IPL 2020: ಐಪಿಎಲ್ ಆರಂಭದ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್..!
IPL 2020: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮೇಲೆ ನಿಂತಿದೆ. ಏಕೆಂದರೆ ಟಿ20 ವರ್ಲ್ಡ್ಕಪ್ ಮುಂದೂಡಲ್ಪಟ್ಟರೆ ಅದೇ ದಿನಾಂಕದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಬಿಸಿಸಿಐ ಚಿಂತಿಸಿದೆ.
News18 Kannada | June 4, 2020, 3:50 PM IST
1/ 18
ರಂಗು ರಿಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ ಎನ್ನಲಾಗುತ್ತಿದೆ.
2/ 18
ಐಪಿಎಲ್ 13ನೇ ಆವೃತ್ತಿ ಈ ವರ್ಷ ನಡೆಯಲಿದೆಯಾ ಎಂಬ ಪ್ರಶ್ನೆಗೆ ಬಿಸಿಸಿಐ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
3/ 18
ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ಐಪಿಎಲ್ ಭವಿಷ್ಯ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮೇಲೆ ನಿಂತಿದೆ. ಏಕೆಂದರೆ ಟಿ20 ವರ್ಲ್ಡ್ಕಪ್ ಮುಂದೂಡಲ್ಪಟ್ಟರೆ ಅದೇ ದಿನಾಂಕದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಬಿಸಿಸಿಐ ಚಿಂತಿಸಿದೆ.
4/ 18
ಇದರ ಮಧ್ಯೆ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಗೆ ಬಿಸಿಸಿಐ ಹಲವು ರೀತಿಯಲ್ಲಿ ಕಸರತ್ತನ್ನು ನಡೆಸುತ್ತಿದೆ. ಆದರೆ ಸದ್ಯದ ಕೊರೋನಾ ಪರಿಸ್ಥಿತಿಯಿಂದ ಯಾವುದೇ ತೀರ್ಮಾನಕ್ಕೂ ಬರಲು ಐಪಿಎಲ್ ಆಡಳಿತ ಮಂಡಳಿಗೆ ಸಾಧ್ಯವಾಗಿಲ್ಲ ಎನ್ನಲಾಗಿದೆ.
5/ 18
ಇದರ ನಡುವೆ ಐಪಿಎಲ್ ಅನ್ನು ವಿದೇಶದಲ್ಲಿ ಆಯೋಜಿಸಲಾಗುತ್ತದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಈಗಾಗಲೇ ಟೂರ್ನಿಯ ಸಾರಥ್ಯವಹಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಾಗೂ ದುಬೈ ಸ್ಪೋರ್ಟ್ಸ್ ಅಥಾರಿಟಿ ಮುಂದೆ ಬಂದಿದೆ.
6/ 18
ಇತ್ತ ಭಾರತದಲ್ಲಿ ದಿನ ಕಳೆದಂತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸ್ಟೇಡಿಯಂನಲ್ಲಿ ಪ್ರೇಕ್ಷಕರಿಗೆ ಅವಕಾಶ ಸಿಗುವುದು ಬಹುತೇಕ ಡೌಟ್.
7/ 18
ಸದ್ಯ ಭಾರತದಲ್ಲಿ ಲಾಕ್ಡೌನ್ ಸಡಿಲಿಕೆಯಾಗಿದ್ದು, ಅದರೊಂದಿಗೆ ಎಲ್ಲಾ ರಾಜ್ಯಗಳಲ್ಲೂ ಅನ್ಲಾಕ್ ನಿಯಮಗಳು ಜಾರಿಗೆ ಬರುತ್ತಿವೆ. ಹೀಗಾಗಿ ಅನ್ಲಾಕ್ ಜಾರಿಯಲ್ಲಿರುವಾಗಲೇ ಐಪಿಎಲ್ ಆಯೋಜನೆಗೆ ಅನುಮತಿ ಸಿಗಲಿದೆ ಎನ್ನಲಾಗುತ್ತಿದೆ.
8/ 18
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಇಂಡಿಯನ್ ಪ್ರೀಮಿಯರ್ ಲೀಗ್ ಈ ವರ್ಷ ನಡೆಲಿದೆ ಎಂಬುದಕ್ಕೆ ಪರೋಕ್ಷ ಉತ್ತರ ನೀಡಿದ್ದಾರೆ. ಸದ್ಯ ಪರಿಸ್ಥಿತಿಯಲ್ಲಿ ಐಪಿಎಲ್ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಬಗ್ಗೆ ಬಿಸಿಸಿಐ ಸದಸ್ಯರೊಂದಿಗೆ ಚರ್ಚೆ ನಡೆಸಬೇಕಿದೆ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ತಿಳಿಸಿದ್ದಾರೆ.
9/ 18
ಅಲ್ಲದೆ ಭಾರತವು ಸಂಪೂರ್ಣ ಸುರಕ್ಷಿತ ಎಂದು ಘೋಷಣೆಯಾದ ಬಳಿಕ ಮಹತ್ವದ ಟೂರ್ನಿ ಆಯೋಜಿಸಲು ಅನುಮತಿ ಸಿಗಲಿದೆ. ಸದ್ಯಕ್ಕೆ ಈ ಬಗ್ಗೆ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಜನರ ಜೀವ ಉಳಿಸುವುದು ಮತ್ತು ವೈರಸ್ ಚೈನ್ ಬ್ರೇಕ್ ಮಾಡುವುದು ಬಹಳ ಮುಖ್ಯವಾಗಿದೆ.
