ಎರಡು ವರ್ಷಗಳ ಬ್ರೇಕ್ ನಂತರ ಟೆನ್ನಿಸ್ ಮೈದಾನಕ್ಕೆ ಇಳಿದ ಭಾರತದ ತಾರೆ ಸಾನಿಯಾ ಮಿರ್ಜಾ ಹೋಬರ್ಟ್ ಇಂಟರ್ನ್ಯಾಷನಲ್ ಮಹಿಳಾ ಡಬಲ್ಸ್ ಫೈನಲ್ನಲ್ಲಿ ಗೆದ್ದು ಪ್ರಶಸ್ತಿ ಬಾಜಿಕೊಂಡಿದ್ದಾರೆ.
2/ 15
ಉಕ್ರೇನ್ ಆಟಗಾರ್ತಿ ಕಿಚೆನೋಕ್ ಜೊತೆ ಚಾಂಪಿಯನ್ ಪಟ್ಟ ಅಲಂಕರಿಸಿರುವ ಸಾನಿಯಾ 6-4, 6-4 ಅಂತರದ ನೇರ ಸೆಟ್ಗಳಿಂದ ಚೀನಾದ ಝಾಂಗ್ ಶುಯಿ ಮತ್ತು ಪೆಂಗ್ ಶುಯಿ ಜೋಡಿಯ ವಿರುದ್ಧ ಗೆದ್ದು ಚಾಂಪಿಯನ್ ಆಯಿತು.
3/ 15
ಸುಮಾರು ಒಂದು ಗಂಟೆ 21 ನಿಮಿಷ ನಡೆದ ಈ ಪ್ರಶಸ್ತಿ ಕಾಳಗದಲ್ಲಿ ಸಾನಿಯಾ- ನಾಡಿಯಾ ಜೋಡಿ ನೇರ ಸೆಟ್ಗಳಿಂದ ಜಯ ಸಾಧಿಸಿತು.
4/ 15
ಈ ಮೂಲಕ 2017ರ ಬಳಿಕ ಆಡಿದ ಮೊದಲ ಟೂರ್ನಿಯಲ್ಲೇ ಸಾನಿಯಾ ಮಿರ್ಜಾ ಗೆಲುವಿನ ಆರಂಭ ಕಂಡಿದ್ದಾರೆ.
5/ 15
ಸಾನಿಯಾ ಹಾಗೂ ಕಿಚೆನೋಕ್ 75,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿದರು.
6/ 15
ಎರಡು ವರ್ಷಗಳ ಕಾಲ ಆಟದಿಂದ ಬ್ರೇಕ್ ಪಡೆದಿದ್ದ ಸಾನಿಯಾ ಮಿರ್ಜಾ 2018 ಮತ್ತು 2019ರ ಋತುವಿನಲ್ಲಿ ಕಣಕ್ಕಿಳಿದಿರಲಿಲ್ಲ.
7/ 15
ಐದನೇ ಶ್ರೇಯಾಂಕಿತ ಇಂಡೋ-ಉಕ್ರೇನಿಯನ್ ಜೋಡಿ ಸೆಮಿಫೈನಲ್ ಹಣಾಹಣಿಯಲ್ಲಿ ಸ್ಲೊವೇನಿಯನ್-ಜೆಕ್ ಜೋಡಿಯಾದ ತಮಾರಾ ಜಿಡಾನ್ಸೆಕ್ ಮತ್ತು ಮೇರಿ ಬೌಜ್ಕೋವಾ ಅವರನ್ನು 7-6 (3) 6-2 ಸೆಟ್ಗಳಿಂದ ಸೋಲಿಸಿ ಫೈನಲ್ಗೆ ಲಗ್ಗೆಯಿಟ್ಟಿದ್ದರು.
8/ 15
2007ರಲ್ಲಿ ಬ್ರಿಸ್ಬೇನ್ ಅಂತಾರಾಷ್ಟ್ರೀಯ ಟ್ರೋಫಿಯೊಂದಿಗೆ ಆರಂಭವಾದ ಸಾನಿಯಾ ಡಬಲ್ಸ್ ಆಟದಲ್ಲಿ ಇದುವರೆಗೆ 42 ಪ್ರಶಸ್ತಿ ಗೆದ್ದಿದ್ದಾರೆ.
9/ 15
ತನ್ನ ಮಗುವಿನ ಜೊತೆ ಸಾನಿಯಾ ಮಿರ್ಜಾ.
10/ 15
ಗಂಡ, ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆ ಸಾನಿಯಾ ಮಿರ್ಜಾ.