ಆದರೆ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಫಾರ್ಮ್ನಲ್ಲಿ ಮಿಂಚುತ್ತಿದ್ದ ವಿವಿಎಸ್ ಲಕ್ಷ್ಮಣ್ ಅವರಿಗೆ ಸ್ಥಾನ ನೀಡಲಾಗಿಲ್ಲ. ಅತ್ಯುತ್ತಮ ಟೀಂ ಇಂಡಿಯಾ ಇಲೆವೆನ್ನಿಂದ ವೆರಿ ವೆರಿ ಸ್ಪೆಷಲ್ ಬ್ಯಾಟ್ಸ್ಮನ್ರನ್ನು ಕೈ ಬಿಟ್ಟಿರುವ ಬಗ್ಗೆ ವಾರ್ನ್ ಉತ್ತರಿಸಿದ್ದು, ನಾನು ಹನ್ನೊಂದು ಆಟಗಾರರನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದೇನೆ. ಇಲ್ಲಿ ಗಂಗೂಲಿಗೆ ನಾಯಕನ ಸ್ಥಾನ ನೀಡಬೇಕಿದ್ದರಿಂದ ಒಬ್ಬರನ್ನು ಹೊರಗಿಡಬೇಕಾಗಿತ್ತು. ಹೀಗಾಗಿ ಲಕ್ಷ್ಮಣ್ ಅವರನ್ನು ಕೈ ಬಿಟ್ಟಿರುವುದಾಗಿ ತಿಳಿಸಿದ್ದಾರೆ.