8) ಬಾಂಗ್ಲಾದೇಶ- ಶಾಕಿಬ್ ಅಲ್ ಹಸನ್: 41 ಲಕ್ಷ ರೂಪಾಯಿ- ಐಪಿಎಲ್ನಲ್ಲಿ ನಿಯಮಿತವಾಗಿ ಸ್ಥಾನ ಪಡೆಯುವ ಶಾಕಿಬ್ ಅಲ್ ಹಸನ್ ಬಾಂಗ್ಲಾದೇಶ ಕ್ರಿಕೆಟ್ನ ಬೆಳವಣಿಗೆಯ ಜೊತೆಯೇ ಬೆಳೆದವರು. ಮೊದಲಿನಷ್ಟು ಮೊನಚು ಈಗಿಲ್ಲವಾದರೂ ಆ ದೇಶದ ಅತ್ಯುತ್ತಮ ಆಲ್ರೌಂಡರ್ ಇವರು. ಶಾಕಿಬ್ ಅವರು ಮೂರು ಮಾದರಿಯ ಕ್ರಿಕೆಟ್ ಆಡುತ್ತಾರೆ. ಎಲ್ಲವೂ ಸೇರಿ ವರ್ಷಕ್ಕೆ ಇವರು 41 ಲಕ್ಷ ರೂಪಾಯಿ (ಭಾರತೀಯ ಕರೆನ್ಸಿ ಲೆಕ್ಕ) ಸಂಭಾವನೆ ಪಡೆಯುತ್ತಾರೆ.
7) ಪಾಕಿಸ್ತಾನ- ಬಾಬರ್ ಅಜಂ: 62.40 ಲಕ್ಷ ರೂಪಾಯಿ- ಪಾಕಿಸ್ತಾನದ ವಿರಾಟ್ ಕೊಹ್ಲಿ ಎಂದೇ ಮೊದಮೊದಲು ಖ್ಯಾತರಾಗಿದ್ದ ಬಾಬರ್ ಅಜಂ ಅವರು ನಿಜಕ್ಕೂ ಕೊಹ್ಲಿಯಂತೆ ರನ್ ಮೆಷೀನ್ ಆಗಿದ್ದಾರೆ. ಸದ್ಯ ಇವರು ಪಾಕಿಸ್ತಾನದ ಅತ್ಯಂತ ಜನಪ್ರಿಯ ಕ್ರಿಕೆಟಿಗರಾಗಿದ್ದಾರೆ. ವಿಶ್ವದ ಅತ್ಯುತ್ತಮ ಟಿ20 ಕ್ರಿಕೆಟಿಗರಲ್ಲೂ ಅವರು ಒಬ್ಬರೆನಿಸಿದ್ದಾರೆ. ಹಾಗೆಯೇ, ಪಾಕಿಸ್ತಾನದಲ್ಲಿ ಅತಿ ಹೆಚ್ಚು ಸಂಭಾವನೆ ಕೂಡ ಅವರೇ ಪಡೆಯುತ್ತಿದ್ದಾರೆ. ಅವರ ವಾರ್ಷಿಕ ಸಂಭಾವನೆ 1.32 ಕೋಟಿ ಪಾಕ್ ರೂ ಇದೆ. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಅವರ ಸಂಭಾವನೆ 62.40 ಲಕ್ಷ ರೂ ಇದೆ.
6) ವೆಸ್ಟ್ ಇಂಡೀಸ್- ಕೀರಾನ್ ಪೊಲಾರ್ಡ್: 1.74 ಕೋಟಿ ರೂಪಾಯಿ- ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಕಳೆದೆರಡು ದಶಕಗಳಿಂದ ವೆಸ್ಟ್ ಇಂಡೀಸ್ ಪ್ರದರ್ಶನ ಅಸ್ಥಿರವಾಗಿದೆ. ಆದರೆ, ಟಿ20 ಕ್ರಿಕೆಟ್ಗೆ ಹೇಳಿ ಮಾಡಿಸಿದ ಆಟಗಾರರ ವಿಂಡೀಸ್ ತಂಡದಲ್ಲಿದ್ಧಾರೆ. ಅಂಥ ಆಟಗಾರರಲ್ಲಿ ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಕೀರಾನ್ ಪೊಲಾರ್ಡ್ ಕೂಡ ಒಬ್ಬರು. ಡ್ವೇನ್ ಬ್ರಾವೋ ಮೊದಲಾದವರಿಗಿಂತ ಪೊಲಾರ್ಡ್ ಹೆಚ್ಚು ಸಂಭಾವನೆ ಪಡೆಯುತ್ತಿದ್ಧಾರೆ. ಇವರು ಏಕದಿನ ಮತ್ತು ಟಿ20 ತಂಡಗಳ ನಾಯಕರೂ ಹೌದು. ಇವರು ಗಳಿಸುವ ಒಟ್ಟು ಮೊತ್ತ 1.73 ಕೋಟಿ ರೂಪಾಯಿ ಆಗುತ್ತದೆ.
