IPL ನಡೆಸಲು T20 ವಿಶ್ವಕಪ್ ಮುಂದೂಡುವಂತೆ ಸ್ಟಾರ್ ಕ್ರಿಕೆಟಿಗನ ಮನವಿ..!

ಆಸೀಸ್ ತಂಡ ಮಾಜಿ ನಾಯಕ ಅಲೆನ್ ಬಾರ್ಡರ್ ಕೂಡ ಟಿ 20 ವಿಶ್ವಕಪ್ ಅನ್ನು ಮುಂದೂಡುವ ಅಭಿಪ್ರಾಯವನ್ನು ಮುಂದಿಟ್ಟಿದ್ದರು. ಇನ್ನು ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್​ನ್ನು ಭಾರತದಲ್ಲಿ ನಡೆಸಿ, ಮುಂದಿನ ಆವೃತ್ತಿಯನ್ನು ಆಸ್ಟ್ರೇಲಿಯಾದಲ್ಲಿ ನಡೆಸುವಂತೆ ಸುನೀಲ್ ಗಾವಸ್ಕರ್ ಸಲಹೆ ನೀಡಿದ್ದರು.

First published:

  • 19

    IPL ನಡೆಸಲು T20 ವಿಶ್ವಕಪ್ ಮುಂದೂಡುವಂತೆ ಸ್ಟಾರ್ ಕ್ರಿಕೆಟಿಗನ ಮನವಿ..!

    ಕೊರೋನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್​ ಲೀಗ್​ನ್ನು ಅನಿರ್ದಿಷ್ಟವಧಿಗೆ ಮುಂದೂಡಲಾಗಿದೆ. ಒಂದು ವೇಳೆ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೂ ಐಪಿಎಲ್ ನಡೆಸಲು ಸಮಯ ಇಲ್ಲದಂತಾಗಿದೆ.

    MORE
    GALLERIES

  • 29

    IPL ನಡೆಸಲು T20 ವಿಶ್ವಕಪ್ ಮುಂದೂಡುವಂತೆ ಸ್ಟಾರ್ ಕ್ರಿಕೆಟಿಗನ ಮನವಿ..!

    ಏಕೆಂದರೆ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಹೀಗಾಗಿ ಅಕ್ಟೋಬರ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಮುಂದೂಡುವಂತೆ ಸಲಹೆ ನೀಡಿದ್ದಾರೆ ನ್ಯೂಜಿಲೆಂಡ್​ನ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕಲಂ.

    MORE
    GALLERIES

  • 39

    IPL ನಡೆಸಲು T20 ವಿಶ್ವಕಪ್ ಮುಂದೂಡುವಂತೆ ಸ್ಟಾರ್ ಕ್ರಿಕೆಟಿಗನ ಮನವಿ..!

    ಮಾರ್ಚ್ 29 ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಟೂರ್ನಿಯನ್ನು ಮುಂದೂಡಲಾಗಿದೆ. ಅತ್ತ ಆಸ್ಟ್ರೇಲಿಯಾದಲ್ಲೂ ಅಕ್ಟೋಬರ್ 18 ರಿಂದ ಆರಂಭವಾಗಬೇಕಿರುವ ಟಿ20 ವಿಶ್ವಕಪ್ ತಯಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದೆ.

    MORE
    GALLERIES

  • 49

    IPL ನಡೆಸಲು T20 ವಿಶ್ವಕಪ್ ಮುಂದೂಡುವಂತೆ ಸ್ಟಾರ್ ಕ್ರಿಕೆಟಿಗನ ಮನವಿ..!

    ಹೀಗಾಗಿ 2020 ವಿಶ್ವಕಪ್​ನ್ನು ಮುಂದಿನ ವರ್ಷದ ಆರಂಭದಲ್ಲಿ ಆಯೋಜಿಸಿ. ಹಾಗೆಯೇ ಅಕ್ಟೋಬರ್-ನವೆಂಬರ್ ವೇಳೆಯಲ್ಲಿ ಐಪಿಎಲ್ ಟೂರ್ನಿಯನ್ನು ನಡೆಸಲು ಅವಕಾಶ ಮಾಡಿಕೊಡುವುದು ಉತ್ತಮ ಎಂದು ಮೆಕಲಂ ಅಭಿಪ್ರಾಯಪಟ್ಟಿದ್ದಾರೆ.

    MORE
    GALLERIES

  • 59

    IPL ನಡೆಸಲು T20 ವಿಶ್ವಕಪ್ ಮುಂದೂಡುವಂತೆ ಸ್ಟಾರ್ ಕ್ರಿಕೆಟಿಗನ ಮನವಿ..!

