ಟೀಂ ಇಂಡಿಯಾದ ಈ ಖ್ಯಾತ ಬ್ಯಾಟ್ಸ್ಮನ್ ಏಕದಿನದಲ್ಲಿ ಒಂದೂ ಶತಕ ಸಿಡಿಸಿಲ್ಲ ಎಂದರೆ ನಂಬಲೇಬೇಕು
ಅಂತೆಯೆ, ಏಕದಿನ ಕ್ರಿಕೆಟ್ನಲ್ಲಿ ಸಾಕಷ್ಟು ಹೆಸರು ಮಾಡಿರುವ ಆಟಗಾರರು ಈವರೆಗೆ ಕನಿಷ್ಠ ಶತಕವನ್ನೂ ಬಾರಿಸಿಲ್ಲ ಎಂದರೆ ನಂಬಲೇಬೇಕು. ಆ ಪೈಕಿ ಟೀಂ ಇಂಡಿಯಾದ ಒಬ್ಬ ಆಟಗಾರನ ಬಗ್ಗೆ ಇಲ್ಲಿದೆ ಮಾಹಿತಿ.
1971ರಲ್ಲಿ ಆರಂಭವಾದ ಏಕದಿನ ಕ್ರಿಕೆಟ್ ಈಗ ಟೆಸ್ಟ್ ಕ್ರಿಕೆಟ್ಗಿಂತಲೂ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. 50 ಓವರ್ಗಳ ಪಂದ್ಯದಲ್ಲಿ ಈವರೆಗೆ ಸಾಕಷ್ಟು ದಾಖಲೆ ಸೃಷ್ಟಿಯಾಗಿದೆ. ಎಂದೂ ಮರೆಯಲಾಗದ ಅನಿಸ್ಮರಣೀಯ ಕ್ಷಣಗಳಿವೆ.
2/ 10
ಒಂದು ಹಂತದ ವರೆಗೆ ಟೆಸ್ಟ್ ಕ್ರಿಕೆಟ್ಗೆ ಮಾತ್ರ ಸೀಮಿತವಾಗಿದ್ದ ದ್ವಿಶತಕ, ಬಳಿಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಏಕದಿನದಲ್ಲೂ 200 ರನ್ ಸಿಡಿಸಬಹುದು ಎಂದು ತೋರಿಸಿಕೊಟ್ಟರು.
3/ 10
ಏಕದಿನ ಕ್ರಿಕೆಟ್ ಅದೆಷ್ಟೊ ದಿಗ್ಗಜ ಆಟಗಾರರನ್ನು ಕಂಡಿದೆ. ಕೆಲವು ಆಟಗಾರರು ಏಕದಿನ ಕ್ರಿಕೆಟ್ಗೆ ಮಾತ್ರ ಸೀಮಿತವಾಗಿ ದಾಖಲೆ ಪುಟವನ್ನೂ ಸೇರಿದಿದ್ದಾರೆ.
4/ 10
ಅಂತೆಯೆ, ಏಕದಿನ ಕ್ರಿಕೆಟ್ನಲ್ಲಿ ಸಾಕಷ್ಟು ಹೆಸರು ಮಾಡಿರುವ ಆಟಗಾರರು ಈವರೆಗೆ ಕನಿಷ್ಠ ಶತಕವನ್ನೂ ಬಾರಿಸಿಲ್ಲ ಎಂದರೆ ನಂಬಲೇಬೇಕು. ಆ ಪೈಕಿ ಟೀಂ ಇಂಡಿಯಾದ ಒಬ್ಬ ಆಟಗಾರನ ಬಗ್ಗೆ ಇಲ್ಲಿದೆ ಮಾಹಿತಿ.
5/ 10
ಒಂದು ಕಾಲದಲ್ಲಿ ಟೀಂ ಇಂಡಿಯಾದ ಭರವಸೆಯ ಭವಿಷ್ಯದ ವಿಕೆಟ್ ಕೀಪರ್- ಬ್ಯಾಟ್ಸ್ಮನ್ ಎಂದೇ ಹೇಳಲಾಗುತ್ತಿದ್ದ ದಿನೇಶ್ ಕಾರ್ತಿಕ್ ಏಕದಿನ ಕ್ರಿಕೆಟ್ನಲ್ಲಿ ಈವರೆಗೆ 94 ಪಂದ್ಯಗಳನ್ನು ಆಡಿದ್ದಾರೆ.
6/ 10
ಕಾರ್ತಿಕ್ 30.20 ಸರಾಸರಿಯಲ್ಲಿ 1752 ರನ್ ಗಳಿಸಿದ್ದಾರೆ. 9 ಅರ್ಧಶತಕ ಬಾರಿಸಿದ್ದಾರೆ. ಆದರೆ, ವರೆಗೆ ಒಂದೇ ಒಂದೂ ಶತಕ ಸಿಡಿಸಿಲ್ಲ. 79 ಅವರ ಅತ್ಯಧಿಕ ಸ್ಕೋರ್.
7/ 10
2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಕಾರ್ತಿಕ್, ಟೆಸ್ಟ್ (26 ಪಂದ್ಯ), ಟಿ-20 (32 ಪಂದ್ಯ) ಹಾಗೂ ಏಕದಿನ (94 ಪಂದ್ಯ) ಹೀಗೆ ಮೂರು ಮಾದರಿಯ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಪರ ಆಡಿದ್ದಾರೆ.
8/ 10
ಆದರೆ, ಕಾರ್ತಿಕ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಈವರೆಗೆ ಬಾರಿಸಿರುವುದು ಕೇವಲ ಒಂದು ಶತಕವಷ್ಟೆ. ಟೆಸ್ಟ್ ಕ್ರಿಕೆಟ್ನಲ್ಲಿ ಇವರು 2007 ರಲ್ಲಿ ಬಾಂಗ್ಲಾ ವಿರುದ್ಧ 129 ರನ್ ಗಳಿಸಿದ್ದರು.
9/ 10
2019ರ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪರ ಅವಕಾಶವನ್ನು ಪಡೆದುಕೊಳ್ಳುವಲ್ಲಿ ಕಾರ್ತಿಕ್ ಯಶಸ್ವಿಯಾಗಿದ್ದರು. ಆದರೆ, ಇಲ್ಲಿ ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವಲ್ಲಿ ಕಾರ್ತಿಕ್ ವಿಫಲರಾದರು.
10/ 10
ಇನ್ನೂ ಕಾರ್ತಿಕ್ ಕೊತೆಗೆ ವೆಸ್ಟ್ ಇಂಡೀಸ್ನ ಡ್ವೇನ್ ಸ್ಮಿತ್, ಬಾಂಗ್ಲಾದೇಶದ ಹಬೀಬುಲ್ ಬಾಶರ್, ಇಂಗ್ಲೆಂಡ್ನ ಮೈಕೆಲ್ ವಾನ್, ಪಾಕಿಸ್ತಾನದ ಮಿಸ್ಬಾ ಉಲ್ ಹಖ್ ಏಕದಿನ ಕ್ರಿಕೆಟ್ನಲ್ಲು ಒಂದೇ ಒಂದು ಶತಕ ಬಾರಿಸಲಿಲ್ಲ.