5) ನ್ಯೂಜಿಲೆಂಡ್- ಕೇನ್ ವಿಲಿಯಮ್ಸನ್: 1.77 ಕೋಟಿ ರೂಪಾಯಿ- ಕಿವೀಸ್ ಪಡೆ ಕೂಡ ಟಿ20 ಕ್ರಿಕೆಟ್ಗೆ ಹೇಳಿಮಾಡಿಸಿದ ಆಟಗಾರರನ್ನ ಹೊಂದಿರುವ ತಂಡವಾಗಿದೆ. ಇದರ ನಾಯಕ ಕೇನ್ ವಿಲಿಯಮ್ಸನ್ ಅತ್ಯುತ್ತಮ ಕ್ಯಾಪ್ಟನ್ ಅಷ್ಟೇ ಅಲ್ಲದೇ ಅತ್ಯುತ್ತಮ ಬ್ಯಾಟರ್ಗಳಲ್ಲಿ ಒಬ್ಬರೆನಿಸಿದ್ದಾರೆ. ಆ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಇವರು. ಮೂರೂ ಮಾದರಿಯ ಕ್ರಿಕೆಟ್ ತಂಡಗಳನ್ನ ಮುನ್ನಡೆಸುವ ಇವರು ಪಡೆಯುವ ಒಟ್ಟು ಸಂಭಾವನೆ 1.77 ಕೋಟಿ ರೂ ಆಗುತ್ತದೆ.
4) ಸೌಥ್ ಆಫ್ರಿಕಾ- ಟೆಂಬಾ ಬವುಮಾ: 2.5 ಕೋಟಿ ರೂಪಾಯಿ- ವಿಶ್ವ ಕ್ರಿಕೆಟ್ನಲ್ಲಿ ಹಲವು ಏರಿಳಿತಗಳನ್ನ ಕಾಣುತ್ತಿರುವ ದಕ್ಷಿಣ ಆಫ್ರಿಕಾ ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿಲ್ಲ ಎಂಬುದು ಒಂದು ವಿಚಾರವಾದರೆ, ಯಾವುದೇ ತಂಡವನ್ನೂ ಮಣಿಸಬಲ್ಲ ಆಟಗಾರರು ಈ ತಂಡದಲ್ಲಿದ್ಧಾರೆ. ಇದರ ಟಿ20 ಮತ್ತು ಏಕದಿನ ಕ್ರಿಕೆಟ್ ತಂಡಗಳ ನಾಯಕ ಟಿಂಬಾ ಬಾವುಮಾ ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಇವರು ಗಳಿಸುವ ಒಟ್ಟು ಸಂಭಾವನೆ 2.5 ಕೋಟಿ ರೂ ಆಗುತ್ತದೆ.
3) ಆಸ್ಟ್ರೇಲಿಯಾ- ಆರೋನ್ ಫಿಂಚ್: 5 ಕೋಟಿ ರೂಪಾಯಿ- ಟಿ20 ವಿಶ್ವಕಪ್ಗೆ ಮುನ್ನ ಬಾಂಗ್ಲಾದೇಶದಂಥ ತಂಡಕ್ಕೆ ಸರಣಿಗಳನ್ನ ಸೋತ ಆಸ್ಟ್ರೇಲಿಯಾ ಮೊದಲಿನಂತೆ ಇತರ ತಂಡಗಳ ಮೇಲೆ ಪ್ರಾಬಲ್ಯ ಸಾಧಿಸುವುದು ಸಾಧ್ಯವಾಗುತ್ತಿಲ್ಲ. ಆದರೆ, ಕೆಲ ಮ್ಯಾಚ್ ಟರ್ನರ್ಸ್ ಹೊಂದಿರುವ ಆಸ್ಟ್ರೇಲಿಯಾ ಈ ಬಾರಿ ಟಿ20 ವಿಶ್ವಕಪ್ ಗೆಲ್ಲದೇ ಇರುವಷ್ಟು ಅಸಮರ್ಥವೂ ಅಲ್ಲ. ಈ ತಂಡದ ನಾಯಕ ಆರೋನ್ ಫಿಂಚ್ 4.87 ಕೋಟಿ ರೂ ಸಂಭಾವನೆ ಪಡೆಯುತ್ತಾರೆ. ಏಕದಿನ ಕ್ರಿಕೆಟ್ ತಂಡದ ನಾಯಕನೂ ಆಗಿರುವ ಫಿಂಚ್ ಸದ್ಯ ತಮ್ಮ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರೆನಿಸಿದ್ದಾರೆ.
