ಕೆಲ ದಿನಗಳ ಬಳಿಕ ಡೀನ್ ಜೋನ್ಸ್ ಅವರ ಹೇಳಿಕೆ ಬಗ್ಗೆ ಹಾಶಿಂ ಆಮ್ಲಾರನ್ನು ಕೇಳಲಾಯಿತು. ನಾನು ಸದಾ ಶಾಂತಿಯನ್ನು ಬಯಸುವವನು. ನನಗೆ ಯಾರ ಮೇಲೂ ದ್ವೇಷವಿಲ್ಲ. ಇದು ಡೀನ್ ಜೋನ್ಸ್ ವಿಷಯದಲ್ಲೂ ಕೂಡ. ಆತನನ್ನು ಅಂದೇ ನಾನು ಕ್ಷಮಿಸಿದ್ದೇನೆ ಎಂದು ತಿಳಿಸಿದ್ದರು. ಅಲ್ಲಿಗೆ ಮತ್ತೊಮ್ಮೆ ಶಾಂತ ಸ್ವರೂಪದ ಹಾಶಿಂ ಆಮ್ಲಾ ಕ್ರಿಕೆಟ್ ಇಸ್ ಜೆಂಟಲ್ಮ್ಯಾನ್ ಗೇಮ್ಗೆ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದ್ದರು.