Sourav Ganguly: ದಾದಾ ಸಂಪೂರ್ಣ ಫಿಟ್: ಆಸ್ಪತ್ರೆಯಿಂದ ಸೌರವ್ ಗಂಗೂಲಿ ಡಿಸ್ಚಾರ್ಜ್
ಇದೇ ವೇಳೆ ಮಾತನಾಡಿದ ಗಂಗೂಲಿ ಆಸ್ಪತ್ರೆ ವೈದ್ಯಕೀಯ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ನಾನು ಸಂಪೂರ್ಣವಾಗಿ ಫಿಟ್ ಆಗಿದ್ದು, ಶೀಘ್ರದಲ್ಲೆ ನನ್ನ ಕರ್ತವ್ಯಕ್ಕೆ ಮರಳುತ್ತೇನೆ ಎಂದು ಅಭಿಮಾನಿಗಳತ್ತ ಕೈ ಬೀಸಿ ಮನೆಗೆ ತೆರಳಿದರು.
ಕಳೆದ ಶನಿವಾರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಇಂದು ಡಸ್ಚಾರ್ಜ್ ಆಗಿದ್ದಾರೆ.
2/ 8
ಹೃದಯಾಘಾತಕ್ಕೆ ಒಳಗಾದಾಗ ಗಂಗೂಲಿ ಅವರನ್ನು ತಕ್ಷಣವೇ ಕೋಲ್ಕತ್ತಾದ ವುಡ್ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಯಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯ ಬಳಿಕ ಗಂಗೂಲಿ ಸಂಪೂರ್ಣ ಪ್ರಜ್ಞಾ ಸ್ಥಿತಿಗೆ ಬಂದಿದ್ದರು.
3/ 8
ಸದ್ಯ ಸೌರವ್ ಗಂಗೂಲಿ ಇಂದು ಡಿಸ್ಚಾರ್ಜ್ ಆಗಿದ್ದಾರೆ.
4/ 8
ಇದೇ ವೇಳೆ ಮಾತನಾಡಿದ ಗಂಗೂಲಿ ಆಸ್ಪತ್ರೆ ವೈದ್ಯಕೀಯ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ನಾನು ಸಂಪೂರ್ಣವಾಗಿ ಫಿಟ್ ಆಗಿದ್ದು, ಶೀಘ್ರದಲ್ಲೆ ನನ್ನ ಕರ್ತವ್ಯಕ್ಕೆ ಮರಳುತ್ತೇನೆ ಎಂದು ಅಭಿಮಾನಿಗಳತ್ತ ಕೈ ಬೀಸಿ ಮನೆಗೆ ತೆರಳಿದರು.
5/ 8
ಜನವರಿ 2 ರಂದು ಲಘು ಹೃದಯಾಘಾತದ ಬಳಿಕ ಕೋಲ್ಕತ್ತಾದ ವುಡ್ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದ ಗಂಗೂಲಿ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
6/ 8
ಸುಮಾರು 15 ವೈದ್ಯರ ತಂಡ ಗಂಗೂಲಿ ಅವರ ಆರೋಗ್ಯ ತಪಾಸಣೆಯ ಬಳಿಕ, ಬುಧವಾರ ಅವರನ್ನು ಡಿಸ್ಚಾರ್ಜ್ ಮಾಡಲು ನಿರ್ಧರಿಸಿತ್ತು. ಆದರೆ ಗಂಗೂಲಿ ಅವರೇ ಮತ್ತೊಂದು ದಿನ ಆಸ್ಪತ್ರೆಯಲ್ಲಿ ಉಳಿಯುವ ಇಂಗಿತ ವ್ಯಕ್ತಪಡಿಸಿದ್ದರು.
7/ 8
ಗಂಗೂಲಿ ಅವರ ಆರೋಗ್ಯ ಸುಧಾರಿಸಿದ್ದು ಬಿಡುಗಡೆ ನಂತರ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ. ಅವರು ಶೀಘ್ರ ದಿನನಿತ್ಯದ ಸಹಜ ಜೀವನಕ್ಕೆ ಮರಳಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
8/ 8
ಗಂಗೂಲಿ ಅವರು ಹೃದಯ ವಂಶಾವಳಿಯಿಂದ ವರ್ಗಾವಣೆಯಾಗಿರುವ ಹೃದಯ ಸಮಸ್ಯೆ ಹೊಂದಿದ್ದರು. ಅವರು ಶನಿವಾರ ಮಧ್ಯಾಹ್ನ 1 ಗಂಟೆಗೆ ಆಸ್ಪತ್ರೆಗೆ ಬಂದಾಗ ಅವರ ನಾಡಿಮಿಡಿತ ನಿಮಿಷಕ್ಕೆ 70 ಬಾರಿ ಬಡಿಯುತ್ತಿತ್ತು. ಬಿಪಿ 130/80 ಎಂಎಂ ಹೆಚ್ಡಿ ಇತ್ತು. ಇಸಿಜಿ ಪರೀಕ್ಷೆಯಲ್ಲಿ ಹೈಪರ್ ಅಕ್ಯೂಟ್ ಎಸ್ಟಿ ವಿಭಾಗದಲ್ಲಿ ಏರುಪೇರಿರುವುದು ಪತ್ತೆಯಾಗಿತ್ತು.