2) ಭಾರತ- ವಿರಾಟ್ ಕೊಹ್ಲಿ: 7 ಕೋಟಿ ರೂಪಾಯಿ- ಭಾರತದ ಕ್ರಿಕೆಟ್ ಸಂಸ್ಥೆ ಬಿಸಿಸಿಐ ವಿಶ್ವದಲ್ಲೇ ಅತಿ ಸಿರಿವಂತ ಕ್ರಿಕೆಟ್ ಮಂಡಳಿ. ಐಸಿಸಿಗೆ ಹೆಚ್ಚಿನ ಆದಾಯ ಮೂಲ ಭಾರತೀಯ ಕ್ರಿಕೆಟ್ ಆಗಿದೆ. ಬಿಸಿಸಿಐ ಗುತ್ತಿಗೆ ಪಡೆದ ಕ್ರಿಕೆಟಿಗರಿಗೆ ಒಳ್ಳೆಯ ಸಂಭಾವನೆ ಇದೆ. ಗುತ್ತಿಗೆಯಲ್ಲಿ ಎ+, ಎ, ಬಿ ಹೀಗೆ ವಿವಿಧ ಶ್ರೇಣಿಗಳಲ್ಲಿ ಆಟಗಾರರನ್ನ ವರ್ಗೀಕರಿಸಿ ಸಂಭಾವನೆ ನೀಡುತ್ತದೆ. ಸದ್ಯ ಮೂರೂ ಮಾದರಿಯ ಕ್ರಿಕೆಟ್ ತಂಡಗಳಿಗೂ ನಾಯಕರಾಗಿರುವ ವಿರಾಟ್ ಕೊಹ್ಲಿ ಒಟ್ಟು 7 ಕೋಟಿ ರೂ ಸಂಭಾವನೆ ಪಡೆಯುತ್ತಾರೆ. ಇದರ ಜೊತೆಗೆ ಹಲವು ಜಾಹೀರಾತುಗಳು ಕೊಹ್ಲಿಯ ಆದಾಯವನ್ನು ಹೆಚ್ಚಿಸುತ್ತಿವೆ.
1) ಇಂಗ್ಲೆಂಡ್- ಜೋಸ್ ಬಟ್ಲರ್: 19 ಕೋಟಿ ರೂಪಾಯಿ- ವಿಶ್ವದ ಅತ್ಯಂತ ಸಿರಿವಂತ ಕ್ರಿಕೆಟ್ ಮಂಡಳಿ ಹೊಂದಿರುವುದು ಭಾರತ. ಆದರೆ, ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವುದು ಇಂಗ್ಲೆಂಡ್ ಕ್ರಿಕೆಟಿಗ. ಇದು ನಿಜಕ್ಕೂ ಅಚ್ಚರಿ. ಇನ್ನೂ ಅಚ್ಚರಿ ಎಂದರೆ ಆ ಕ್ರಿಕೆಟಿಗ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕನೂ ಅಲ್ಲ ಎಂಬುದು. ಇಂಗ್ಲೆಂಡ್ನ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ 19 ಕೋಟಿ ರೂಪಾಯಿ ವಾರ್ಷಿಕ ಸಂಭಾವನೆ ಪಡೆಯುತ್ತಾರೆ. ಮತ್ತೂ ಅಚ್ಚರಿ ಎಂದರೆ ಬಟ್ಲರ್ಗಿಂತ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರು ಇಂಗ್ಲೆಂಡ್ನಲ್ಲಿ ಇದ್ದಾರೆ. ಇದಕ್ಕೆ ಕಾರಣ ಈ ಆಟಗಾರರು ಟೆಸ್ಟ್ ಮತ್ತು ಏಕದಿನ, ಟಿ20 ಈ ಮೂರೂ ಮಾದರಿಯ ಕ್ರಿಕೆಟ್ಗಳಿಗೆ ಗುತ್ತಿಗೆ ಪಡೆದಿರುವುದು. ವಿಶ್ವಕಪ್ನಲ್ಲಿ ಆಡುತ್ತಿರುವ ಆಟಗಾರರ ಪೈಕಿ ಬಟ್ಲರ್ ಅವರೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವುದು.