ಕೊಲ್ಕತ್ತಾದಲ್ಲಿ ನಡೆದ ರಣಜಿ ಟ್ರೋಫಿ ಪ್ಲೇಟ್ ಗ್ರೂಪ್ನ ಮೇಘಾಲಯ ಮತ್ತು ಮಿಜೋರಾಂ ನಡುವಣ ಪಂದ್ಯದಲ್ಲಿ ರನ್ ಸುರಿಮಳೆಯಾಯಿತು.
2/ 12
ಈ ಪಂದ್ಯದಲ್ಲಿ ಒಂದಲ್ಲ, ಮೂರು ಶತಕಗಳು ಮೂಡಿಬಂದಿದ್ದವು. ಅದರಲ್ಲಿ ಎರಡು ಡಬಲ್ ಸೆಂಚುರಿ ಎಂಬುದೇ ವಿಶೇಷ. ಈ ಮೂಲಕ ರಣಜಿ ಟ್ರೋಫಿಯಲ್ಲಿ ಮೇಘಾಲಯ ಮತ್ತು ಮಿಜೋರಾಂ ಪಂದ್ಯ ಹೊಸ ಇತಿಹಾಸ ಬರೆಯಿತು.
3/ 12
ಟಾಸ್ ಗೆದ್ದ ಮೇಘಾಲಯ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ತಂಡದ ಮೊತ್ತ 5 ರನ್ ಆಗಿದ್ದಾಗ, ಆರಂಭಿಕ ಆಟಗಾರ ನಾಂಗ್ಖ್ಲಾ 3 ರನ್ ಗಳಿಸಿ ಹೊರ ನಡೆದರು.
4/ 12
ಆ ಬಳಿಕ ಕ್ರೀಸ್ಗಿಳಿದ ಟೆಂಗ್ಚನ್ ಸಂಗ್ಮಾ, ದೀಪು ಸಂಗ್ಮಾ ಅವರೊಂದಿಗೆ ಇನ್ನಿಂಗ್ಸ್ ಕಟ್ಟಿದರು. ವೈಯಕ್ತಿಕ 38 ರನ್ಗಳಿಸಿ ಟೆಂಗ್ಚನ್ ವಿಕೆಟ್ ಒಪ್ಪಿಸಿದರು. ಆ ವೇಳೆ ತಂಡದ ಸ್ಕೋರ್ 105 ರನ್.
5/ 12
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ನಾಯಕ ಪುನೀತ್ ಬಿಶ್ತ್ 18 ರನ್ ಗಳಿಸಲಷ್ಟೇ ಶಕ್ತರಾದರು. ನಾಯಕನ ನಂತರ ಕ್ರೀಸ್ಗೆ ಇಳಿದ ರವಿ ತೇಜ- ದೀಪು ಸಂಗ್ಮಾ ಅವರೊಂದಿಗೆ ಇನಿಂಗ್ಸ್ ಕಟ್ಟಲು ಆರಂಭಿಸಿದರು.
6/ 12
ಈ ಜೋಡಿ 87 ರನ್ಗಳ ಜೊತೆಯಾಟ ಮೂಲಕ ರನ್ ಗತಿ ಏರಿಸಿದರು. ಈ ವೇಳೆ 160 ಎಸೆತಗಳಲ್ಲಿ 114 ರನ್ ಗಳಿಸಿದ ದೀಪು ಸಂಗ್ಮಾ ಔಟಾದರು.
7/ 12
ಇದೇ ವೇಳೆ ಜೊತೆಯಾದ ರವಿ ತೇಜ ಮತ್ತು ಸಂಜಯ್ ಯಾದವ್ ಮಿಜೋರಾಂ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು.
8/ 12
ರವಿ ತೇಜ ಮತ್ತು ಸಂಜಯ್ ಯಾದವ್ ದ್ವಿಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದ್ದರು. 260 ಎಸೆತಗಳಲ್ಲಿ 18 ಬೌಂಡರಿ ಮತ್ತು 1 ಸಿಕ್ಸರ್ಗಳೊಂದಿಗೆ ಅಜೇಯ ರವಿ ತೇಜ 204 ರನ್ ಗಳಿಸಿದರೆ, ಸಂಜಯ್ ಕೇವಲ 228 ಎಸೆತಗಳಲ್ಲಿ ಅಜೇಯ 254 ರನ್ ಗಳಿಸಿದ್ದರು.
9/ 12
ಇದರಲ್ಲಿ 23 ಬೌಂಡರಿ ಮತ್ತು 13 ಸಿಕ್ಸರ್ಗಳ ಸಿಡಿಸಿದ್ದರು. ಇವರಿಬ್ಬರ ಮನಮೋಹಕ ಆಟದ ಪರಿಣಾಮ ಮೇಘಾಲಯ ತಂಡ ನಾಲ್ಕು ವಿಕೆಟ್ಗೆ 662 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತು.
10/ 12
ಬ್ಯಾಟಿಂಗ್ನಲ್ಲಿ ಮಿಂಚಿದ್ದ ಮೇಘಾಲಯ ಬೌಲಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡಿದರು.
11/ 12
ಮಿಜೋರಾಂ ತಂಡದ ಮೊದಲ ಇನ್ನಿಂಗ್ಸ್ನ್ನು 114 ರನ್ಗಳಿಗೆ ಕಟ್ಟಿಹಾಕಿದ ಮೇಘಾಲಯದ ಆದಿತ್ಯ ಸಿಂಘಾನಿಯಾ ನಾಲ್ಕು ವಿಕೆಟ್ ಪಡೆದರೆ, ದ್ವಿಶತಕ ಬಾರಿಸಿದ ಸಂಜಯ್ ಯಾದವ್ ಮತ್ತು ಅಭಯ್ ನೇಗಿ ತಲಾ ಎರಡು ವಿಕೆಟ್ ಪಡೆದರು.
12/ 12
ಎರಡನೇ ಇನಿಂಗ್ಸ್ನಲ್ಲೂ ಮಿಜೋರಾಂ ತಂಡವನ್ನು 123 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಮೇಘಾಲಯ ತಂಡ ಈ ಪಂದ್ಯವನ್ನು ಇನಿಂಗ್ಸ್ ಮತ್ತು 425 ರನ್ಗಳ ಭಾರಿ ಅಂತರದಿಂದ ಗೆದ್ದುಬೀಗಿತು.