ಕ್ರಿಕೆಟ್ ಅಂಗಳದ ಜಂಟಲ್ಮ್ಯಾನ್ ಎನಿಸಿಕೊಂಡಿರುವ ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಸುರೇಶ್ ರೈನಾ ಅವರ ಜೀವನಾಧಾರಿತ ಸಿನಿಮಾ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
2/ 7
ಈಗಾಗಲೇ ಎಂಎಸ್ ಧೋನಿ, ಕಪಿಲ್ ದೇವ್ (83 ಸಿನಿಮಾ), ಮೊಹಮ್ಮದ್ ಅಜರುದ್ದೀನ್ (ಅಜರ್ ಸಿನಿಮಾ) ಜೀವನಾಧಾರಿತ ಚಿತ್ರಗಳು ಮೂಡಿ ಬಂದಿವೆ. ಇದೀಗ ಈ ಪಟ್ಟಿಗೆ ರೈನಾ ಅವರು ಕೂಡ ಸೇರ್ಪಡೆಯಾಗಲಿದ್ದಾರೆ.
3/ 7
ಈ ಬಗ್ಗೆ ಖುದ್ದು ಸುರೇಶ್ ರೈನಾ ಮಾಹಿತಿ ತಿಳಿಸಿದ್ದು, ತಮ್ಮ ಜೀವನಾಧರಿತ ಚಿತ್ರ ನಿರ್ಮಿಸಿದರೆ ಯಾರು ನಾಯಕನಾಗಬೇಕೆಂಬುದನ್ನು ಕೂಡ ಬಹಿರಂಗಪಡಿಸಿದ್ದಾರೆ.
4/ 7
ಹೌದು, ರೈನಾ ತಮ್ಮ ಬಯೋಪಿಕ್ನಲ್ಲಿ ತಮಿಳಿನ ಖ್ಯಾತ ನಟ ಸೂರ್ಯ ಅಥವಾ ಮಲಯಾಳಂ ನಟ ದುಲ್ಭರ್ ಸಲ್ಮಾನ್ ನಾಯಕನಾಗಬೇಕು ಎಂಬ ಇಂಗಿತ ಹೊರಹಾಕಿದ್ದಾರೆ.
5/ 7
ಸೂರ್ಯ ಅವರು ನನ್ನ ಆಪ್ತರಲ್ಲಿ ಒಬ್ಬರು. ಅವರು ಕೂಡ ಕ್ರಿಕೆಟ್ ಪ್ರೇಮಿ. ಹೀಗಾಗಿ ನನ್ನ ಕಥೆಗೆ ಅವರು ಜೀವತುಂಬುತ್ತಾರೆ ಎಂಬ ವಿಶ್ವಾಸವಿದೆ. ಅದೇ ರೀತಿ ದುಲ್ಖರ್ ಕೂಡ ಉತ್ತಮ ಕಲಾವಿದ. ಅವರು ಕೂಡ ನನ್ನ ಬಯೋಪಿಕ್ನಲ್ಲಿ ಕಾಣಿಸಿಕೊಂಡರೆ ಉತ್ತಮ ಎಂದಿದ್ದಾರೆ ರೈನಾ.
6/ 7
ರೈನಾ ಅವರ ಈ ಹೇಳಿಕೆ ಬೆನ್ನಲ್ಲೇ ಕಾಲಿವುಡ್ನಲ್ಲಿ ಎಡಗೈ ದಾಂಡಿಗನ ಕಥೆಗೆ ಚಿತ್ರಕಥೆ ಸಿದ್ಧತೆಗಳು ನಡೆಯುತ್ತಿವೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಅಲ್ಲದೆ ಹೀಗಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ತಮ್ಮ ಬಯೋಪಿಕ್ ಬಗ್ಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
7/ 7
ಒಟ್ಟಿನಲ್ಲಿ ಧೋನಿ, ಅಜರ್ ಅವರ ತೆರೆಮರೆಯ ಕಹಾನಿ ನೋಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಸುರೇಶ್ ರೈನಾ ಅವರ ಜೀವನಚರಿತ್ರೆಯನ್ನು ಬೆಳ್ಳಿಪರದೆಯಲ್ಲಿ ವೀಕ್ಷಿಸುವ ಅವಕಾಶ ಶೀಘ್ರದಲ್ಲೇ ದೊರೆಯಲಿದೆಯಾ ಕಾದು ನೋಡಬೇಕಿದೆ.