಹಮ್ಮದ್ ಕೈಫ್ 16 ಎಸೆತಗಳಲ್ಲಿ 14 ಹಾಗೂ ಮನ್ಪ್ರೀತ್ ಗೋನಿ ಸೊನ್ನೆ ಸುತ್ತಿದರು.
10/ 16
ಆದರೆ, ಇತ್ತ ಸೆಹ್ವಾಗ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮನರಂಚಿಸಿದರು. ಅಂತಿಮ ಹಂತದಲ್ಲಿ ಯುವರಾಜ್ ಸಿಂಗ್ ಜೊತೆಯಾಗಿ ವಿನ್ನಿಂಗ್ ಶಾಟ್ ಕೂಡ ಹೊಡೆದರು.
11/ 16
ಅದರಲ್ಲು ಯುವರಾಜ್ ತಮ್ಮ ಸಿಗ್ನೇಚರ್ ಶೈಲಿಯಲ್ಲಿ ಚೆಂಡನ್ನು ಸಿಕ್ಸ್ಗೆ ಅಟ್ಟಿದ್ದು ಅಮೋಘವಾಗಿತ್ತು.
12/ 16
ಅಂತಿಮವಾಗಿ ಭಾರತ 18.2 ಓವರ್ನಲ್ಲಿ 3 ವಿಕೆಟ್ ಕಳೆದುಕೊಂಡು 151 ರನ್ ಬಾರಿಸಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
13/ 16
ಸೆಹ್ವಾಗ್ 57 ಎಸೆತಗಳಲ್ಲಿ 11 ಬೌಂಡರಿಯೊಂದಿಗೆ ಅಜೇಯ 74 ರನ್ ಚಚ್ಚಿದರೆ, ಯುವಿ 7 ಎಸೆತಗಳಲ್ಲಿ 1 ಸಿಕ್ಸರ್ನೊಂದಿಗೆ 10 ರನ್ ಗಳಿಸಿ ಅಜೇಯರಾಗಿ ಉಳಿದರು.
14/ 16
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರು ವರ್ಷಗಳ ಬಳಿಕ ಆಡಿದ ಮೊದಲ ಪಂದ್ಯದಲ್ಲೇ ಅಬ್ಬರಿಸಿದ ವಿರೇಂದ್ರ ಸೆಹ್ವಾಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
15/ 16
ವಿಶೇಷ ಎಂದರೆ, ಈ ದಿಗ್ಗಜರ ಆಟವನ್ನು ಕಣ್ತುಂಬಿಕೊಳ್ಳಲು ಮುಂಬೈನ ವಾಂಖೆಡೆ ಮೈದಾನಕ್ಕೆ ಅಭಿಮಾನಿಗಳ ಜನಸಾಗರವೇ ಹರಿದುಬಂದಿತ್ತು.
16/ 16
ಭಾರತ ಹಾಗೂ ವೆಸ್ಟ್ಇಂಡೀಸ್ ದಿಗ್ಗಜರ ನಡುವಣ ರೋಚಕ ಕದನಕ್ಕೆ ಸುಮಾರು 50,000ಕ್ಕೂ ಹೆಚ್ಚು ಪ್ರೇಕ್ಷಕರು ಸಾಕ್ಷಿಯಾದರು.