ಸೌರವ್ ಗಂಗೂಲಿ...ಟೀಮ್ ಇಂಡಿಯಾದ ಸರ್ವಶ್ರೇಷ್ಠ ನಾಯಕರುಗಳಲ್ಲಿ ಒಬ್ಬರು. ಯುವಪಡೆಯೊಂದಿಗೆ ಅದ್ಭುತವಾಗಿ ತಂಡ ಕಟ್ಟಿದ್ದ ದಾದಾ 20 ವರ್ಷಗಳ ಬಳಿಕ ಮತ್ತೊಮ್ಮೆ ಭಾರತವನ್ನು ವಿಶ್ವಕಪ್ ಫೈನಲ್ಗೇರಿಸಿದ್ದರು.
2/ 11
ಹೀಗೆ ಭಾರತೀಯ ಕ್ರಿಕೆಟ್ ರಂಗದಲ್ಲಿ ಹೊಸ ಕ್ರಾಂತಿಗೆ ಕಾರಣರಾಗಿದ್ದ ಸೌರವ್ ಗಂಗೂಲಿ ವಿಶ್ವಕಪ್-2003 ಬಗ್ಗೆ ಮನಬಿಚ್ಚಿದ್ದಾರೆ. ಯುವ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಜತೆಗಿನ ಶೋವೊಂದರಲ್ಲಿ ಐತಿಹಾಸಿಕ ಪಂದ್ಯದ ಬಗ್ಗೆ ಮಾತನಾಡಿದ್ದಾರೆ.
3/ 11
2003ರ ವಿಶ್ವಕಪ್ನಲ್ಲಿ ನಾವು ಅದ್ಭುತ ಪ್ರದರ್ಶನ ನೀಡಿದ್ದೆವು. ಆದರೆ ಆಗ ಆಸ್ಟ್ರೇಲಿಯಾ ಅತ್ಯುತ್ತಮ ತಂಡವಾಗಿತ್ತು. ಇಡೀ ಟೂರ್ನಿಯಲ್ಲಿ ನಾವು ಸೋತಿದ್ದು ಆಸ್ಟ್ರೇಲಿಯಾ ವಿರುದ್ಧ ಮಾತ್ರ.
4/ 11
ನಾವು ಸೋತಿರುವುದು ಕೂಡ ಬಲಿಷ್ಠ ತಂಡದ ವಿರುದ್ಧವಾಗಿತ್ತು. ಅಂದಿನ ನಮ್ಮ ತಂಡದ ಸಾಧನೆ ನಿಜಕ್ಕೂ ಅತ್ಯುತ್ತಮವಾಗಿತ್ತು ಎಂದು ಸೌರವ್ ಗಂಗೂಲಿ ತಿಳಿಸಿದರು.
5/ 11
ಇದೇ ವೇಳೆ 2019ರ ವಿಶ್ವಕಪ್ ತಂಡದಿಂದ ನೀವು ಮೂವರು ಆಟಗಾರರನ್ನು 2003ರ ತಂಡಕ್ಕೆ ಆಯ್ಕೆ ಮಾಡುವುದಾದರೆ ಯಾರನ್ನು ಸೇರಿಸಿಕೊಳ್ಳುತ್ತೀರಿ ಎಂದು ಮಯಾಂಕ್ ಕುತೂಹಲಕಾರಿ ಬೌನ್ಸರ್ ಪ್ರಶ್ನೆ ಎಸೆದರು.
6/ 11
ಇದಕ್ಕೆ ಗಂಗೂಲಿ ಕಡೆಯಿಂದ ಬಂದ ಉತ್ತರ... 2003 ರಂತೆ, 2019ರ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿ. ಈ ವೇಳೆ ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಪರಿಣಾಕಾರಿಯಾಗಿದ್ದರು. ಹೀಗಾಗಿ ಅವರಿದಿದ್ರೆ ತಂಡಕ್ಕೆ ಸಹಾಯಕವಾಗುತ್ತಿತ್ತು.
7/ 11
ಹಾಗೆಯೇ ಬ್ಯಾಟಿಂಗ್ನಲ್ಲಿ ಮೇಲಿಕ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಮಿಂಚಿದ್ದಾರೆ. ಅವರನ್ನು ಕೂಡ ಆರಿಸುತ್ತೇನೆ.
8/ 11
ಇನ್ನು ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡುತ್ತಿದ್ದೆ ಎಂದು ಗಂಗೂಲಿ ತಿಳಿಸಿದರು.
9/ 11
2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ನಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ರಿಕಿ ಪಾಟಿಂಗ್ ಅಬ್ಬರ ಶತಕದೊಂದಿಗೆ ನಿಗದಿತ 50 ಓವರ್ಗಳಲ್ಲಿ 359 ರನ್ ಪೇರಿಸಿತ್ತು.
10/ 11
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ಸೆಹ್ವಾಗ್ (82) ಅವರ ಏಕಾಂಗಿ ಹೋರಾಟದ ಹೊರತಾಗಿಯೂ 39.2 ಓವರ್ಗಳಲ್ಲಿ 234 ರನ್ಗೆ ಸರ್ವಪತನ ಕಾಣುವ ಮೂಲಕ 125 ರನ್ಗಳ ಸೋಲನುಭವಿಸಿತು. ಇದರೊಂದಿಗೆ ಗಂಗೂಲಿ-ದ್ರಾವಿಡ್-ಶ್ರೀನಾಥ್-ಕುಂಬ್ಳೆ ಸೇರಿದಂತೆ ಅನೇಕ ಆಟಗಾರರ ವಿಶ್ವಕಪ್ ಕನಸು ಕಮರಿತು.
11/ 11
ಗಂಗೂಲಿ ನೇತೃತ್ವದ ಅಂದಿನ ತಂಡ ಹೀಗಿತ್ತು: ವೀರೇಂದ್ರ ಸೆಹ್ವಾಗ್ , ಸಚಿನ್ ತೆಂಡೂಲ್ಕರ್ , ರಾಹುಲ್ ದ್ರಾವಿಡ್, ಮೊಹಮ್ಮದ್ ಕೈಫ್, ಯುವರಾಜ್ ಸಿಂಗ್, ದಿನೇಶ್ ಮೊಂಗಿಯ, ಜಹೀರ್ ಖಾನ್ , ಆಶಿಶ್ ನೆಹ್ರಾ, ಜಾವಗಲ್ ಶ್ರೀನಾಥ್, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ ಮತ್ತು ಅಜಿತ್ ಅಗರ್ಕರ್.