ಕಪಿಲ್ ದೇವ್ ನಂತರ ಭಾರತಕ್ಕೆ ಕ್ರಿಕೆಟ್ ವಿಶ್ವಕಪ್ ತಂದುಕೊಟ್ಟ ಹೆಗ್ಗಳಿಕೆ ಎಂಎಸ್ ಧೋನಿಗೆ ಸಲ್ಲಿಕೆ ಆಗುತ್ತದೆ.
3/ 14
ಆದರೆ, 2019ರ ವಿಶ್ವಕಪ್ ಪೂರ್ಣಗೊಂಡ ನಂತರ ಧೋನಿ ಮತ್ತೆ ಮೈದಾನಕ್ಕೆ ಇಳಿದೇ ಇಲ್ಲ. ವಿಶ್ವಕಪ್ ಪೂರ್ಣಗೊಂಡು ನಾಲ್ಕುವರೆ ತಿಂಗಳಾದರೂ ಅವರ ಮುಂದಿನ ನಡೆಯೇನು ಎನ್ನುವುದು ಗುಟ್ಟಾಗಿಯೇ ಇದೆ.
4/ 14
ವಿಶ್ವಕಪ್ ಮುಗಿದ ನಂತರದ ದಿನದಿಂದಲೂ ಧೋನಿ ರಾಜೀನಾಮೆ ಪಡೆಯುತ್ತಾರೆ ಎನ್ನುವ ವಿಚಾರ ಸಾಕಷ್ಟು ಹರಿದಾಡುತ್ತಲೇ ಇದೆ. ಆದರೆ, ಈ ಬಗ್ಗೆ ಯಾರೊಬ್ಬರಿಂದಲೂ ಸ್ಪಷ್ಟನೆ ಸಿಕ್ಕಿಲ್ಲ.
5/ 14
ಇತ್ತೀಚೆಗೆ ಮಾತನಾಡಿದ್ದ ಧೋನಿ ಜನವರಿವರೆಗೆ ಏನನ್ನೂ ಕೇಳಬೇಡಿ ಎಂದು ಹೇಳಿದ್ದರು. ಈ ಮೂಲಕ ಅಡ್ಡಗೋಡೇ ಮೇಲೆ ದೀಪ ಇಟ್ಟಿದ್ದರು.
6/ 14
ಈಗ ಈ ವಿಚಾರವಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.
7/ 14
ಧೋನಿ ಭವಿಷ್ಯದ ಬಗ್ಗೆ ನಮಗೆ ಸಂಪೂರ್ಣ ಸ್ಪಷ್ಟತೆ ಇದೆ. ಆದರೆ, ಅದನ್ನು ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆ ನಡೆಸಲು ಸಾಧ್ಯವಿಲ್ಲ. ಸಮಯ ಬಂದಾಗ ನಿಮಗೆ ಎಲ್ಲವೂ ಗೊತ್ತಾಗಲಿದೆ ಎಂದರು.
8/ 14
ಇನ್ನು, ಧೋನಿ ಸಾಧನೆಯನ್ನು ಹೊಗಳಿರುವ ಧೋನಿ, ಅವರು ಭಾರತಕ್ಕೆ ಸಿಕ್ಕ ಓರ್ವ ಅದ್ಭುತ ಕ್ರೀಡಾಪಟು ಎಂದಿದ್ದಾರೆ.
9/ 14
ಏನಾಗುತ್ತದೆ ಎನ್ನುವುದನ್ನು ನೋಡೋಣ. ಅದಕ್ಕೆಲ್ಲ ತುಂಬಾನೇ ಸಮಯವಿದೆ. ಮೂರು ತಿಂಗಳಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ ಗಂಗೂಲಿ.
10/ 14
ಯಾವಾಗ ಕ್ರಿಕೆಟ್ಗೆ ಕಂಬ್ಯಾಕ್ ಮಾಡಲಿದ್ದೇನೆ ಎನ್ನುವ ವಿಷಯವಾಗಿ ಎಂಎಸ್ ಧೋನಿ ಕೊನೆಗೂ ಮೌನ ಮುರಿದಿದ್ದರು.
11/ 14
ಇದೇ ವಿಷಯವಾಗಿ ಧೋನಿ ಬಳಿ ಪ್ರಶ್ನಿಸಿದಾಗ 'ಜನವರಿವರೆಗೆ ನನ್ನ ಬಳಿ ಏನು ಕೇಳಬೇಡಿ' ಎಂಬ ಉತ್ತರ ನೀಡಿದ್ದರು.
12/ 14
ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಧೋನಿ, ಈ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿ ಜನವರಿ ವರೆಗೂ ತಂಡಕ್ಕೆ ಮರಳುವ ವಿಚಾರವನ್ನು ಕೇಳಬೇಡಿ ಎಂದಿದ್ದರು.
13/ 14
ವೆಸ್ಟ್ ಇಂಡೀಸ್, ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಮೈದಾನಕ್ಕಿಳಿಯದ ಮಾಹಿ, ತವರಿನಲ್ಲಿ ನಡೆಯಲಿರುವ ವಿಂಡೀಸ್ ಸರಣಿಯಿಂದಲೂ ಕಣಕ್ಕಿಯಲ್ಲ ಎಂಬ ವಿಚಾರ ಗೊತ್ತಾಗಿದೆ.
14/ 14
ಕೋಚ್ ರವಿಶಾಸ್ತ್ರಿ ಅವರು ನಿನ್ನೆಯಷ್ಟೆ ಧೋನಿ ವಿಚಾರವಾಗಿ ಮಾತನಾಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಧೋನಿ ನೀಡುವ ಪ್ರದರ್ಶನದ ಮೇಲೆ ಅವರ ಕ್ರಿಕೆಟ್ ಭವಿಷ್ಯ ನಿರ್ಧಾರವಾಗಲಿದೆ ಎಂದು ತಿಳಿಸಿದ್ದರು.
First published:
114
3 ತಿಂಗಳಲ್ಲಿ ಎಲ್ಲವೂ ಗೊತ್ತಾಗಲಿದೆ; ಧೋನಿ ರಾಜೀನಾಮೆ ಬಗ್ಗೆ ಗಂಗೂಲಿ ಅಚ್ಚರಿಯ ಹೇಳಿಕೆ