    ಆಸ್ಟ್ರೇಲಿಯಾದಲ್ಲಿ ಕೊರೋನಾ ಭೀತಿ ನಡುವೆ ಖಾಲಿ ಮೈದಾನದಲ್ಲಿ ಟಿ20 ವಿಶ್ವಕಪ್ ಆಯೋಜಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಚುಟುಕು ವಿಶ್ವಕಪ್ ಮುಂದೂಡುವುದರಿಂದ ಖಾಲಿ ಮೈದಾನದಲ್ಲಿ ಪಂದ್ಯಾವಳಿ ನಡೆಸುವುದನ್ನು ತಪ್ಪಿಸಬಹುದು ಎಂದಿದ್ದಾರೆ.

    MORE
    GALLERIES

  • 69

    IPL ನಡೆಸಲು T20 ವಿಶ್ವಕಪ್ ಮುಂದೂಡುವಂತೆ ಸ್ಟಾರ್ ಕ್ರಿಕೆಟಿಗನ ಮನವಿ..!

    ಪ್ರಸ್ತುತ ಆಸ್ಟ್ರೇಲಿಯಾದಲ್ಲಿನ ನಿರ್ಬಂಧದಿಂದ 16 ದೇಶಗಳ ತಂಡಗಳು ಆಸ್ಟ್ರೇಲಿಯಾವನ್ನು ತಲುಪಲು ಸಹ ಸಾಧ್ಯವಾಗುವುದಿಲ್ಲ. ಹಾಗೆಯೇ ಐಪಿಎಲ್ ಆಡದಿದ್ದರೆ, ಯಾವುದೇ ಆಟಗಾರ ಅಥವಾ ಸಹಾಯಕ ಸಿಬ್ಬಂದಿಗೆ ವೇತನ ಸಿಗುವುದಿಲ್ಲ. ಇವೆಲ್ಲವನ್ನು ಗಮನದಲ್ಲಿರಿಸಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಮೆಕಲಂ ಹೇಳಿದರು.

    MORE
    GALLERIES

  • 79

    IPL ನಡೆಸಲು T20 ವಿಶ್ವಕಪ್ ಮುಂದೂಡುವಂತೆ ಸ್ಟಾರ್ ಕ್ರಿಕೆಟಿಗನ ಮನವಿ..!

    ಪ್ರೇಕ್ಷಕರಿಲ್ಲದ ಟಿ20 ವಿಶ್ವಕಪ್​ನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ ಎಂದು ಈಗಾಗಲೇ ಆಸ್ಟ್ರೇಲಿಯಾದ ಆಟಗಾರರಾದ ಗ್ಲೆನ್ ಮ್ಯಾಕ್ಸ್ ವೆಲ್, ಅಲೆಕ್ಸ್ ಕ್ಯಾರಿ ಇತ್ತೀಚೆಗೆ ಅಭಿಪ್ರಾಯ ಪಟ್ಟಿದ್ದರು.

    MORE
    GALLERIES

  • 89

    IPL ನಡೆಸಲು T20 ವಿಶ್ವಕಪ್ ಮುಂದೂಡುವಂತೆ ಸ್ಟಾರ್ ಕ್ರಿಕೆಟಿಗನ ಮನವಿ..!

    ಅಲ್ಲದೆ ಆಸೀಸ್​ನ ಮಾಜಿ ನಾಯಕ ಅಲೆನ್ ಬಾರ್ಡರ್ ಕೂಡ ಟಿ 20 ವಿಶ್ವಕಪ್ ಅನ್ನು ಮುಂದೂಡುವ ಅಭಿಪ್ರಾಯವನ್ನು ಮುಂದಿಟ್ಟಿದ್ದರು. ಇನ್ನು ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್​ನ್ನು ಭಾರತದಲ್ಲಿ ನಡೆಸಿ, ಮುಂದಿನ ಆವೃತ್ತಿಯನ್ನು ಆಸ್ಟ್ರೇಲಿಯಾದಲ್ಲಿ ನಡೆಸುವಂತೆ ಸುನೀಲ್ ಗಾವಸ್ಕರ್ ಸಲಹೆ ನೀಡಿದ್ದರು.

    MORE
    GALLERIES

  • 99

    IPL ನಡೆಸಲು T20 ವಿಶ್ವಕಪ್ ಮುಂದೂಡುವಂತೆ ಸ್ಟಾರ್ ಕ್ರಿಕೆಟಿಗನ ಮನವಿ..!

    IPL

    MORE
    GALLERIES