ಶ್ರೀಲಂಕಾ ಇದುವರೆಗೆ 858 ಏಕದಿನ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 390 ಗೆಲುವು ಸಾಧಿಸಿದರೆ 428 ಸೋಲು ಅನುಭವಿಸಿದೆ. ಹಾಗೆಯೇ ಭಾರತ 993 ಏಕದಿನ ಪಂದ್ಯಗಳನ್ನು ಆಡಿದ್ದು ಅದರಲ್ಲಿ 427 ಸೋಲನುಭವಿಸಿದೆ. ಇಲ್ಲಿ ಶ್ರೀಲಂಕಾಗೆ ಹೋಲಿಸಿದರೆ ಭಾರತ 137 ಹೆಚ್ಚು ಪಂದ್ಯಗಳನ್ನು ಆಡಿದೆ. ಇದೀಗ ಭಾರತಕ್ಕಿಂತ ಶ್ರೀಲಂಕಾ ತಂಡ ಹೆಚ್ಚು ಸೋಲು ಕಾಣುವ ಮೂಲಕ ಕಳೆದ ಕೆಲ ವರ್ಷಗಳಿಂದ ಭಾರತದ ಹೆಸರಿನಲ್ಲಿದ್ದ ಕೆಟ್ಟ ದಾಖಲೆ ಲಂಕಾ ಪಾಲಾಗಿದೆ.