10/ 18
ಹಾಗಾಗಿ ಫ್ರಾಂಚೈಸಿಗಳೊಂದಿಗೆ ಚರ್ಚಿಸಿ ಟೂರ್ನಿ ಆಯೋಜನೆಗೆ ಸ್ಥಳ ನಿಶ್ಚಯಿಸಬೇಕಾಗಿದೆ. ಸದ್ಯ ಈ ರೀತಿಯ ಯಾವುದೇ ಚರ್ಚೆಗಳು ನಡೆಯದೇ ಇರುವುದರಿಂದ ಈ ಬಗ್ಗೆ ಮಾತನಾಡಲಾಗುವುದಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದರು.
11/ 18
ಹಾಗಾಗಿ ಫ್ರಾಂಚೈಸಿಗಳೊಂದಿಗೆ ಚರ್ಚಿಸಿ ಟೂರ್ನಿ ಆಯೋಜನೆಗೆ ಸ್ಥಳ ನಿಶ್ಚಯಿಸಬೇಕಾಗಿದೆ. ಸದ್ಯ ಈ ರೀತಿಯ ಯಾವುದೇ ಚರ್ಚೆಗಳು ನಡೆಯದೇ ಇರುವುದರಿಂದ ಈ ಬಗ್ಗೆ ಮಾತನಾಡಲಾಗುವುದಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದರು.
12/ 18
ಹಾಗೆಯೇ 2014 ರ ಭಾರತದ ಲೋಕಸಭೆ ಚುನಾವಣಾ ನಿಮಿತ್ತ 20 ಪಂದ್ಯಗಳನ್ನು ದುಬೈನಲ್ಲಿ ನಡೆಸಲಾಗಿತ್ತು. ಇದರಿಂದ ಕೊರೋನಾ ಕಾರಣದಿಂದ ಬೇರೊಂದು ದೇಶದಲ್ಲಿ ಐಪಿಎಲ್ ಆಯೋಜಿಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದು ಹೇಳಲಾಗಿದೆ.
13/ 18
ಇದೀಗ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಕೂಡ ಈ ಬಗ್ಗೆ ಮಾತನಾಡಿದ್ದು, ತವರಿನಲ್ಲಿ ಐಪಿಎಲ್ ನಡೆಸುವುದು ಸುರಕ್ಷಿತ ಎಂದಾದರೆ ಮಾತ್ರ ಭಾರತದಲ್ಲಿ ಟೂರ್ನಿ ಆಯೋಜಿಸಲಾಗುತ್ತದೆ. ಒಂದು ವೇಳೆ ಇದಕ್ಕೆ ಆಯ್ಕೆಗಳಲ್ಲಿದ್ದಿದ್ದರೆ ಇಂಡಿಯನ್ ಪ್ರೀಮಿಯರ್ ಲೀಗ್ನ್ನು ವಿದೇಶದಲ್ಲಿ ಆಯೋಜಿಸಲಾಗುತ್ತದೆ ಎಂದಿದ್ದಾರೆ.
14/ 18
ಐಪಿಎಲ್ 2020 ನಡೆಯಲಿರುವುದು ಬಹುತೇಕ ಖಚಿತ, ಆದರೆ ಇನ್ನೂ ಕೂಡ ಅದನ್ನು ಎಲ್ಲಿ ನಡೆಸಬೇಕು ಎಂಬುದನ್ನು ನಿರ್ಧರಿಸಲಾಗಿಲ್ಲ. ಭಾರತದಲ್ಲಿ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಇಲ್ಲಿಯೇ ಆಯೋಜಿಸಲಾಗುತ್ತದೆ.
15/ 18
ಇದರ ಹೊರತಾಗಿ ವಿದೇಶದಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಸಿದ್ಧವಾಗಿದೆ . ಬಿಸಿಸಿಐ ಮೂಲಗಳಿಂದ ಈ ಮಾಹಿತಿ ಹೊರಬೀಳುತ್ತಿದ್ದಂತೆ ಈ ಬಾರಿಯ ಐಪಿಎಲ್ ವಿದೇಶದಲ್ಲಿ ನಡೆಯಲಿದೆ ಎಂಬ ಮಾತಿಗೆ ಪುಷ್ಠಿ ಸಿಕ್ಕಂತಾಗಿದೆ.
16/ 18
ಏಕೆಂದರೆ 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಹಾಗೇ 2014ರಲ್ಲಿ20 ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗಿತ್ತು.
17/ 18
ಏಕೆಂದರೆ 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಹಾಗೇ 2014ರಲ್ಲಿ20 ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗಿತ್ತು.
18/ 18
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜೂನ್ 10 ರಂದು ಟಿ20 ವಿಶ್ವಕಪ್ ಮುಂದೂಡುವ ಬಗ್ಗೆ ಸಭೆ ಕರೆದಿದ್ದು, ಅಲ್ಲಿಯವರೆಗೂ ಕಾದು ನೋಡಲು ಬಿಸಿಸಿಐ ಮುಂದಾಗಿದೆ. ಆ ಬಳಿಕವಷ್ಟೇ ಐಪಿಎಲ್ ಕುರಿತಾದ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.