IPL 2020: ಸಾವಿನ ಸೂತಕದಿಂದಾಗಿ ಈ ಬಾರಿಯ ಐಪಿಎಲ್ನಿಂದ ಹೊರಬಂದ ಸುರೇಶ್ ರೈನಾ!
ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ರೈನಾ ಕೂಡ ನಿವೃತ್ತಿ ಘೋಷಿಸಿದರು. ಆದಾದ ಬಳಿಕ ಐಪಿಎಲ್ನಲ್ಲಿ ರೈನಾ ಈ ಬಾರಿ ಭರ್ಜರಿ ಪ್ರದರ್ಶನ ತೋರಿಸಲಿದ್ದಾರೆ ಎಂದು ಕ್ರಿಕೆಟ್ ಪ್ರಿಯರು ಅಂದುಕೊಂಡಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಡೆದಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಶಾಕ್ ನೀಡಿದಂತಾಗಿದೆ.
2/ 10
ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ರೈನಾ ಕೂಡ ನಿವೃತ್ತಿ ಘೋಷಿಸಿದರು. ಆದಾದ ಬಳಿಕ ಐಪಿಎಲ್ನಲ್ಲಿ ರೈನಾ ಈ ಬಾರಿ ಭರ್ಜರಿ ಪ್ರದರ್ಶನ ತೋರಿಸಲಿದ್ದಾರೆ ಎಂದು ಕ್ರಿಕೆಟ್ ಪ್ರಿಯರು ಅಂದುಕೊಂಡಿದ್ದರು.
3/ 10
ಆದರೀಗ ಸುರೇಶ್ ರೈನಾ 13ನೇ ಆವೃತ್ತಿಯ ಐಪಿಎಲ್ ನಿಂದ ಹಿಂದೆ ಸರಿದಿದ್ದಾರೆ. ವೈಯ್ಯಕ್ತಿಕ ಕಾರಣಕ್ಕಾಗಿ ರೈನಾ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿದೆ.
4/ 10
ಮತ್ತೊಂದೆಡೆ ರೈನಾ ಅವರ ಹತ್ತಿರದ ಸಂಬಂಧಿ ಅಶೋಕ್ ಕುಮಾರ್ ಎಂಬವರು ದರೋಡೆಕೋರರ ದಾಳಿಗೆ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
5/ 10
ಪಂಜಾಬ್ನ ಪಠಾಣ್ಕೋಟ್ ಜಿಲ್ಲೆಯ ತರಿಯಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದರೋಡೆಕೋರರು ಶಸ್ತ್ರಾಸ್ತ್ರದಿಂದ ಅಶೋಕ್ ಅವರ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ಗಾಯಗೊಂಡು ಮೃತಪಟ್ಟಿದ್ದಾರೆ
6/ 10
ಅಶೋಕ್ ಕುಮಾರ್ ಮನೆಯ ಟ್ಯಾರೇಸ್ ಮೇಲೆ ಮಲಗಿದ್ದರು. ಈ ವೇಳೆ ಕೇಲ್ ಕಚೆವಾಲಾ ಎಂಬ ಗ್ಯಾಂಗ್ ದಾಳಿ ಮಾಡಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
7/ 10
ಕೇಲ್ ಕಚೆವಾಲಾ ಗ್ಯಾಂಗ್ ನಡೆಸಿದ ದಾಳಿಯಿಂದ ಅಶೋಕ್ ಅವರ ತಾಯಿ ಸತ್ಯ ದೇವಿ, ಪತ್ನಿ ಆಶಾ ದೇವಿ, ಪುತ್ರರಾದ ಅಪಿನ್ ಮತ್ತು ಕೌಶಲ್ಗೆ ಗಾಯಗೊಂಡಿದೆ.
8/ 10
ಅಶೋಕ್ ಅವರ ಪತ್ನಿಗೂ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಟ್ರತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
9/ 10
ರೈನಾ ಅವರ ಹತ್ತಿರದ ಸಂಬಂಧಿ ಅಶೋಕ್ ಕುಮಾರ್ ಸರ್ಕಾರಿ ನೌಕರಾಗಿದ್ದರು.
10/ 10
ಸಂಬಂಧಿಕರ ಸಾವಿನ ಸುದ್ದಿ ತಿಳಿದು ಸುರೇಶ್ ರೈನಾ ಈ ಬಾರಿಯ ಐಪಿಎಲ್ನಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ.